ಭೂಪಾರದೊಳಗೆ ಮದೀನಶಹರದೊಳು

ಭೂಪಾರದೊಳಗೆ ಮದೀನಶಹರದೊಳು
ವ್ಯಾಪಾರ ಮಾಡುವಾಗೀನ ಗಾಡಿಯೋ          ||ಪ||

ಕೂಪದೊಳು ಹರಿದಾಡುತಿಹ ಜಲ
ವ್ಯಾಪಿಸಿತು ಮುದ್ದಿನ ಸಲಾಕೆಯು
ರೂಪ ಬೆಂಕಿಯ ಪುಟವಗೊಳ್ಳುತ
ತಾಪದಿಂ ಸರಿಸ್ಯಾಡುತಿಹುದೋ                 ||ಆ.ಪ.||

ಸಧ್ಯಕ್ಕೆ ಕಾಶೀಮಸಾಹೇಬರ ಸಮರದಿ
ಮದ್ದು ಹೇರಿಸುವ ಆಗೀನ ಗಾಡಿಯೋ
ಚೋದ್ಯವಾಯಿತು ಚಮತ್ಕಾರದಿ
ಎದ್ದು ತಾನೇ ತಾನೇ ಬರುವುದು
ಗದ್ದಲದಿ ಸಾಗುವದು ಆದರೊಳು
ಇದ್ದಲಿಯ ಮಸಿಬಿದ್ದು ಬಯಲದಿ   ||೧||

ಅಬ್ಬರದಿಂದ ಮಕಾನದ ಹೊಲಕೆಲ್ಲ
ಗೊಬ್ಬರ ಹೇರುವ ಅಗೀನ ಗಾಡಿಯೋ
ಸಬ್ಬಯಲಿನೊಳು ಸರಸಿ ಬರುವಾಗ
ನಿಬ್ಬಯಲ ನಿಜತತ್ವ ಮಾಗ೯ದಿ
ಕೊಬ್ಬಿಕೊಂಡಿಹ ಕಮಲ ಚಕ್ರದಿ
ಗಬ್ಬಿನೊಳು ಗಮಕದಿ ಬರುವದೋ    ||೨||

ಕರ್ಬಲದೊಳಗೆಲ್ಲ ಕಟಗಿ ಹೊತ್ತು ಹಾಕಿ
ಉಬ್ಬೇರಿ ಬರುವ ಅಗೀನ ಗಾಡಿಯೋ
ಆರ್ಭಟಿಸಿ ಜಲವಾಯು ಸೂಸುತ
ಪೆರ್ಬುಲಿಯ ತೆರದಿಂದ ಒದರುತ
ಆಬ್ಬರದಿ ಹರದಾಡುವದು ಬಲು
ಹಬ್ಬಿಕೊಂಡಿತು ಹಲವು ಲೋಕದಿ     ||೩||

ಕ್ಷೋಣಿಪರಾಜನ ಶಹಾನ ದೊರಗಳ
ಠಾಣಿದೊಳಗಿರುವ ಅಗೀನ ಗಾಡಿಯೋ
ಪಾಣಿ ಅಲಗು ಸಮಸ್ತ ಆಯುಧ
ಕ್ಷೀಣವಿಲ್ಲದೆ ತುಂಬ ತವಕದಿ
ಬಾಣ ಬಿಲ್ಲುಗಳಿಡಿಸಿ ಬೇಗನೆ
ರಾಣಿ ಸರಕಾರ ಸದರಿನೊಳು           ||೪||

ಧರೆಯೊಳು ದಕ್ಷಿಣ ದೇಶದೊಳಗೆಲ್ಲ
ಅರಳಿ ಹೇರಿಸುವ ಅಗೀನ ಗಾಡಿಯೋ
ಸರಸದಿಂ ವಿಸ್ತರಿಸಿ ಪೇಳುವೆ
ವರ ಶಿಶುನಾಳಧೀಶನಾಜ್ಞೆಯ
ಮೆರೆಸಿದರು ಇಂಗ್ಲೀಷದೊರೆಗಳು
ಸರ್ವರಿಗೆ ಆಶ್ಚರ್ಯವಾಯಿತು         ||೫||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅಮ್ಮ ಎಂಬ ಮಾತಿಗಿಂತ ಬೇರೆ ಮಂತ್ರ ಎಲ್ಲಿದೆ?
Next post ಇಮ್ರಾನ್ ಗುಡಿಯಾ ಈಗ ಸಾನಿಯಾ ಚಡ್ಡಿ ಮ್ಯಾಗೆ ಕೆಂಗಣ್ಣು

ಸಣ್ಣ ಕತೆ

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…