ಮುಕ್ತಿಯ ಪಥದನರಿವುದಕ್ಕೆ ತತ್ವದ ಭಿತ್ತಿಯ ಕಾಣಬೇಕು.
ಚಿತ್ತ ಲಿಂಗದಲ್ಲಿ ಅಚ್ಚೊತ್ತಿದಂತಿರಬೇಕು.
ಮರ್ತ್ಯದ ಮಾನವರ ಸಂಗವ ಹಿಂಗಬೇಕು,
ತಾನುತಾನಾದ ಲಿಂಗೈಕ್ಯವನರಿವಡೆ
ಅಪ್ಪಣಪ್ರಿಯ ಚನ್ನಬಸವಣ್ಣಾ.
*****