
ಬಚ್ಚಬರಿಯ ಬೆಳಗ ನೋಡಿಹೆನೆಂದು, ಮನೆಯಾತನ ಮಂಕು ಮಾಡಿದೆ. ಭಾವನ ಬಯಲು ಮಾಡಿದೆ. ಕಂದನ ಕಣ್ಣು ಮುಚ್ಚಿದೆ. ನಿಂದೆ ಕುಂದುಗಳ ಮರೆದೆ. ಜಗದ ಹಂಗ ಹರಿದೆ. ಜಂಗಮದ ಪಾದೋದಕ ಪ್ರಸಾದವ ಕೊಂಡ ಕಾರಣದಿಂದ ಮಂಗಳದ ಮಹಾಬೆಳಗಿನಲ್ಲಿ ಓಲಾಡಿ ಸುಖಿಯಾದೆನೈಯ್ಯ ಅಪ...
ಈ ಪರಂಜ್ಯೋತಿ ಪ್ರಕಾಶವಾದ ಬೆಳಗ ನೋಡಿ ನೋಟವ ಮೆರೆದೆ. ಕೂಡಿ ಕೂಟವ ಮರೆದೆ. ತಾನು ತಾನಾಗಿಪ್ಪ ಮಹಾಬೆಳಗಿನಲ್ಲಿ ಲೋಲಾಡಿ ಸುಖಿಯಾದೆನಯ್ಯ ಚನ್ನಮಲ್ಲೇಶ್ವರನ ಕರುಣವಿಡಿದು ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಕದಳೀಯ ಬನದೊಳಗಿರುವ ಲಿಂಗವ ಅರಸಿದರೆ ಕಾಣಬಾರದು. ನೋಡಿದರೆ ನೋಟಕ್ಕಿಲ್ಲ. ಹಿಡಿದರೆ ಹಸ್ತಕ್ಕಿಲ್ಲ. ನೆನೆದರೆ ಮನಕ್ಕಗೋಚರ. ಇಂತು ಮಹಾಘನವ ಹೃದಯಲ್ಲಿ ನೆಲೆಗೊಳಿಸಿದ ಶರಣನ ಕಂಗಳಲ್ಲಿ ಹೆರಿಹಿಂಗದೆ ನೋಡಿ, ಅವರಂಘ್ರಿಯಲ್ಲಿ ಐಕ್ಯವಾದೆನಯ್ಯ ಅಪ್ಪಣಪ್ರ...
ಅಂತರಂಗ ಬಹಿರಂಗ ಶುದ್ಧವಿಲ್ಲದೆ ನುಡಿವರು, ಸಂತೆಯ ಸೂಳಿಯರಂತೆ. ಅಂತರಂಗ ಬಹಿರಂಗವೆಂಬುದಿಲ್ಲ. ನಮ್ಮ ಶಿವಶರಣರಿಗೆ ಅಂತರಂಗವೆಲ್ಲ ಅರುಹಾಯಿತ್ತು. ಬಹಿರಂಗವೆಲ್ಲ ಲಿಂಗವಾಯಿತ್ತು. ಆ ಲಿಂಗದಲ್ಲಿ ನುಡಿದು, ಲಿಂಗದಲ್ಲಿ ನಡೆದು, ಲಿಂಗದಲ್ಲಿ ಮುಟ್ಟಿ, ...
ಅಂಗವೆಂದರೆ ಲಿಂಗದೊಳಡಗಿತ್ತು. ಲಿಂಗವೆಂದರೆ ಅಂಗದೊಳಡಗಿತ್ತು. ಅಂಗದೊಳಡಗಿದ ಲಿಂಗವನೆ ಕಂಗಳಲ್ಲಿ ಹೆರೆಹಿಂಗದೆ ನೋಡಿದರೆ, ಮಂಗಳದ ಮಹಾಬೆಳಗು ಕಾಣಿಸಿತ್ತು. ಇಂತಪ್ಪ ಮಂಗಳದ ಮಹಾಬೆಳಗ ತೋರಿದ ಶರಣಂಘ್ರಿಗೆರಗಿ ಸುಖಿಯಾದೆನಯ್ಯ ಅಪ್ಪಣಪ್ರಿಯ ಚನ್ನಬಸವಣ...
ಮುಕ್ತಿಯ ಪಥದನರಿವುದಕ್ಕೆ ತತ್ವದ ಭಿತ್ತಿಯ ಕಾಣಬೇಕು. ಚಿತ್ತ ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು. ಮರ್ತ್ಯದ ಮಾನವರ ಸಂಗವ ಹಿಂಗಬೇಕು, ತಾನುತಾನಾದ ಲಿಂಗೈಕ್ಯವನರಿವಡೆ ಅಪ್ಪಣಪ್ರಿಯ ಚನ್ನಬಸವಣ್ಣಾ. *****...
ಮರ್ತ್ಯದಲ್ಲಿ ಹುಟ್ಟಿ ಎತ್ತಲೆಂದರಿಯೆ. ಕತ್ತಲೆಯೊಳು ಮುಳುಗಿ, ಕಾಮನ ಬಲೆಯೊಳು ಸಿಲ್ಕಿದ ಎಗ್ಗ ಮನುಜರಿರಾ, ನೀವು ಕೇಳಿರೋ. ನಿಮ್ಮ ಇರವು ಎಂತೆಂದರೆ, ಕಾಯವೆಂದರೆ ಕಳವಳಕ್ಕೊಳಗಾಯಿತ್ತು. ಜೀವವೆಂದರೆ ಅರುಹು ಮರವೆಯೊಳಗಾಯಿತ್ತು. ಮನವೆಂದರೆ ಸಚರಾಚರವ...
ತನುವೆಂಬ ಹುತ್ತದಲ್ಲಿ, ಮನವೆಂಬ ಸರ್ಪ ಹೆಡೆಯನುಡಿಗಿ ಕೊಂಡಿರಲು, ಜ್ಞಾನಶಕ್ತಿ ಬಂದು ಎಬ್ಬಿಸಲು, ಉರಿ ಭುಗಿಲೆನುತ್ತ ಹೆಡೆಯನೆತ್ತಿ ಊರ್ಧ್ವಕ್ಕೇರಲು, ಅಷ್ಟಮದವೆಲ್ಲ ಹಿಟ್ಟುಗುಟ್ಟಿದವು. ಕರಣಂಗಳೆಲ್ಲ ಉರಿದು ಹೋದವು. ಇದ್ದ ಶಕ್ತಿಯನೆ ಕಂಡು, ಮನ ನ...
ಬಯಲು ದೇಹದಲ್ಲಿ ಒಂದು ತೊಲಗದ ಕಂಬವ ಕಂಡೆ. ಆ ತೊಲಗದ ಕಂಬವ ಹಿಡಿದು ಹೋಗುವನ್ನಕ್ಕ, ಮುಂದೆ ಸರೋವರವ ಕಂಡೆ. ಆ ಸರೋವರವ ಒಳಹೊಕ್ಕು ನೋಡಲು, ಮುಂದೆ ಗಟ್ಟಿ ಬೆಟ್ಟಗಳು ಹೋಗಬಾರದ ಆನೆಗಳು ಅಡ್ಡಲಾದವು. ಕೋಣ ಮುಂದುವರಿದವು. ನಾಯಿಗಳಟ್ಟಿಕೊಂಡು ಬಂದವು. ...
ಹೊತ್ತು ಹೊತ್ತಿಗೆ ಮತ್ತೆ ತಿಪ್ಪೆಯಲ್ಲಿ ಕರ್ಪುರವನರಸುವಂತೆ, ತಿಪ್ಪೆಯಂತಹ ಒಡಲೊಳಗೆ ಕರ್ತುವನರಸಿಹೆನೆಂಬ ಅಣ್ಣಗಳಿರಾ ನೀವು ಕೇಳಿರೋ, ಹೇಳಿಹೆನು. ಆ ಕರ್ತುವನರಸುವದಕ್ಕೆ ಚಿತ್ತ ಹೇಗಾಗಬೇಕೆಂದರೆ, ಜಲದೊಳಗಣ ಸೂರ್ಯನ ಪ್ರತಿಬಿಂಬದಂತಿರಬೇಕು. ಮೋಡವಿ...














