
ಹುಟ್ಟಿನಲಿ ಹೆಮ್ಮೆ ಕೆಲವರಿಗೆ, ನೈಪುಣ್ಯದ್ದು ಮತ್ತೆ ಕೆಲವರಿಗೆ, ಸಂಪತ್ತಿನೊಳು ಹಲವರಿಗೆ, ದೇಹದಾರ್ಢ್ಯದಲಿ ಇತರರಿಗೆ, ಹೊಂದದೆ ಇದ್ದೂ ಉಡುತೊಡುವ ಹೊಳಪಿನುಡುಪಗಳಲ್ಲಿ ಕೆಲವರಿಗೆ, ಬೇಟೆನಾಯಿಗಳಲ್ಲಿ, ಗಿಡುಗ ಕುದುರೆಗಳಲ್ಲಿ ಬಗೆಬಗೆಯ ಗೀಳು ಬಗೆಬ...
ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು ಲೋಕ ಕೆಳಗೊತ್ತುತಿರುವಾಗಲೇ ನನ್ನನ್ನು ನೀನೂ ಕೈಗೂಡಿಸಿ ಕೆಳತನಕ ಬಾಗಿಸು ; ಹಳೆಗಾಯಕೆಂದೂ ಹಾಕದಿರು ಹೊಸ ಬರೆಯನ್ನು. ಒಂದು ಕೊರಗಿಂದ ಎನ್ನೆದೆಯು ಹೊರಬಂದಿರಲು ಹಿಂದಿಂದ ಬಂದು ಬೇರೊಂದಕ್ಕೆ ಗುರಿಮಾಡಿ, ಬಿ...
ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು ದೂರಮಾಡಿದೆ ಎಂದು, ತಪ್ಟೊಪ್ಪಿಕೊಳ್ಳುವೆನು; ನನ್ನ ನ್ಯೂನತೆ ತಿಳಿಸು, ಅದರ ವಿರುದ್ಧ ಏನೂ ರಕ್ಷಣೆಗೆ ವಾದ ಹೂಡದೆ ತಿದ್ದಿಕೊಳ್ಳುವೆನು. ನನ್ನ ಬದಲಾವಣೆಯ ಬಯಸಿ ದೂರಲು ನೀನು ಮುಖಭಂಗವೇನಿಲ್ಲ ನನಗೆ, ನನ್ನ...
ಹೋಗಿ ಬರಲೇ ? ನನ್ನ ಕೈಗೆಟುಕದವ ನೀನು, ನೀನು ಸಹ ಬಲ್ಲೆ ನಿನ್ನೆತ್ತರವ, ಅದ ನುಡಿವ ರಾಜಸನ್ನದು ನಿನ್ನ ಮುಕ್ತನನು ಮಾಡಿದೆ. ನಾನು ನಿನ್ನಲ್ಲಿಟ್ಟ ಸ್ನೇಹ ಪ್ರೀತಿಗಳೆಲ್ಲ ಇನ್ನಿಲ್ಲ, ಇದ್ದೀತು ಹೇಗೆ ಒಪ್ಪದೆ ನೀನೆ ? ಈ ಭಾಗ್ಯಕ್ಕೇನು ಅರ್ಹತೆ ತಾನ...
ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು ? ಇರುಳ ಶಕ್ತಿಗಳ ನೆರವಿಂದ ಮರ್ತ್ಯರ ಮೀರಿ ಬರೆಯಬಲ್ಲವನ ಸತ್ವವೆ ನನ್ನಮೆಟ್ಟಿ...
ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ ಕೇಳುವಳು ನಿನ್ನ ಶ್ರೀಮಂತ ಪ್ರಶಂಸೆಯನು ; ಹೊನ್ನಿನಕ್ಷರಗಳ ಅಮೂಲ್ಯ ಪದ ಪಂಕ್ತಿಯಲಿ ಸಿಂಗರಿಸಿ ಎಲ್ಲ ಪ್ರತಿಭೆಗಳು ರಚಿಸಿದುದನ್ನು. ಒಳ್ಳೆನುಡಿ ಅವರು ಬರೆಯಲು, ನಾನು ಮನದೊಳಗೆ ಒಳ್ಳೆಯದ ಚಿಂತಿಸುವೆ. ಸತ್ವಶ...
ನನ್ನ ವಾಣಿಯ ನೀನು ವರಿಸಿದವನೇನಲ್ಲ ನಾ ಬಲ್ಲೆ ; ಹಾಗೆಂದೆ ಕಾವ್ಯಕ್ಕೆ ಕೃಪೆ ಬಯಸಿ ಕೃತಿಕಾರ ಬರೆದ ಅಂಕಿತದ ನುಡಿಯನ್ನೆಲ್ಲ ಬದಿಸರಿಸಬಹುದು, ನಿನಗಿಲ್ಲ ಯಾವುದೆ ತಡೆ. ಚೆಲುವನಿರುವಂತೆ ನೀ ಕುಶಲಮತಿಯೂ ಹೌದು, ಹಾಗೆಂದೆ ನನ್ನ ಮೆಚ್ಚಿಕೆಯಾಚೆ ಬೆಳೆ...
ನಿನ್ನ ಮಾತೆತ್ತಿದೆನೊ ಹುರುಪಳಿಸಿ ಕುಸಿಯುವೆನು, ನನಗು ಗಟ್ಟಿಗನೊಬ್ಬ ನಿನ್ನ ಹೆಸರನು ಬಳಸಿ ಸಮೆಸಿರುವ ಅದಕೆಂದೆ ತನ್ನೆಲ್ಲ ಸತ್ವವನು, ಕಟ್ಟಿಹೋಗಿದೆ ನನ್ನ ನಾಲಿಗೆಯೆ ನುಡಿಯಳಿಸಿ. ನಿನ್ನ ಗುಣಶೀಲ ಸಾಗರದಲ್ಲಿ ತೇಲುವುದು ಹಿರಿಜಹಜು ಕಿರುದೋಣಿ ಭೇ...
ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ ನನ್ನ ಹಾಡೊಂದಕೇ ನಿನ್ನೆಲ್ಲ ಕೃಪೆ ಇತ್ತು ; ಅಂಥ ಘನತೆಗಳಿಲ್ಲ ನನ್ನ ಕವಿತೆಗೆ ಈಗ ಕಳೆಗುಂದಿ ಅದರ ಸ್ಥಳ ಈಗ ಅನ್ಯರ ಸೊತ್ತು ಒಪ್ಪಿದೆನು ಒಲವೆ ನಿನ್ನೆಲ್ಲ ಪ್ರಿಯ ಚರ್‍ಚೆಗಳು ಮೇಲು ಪ್ರತಿಭೆಯ ಲೀಲೆಗರ್‍ಹವೆ...
ನನ್ನ ವಾಣಿಗೆ ಸಾರವಾಗೆಂದು ಮರಮರಳಿ ನಿನ್ನ ಕರೆಯುತ್ತ ಎಷ್ಟೆಲ್ಲ ಸ್ಫೂರ್ತಿಯ ಪಡೆದೆ, ಈಗ ಕಬ್ಬಿಗರೆಲ್ಲ ನನ್ನ ದಾರಿಗೆ ಹೊರಳಿ ಅವರ ಕವಿತೆಗೆ ನಿನ್ನ ನೆರಳಲ್ಲಿ ಮೆರವಣಿಗೆ. ನನ್ನಂಥ ಮೂಕನನೂ ಹಾಡಹಚ್ಚಿದ ಕಣ್ಣು ಇನ್ನಿಂಥ ದಡ್ಡನನೂ ಹಾರಹಚ್ಚಿದ ಚೆಲ...













