Home / Kannada

Browsing Tag: Kannada

ನೀ ಯಾರೋ ನಾ ಯಾರೋ ಚೂರೂ ಅರಿಯದವರು ಕಂಡ ಕ್ಷಣವೆ ಆದವೇ ಜನ್ಮಾಂತರ ಗೆಳೆಯರು? ಕ್ಷಣ ಕ್ಷಣವೂ ಆಕರ್ಷಿಸಿ ಮನಮಿಡಿಯುವುದೇಕೆ? ಕಾಣದಿರಲು ಈ ಲೋಕ ಜಡ ಎನಿಸುವುದೇಕೆ? ಧ್ಯಾನ ಸ್ಮರಣೆ ಜಪಗಳಲ್ಲು ತೂರಿ ಬರುವುದೇಕೆ? ನಿನ್ನ ನಾನು ನನ್ನ ನೀನು ಹೀಗೆ ಕಾಡಬ...

ಅದೇ, ಆ ಹೂದೋಟದಲ್ಲಿ ನಿಂತ ನಿನ್ನ ಪ್ರತಿಮೆಯ ನೋಡಿ ಒಂದು ಎರಡು ಮೂರು ನಾಲ್ಕು ಸುತ್ತು ಹೊಡೆದು ಗಕ್ಕನೆ ನಿಂತಿತೊಂದು ಮಕಮಲ್ಲಿನ ಪಕ್ಷಿ ಕನ್ನಡದ ನೀರು ಕುಡಿದ, ಕಾಳು ತಿಂದ ಪಕ್ಷಿಯೇ ಇರಬೇಕದು ’ಕುವೆಂಪು’ ಎಂದಿತು ಎನಾಶ್ಚರ್ಯ! ಕುವೆಂಪುವಿನ ಹಸಿರ...

ಹೆಂಗಾತಪ್ಪಾ ಅಂದ್ರೆ ಕೊಮಾರಸ್ವಾಮಿ ಮಂತ್ರಿಮಂಡಲದ ವಿಸ್ತರಣೆ ಮಾಡಿ ಮೊದಲೇ ಉರಿತಿದ್ದ ಬೆಂಕಿಗೆ ತುಪ್ಪ ಹಾಕ್ದ ಅನ್ನಂಗಾಗೇತ್ ನೋಡ್ರಿ. ರೇವಣ್ಣನ್ನ ಮಂತ್ರಿ ಮಾಡಬೇಕಂತ ದೊಡ್ಡಗೋಡ್ರು ಯಾವಾಗ ಕಚ್ಚೆ ಕಟ್ಟಿಕ್ಯಂಡು ರಚ್ಚೆ ಹಿಡಿದ್ರೋ ತಡೆಯೋ ಗಂಡಾರ್...

ಏಕಿಂಥ ಬಿಗುಮಾನ ಬಾಗಿಲಾಚೆಯ ಮೌನ? ಹೊಸ್ತಿಲವರೆಗೂ ಬಂದು ನಿಂತು ಮುಖವ ಮರೆಸುವುದೇ ಇಂತು? ಹೇಳದೇ ಬರುವವರು ಕೇಳದೇ ಹೋಗುವವರು ಎಲ್ಲರಿಗಾಗಿ ವಿಸ್ತಾರವಾಗಿ ತರೆದೇ ಇದೆ ಬಾಗಿಲು. ನೀನು ಅತಿಥಿಯೂ ಅಲ್ಲ ದೇವಮಾನವನೂ ಅಲ್ಲ ನನ್ನದೇ ಕಳೆದು ಹೋದ ಒಂದು ತ...

ದಿನ ತುಂಬುವ ಮೊದಲೇ ತಾಯ ಕುತೂಹಲ ಕೆರಳಿಸಿ ತತ್ತಿಯೊಡೆದು ರಕ್ತಹರಿಸಿ ಮಾಂಸ ಮುದ್ದೆಯುರುಣ ಒಡಮೂಡಿದಂತೆ ಇವನು ಹುಟ್ಟಿದ್ದೇ ಹಸಿಬಿಸಿಯಾಗಿ ಯಾರಿಗೆ ತನ್ನ ಮೊದ್ದು ಮುಖವ ತೋರಿಸುವವಸರವೋ ಕೈಕಾಲು ಪೂರಾ ಅರಳದ ಮೊದಲೇ ಗರ್ಭದೊಳು ಹಳಹಳಿಸಿ ಭೂಮಿಗವತರಿ...

ಅಂದಿನ ವೈಭವ, ಆಳ್ವಿಕೆಯನ್ನು ಹೃದಯದಲ್ಲಿ ಭದ್ರವಾಗಿಟ್ಟುಕೊಂಡು ಸಾಕ್ಷಿಯಾಗಿ ನಿಂತಿರುವ ತುಂಗಭದ್ರೆ ನಾಸ್ಟಾಲ್ಜಕ್ಕಾಗಿಗಿ ಇದ್ದಾಳೆ ಎನಿಸುತ್ತೆ. ಒಮ್ಮೆ…..ಒಂದುಸಲ.. ಶ್ರೀಕೃಷ್ಣದೇವರಾಯರನ್ನ ನೋಡಿದರೆ…..ತಾ ಧನ್ಯಳಾದಂತಹ ಭಾವ ನಿರ...

ಅವಳು ಸುಂದರವಾದ ಹೆಂಗಸು. ಹೊಸದಾಗಿ ಕಾರಿಗೆ ಡ್ರೈವರ್ ಗೊತ್ತು ಮಾಡಿಕೊಂಡಳು. `ನಿನ್ನ ಹೆಸರೇನು? ಎಂದು ಡ್ರೈವರನನ್ನು ಕೇಳಿದಳು. `ನನ್ನ ಹೆಸರು ವೆಂಕಟೇಶ ನಾಯಕ್’ ಎಂದ. `ಅಡ್ಡ ಹೆಸರೂ ಇದೆಯೊ?’. `ಇದೆ ತಾಯಿ, ನನ್ನ ಅಡ್ಡ ಹೆಸರು ಪ್...

ತಾರೆ ತೇಲಿ ಬರುವ ರೀತಿ ತೀರ ಇರದ ಬಾನಿಗೆ ತೇಲಿ ಬಂದೆ ನೀನು ನನ್ನ ಮೇರೆ ಇರದ ಪ್ರೀತಿಗೆ ನಲ್ಲೆ ನಿನ್ನ ಬೆಳಕಿನಲ್ಲಿ ಬಿಚ್ಚಿ ತನ್ನ ದಳಗಳ ನಲಿಯಿತಲ್ಲೆ ಜೀವ ಹೇಗೆ ಸುತ್ತ ಚೆಲ್ಲಿ ಪರಿಮಳ! ಒಲಿದರೇನು ಜೀವ ಎರಡು ಮುನಿಯಿತಲ್ಲೆ ಲೋಕವೇ! ಕುಲುಮೆಯಾಯ್...

ಪಾಪ ! ಅವು ಸುಸ್ತಾಗಿಯೇ ಹಾರುತ್ತಿದ್ದರೂ ಮುದ್ದಾಗಿಯೇ ಕಾಣುವ ಹಕ್ಕಿಗಳು ತೀರ ಇತ್ತೀಚೆಗೆ ಒಮ್ಮಿಂದೊಮ್ಮೆಲೆ ಎಲ್ಲಿಯೋ ಹೋಗಿಬಿಟ್ಟವು. ಎಲ್ಲೆಲ್ಲೂ ಬೋರು ಹೊಡೆದ ಪುರಾವೆಗಳು ನೆಲದೊಡಲಾಳಕ್ಕಿಳಿದವು ಕೆರೆ ಒರತೆಗಳ ನೀರು ಪ್ರೀತಿ ಸ್ಪರ್ಷಿವಿಲ್ಲದ ಮ...

ಖೇಣಿಯ ನೈಸ್ ರಸ್ತೆ ಅಂಬೋದು ಅದೇಟು ನ್ನೆಸಾಗೈತೆ ಅಂದ್ರೆ ಅದ್ರಾಗೆ ನಡ್ಡಾಡಿದ್ರೆ ಜಾರಿ ಬೀಳ್ತಿವೇನೋ ಅನ್ನಂಗಾಗೇತ್ರಿ. ಖುದ್ ಗೋಡ್ರೇ ಡೀಲಿಗೆ ನಿಂತು ಶುರು ಹಚ್ಕಂಡ ನೈಸ್ ಯಾಪಾರ. ಬಡ ರೈತರ ಭೂಮಿ ಅನ್ಯಾಯವಾಗಿ ಲೂಟಿ ಆಗ್ಲಿಕ್ಕೆ ನಾ ಬಿಡಾಕಿಲ್ಲ....

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...