Home / Kavite

Browsing Tag: Kavite

ಕಪ್ಪು ಮಣ್ಣ ನೆಲದಲಿ ಘಮ್ಮೆಂದು ಸೂಸಿ ತೇಲುವ ಎಳೆ ಹಾಲು ತುಂಬಿ ಜೋಳದತೆನೆಗಳ ಅರಿವಿಗೆ ಪರಿವಿಗೆ ಮೊಗ್ಗೊಡೆದು ಜೀವದ ಹರವಿಗೆ ಗಾಳಿ ಜೇಕು ಹಾಕುತ್ತಿದೆ ತಣ್ಣನೆಯ ಸ್ಪರ್ಶ ಜೀವದಾಳಕೆ ಇಳಿಯಲು ಕಾಯಬೇಕು. ಯಾರು ಹುಕುಂ ಮಂಜೂರ ಮಾಡಿದರು ಮೊಳಕೆಯೊಡದೆ ...

ರಾತ್ರಿ ಕತ್ತಲೆಮನೆ ನೋವಲ್ಲಿ ಕನಸುಗಳು ಅಡರಿಸಿ ಬೆಳಂ ಬೆಳಕಿನ ಸೂರ್ಯನಿಗೆ ನೂರು ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ ಬೆತ್ತಲ ಬದುಕು ಮತ್ತೆ ತಲ್ಲಣ ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ. ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ ಜಗತ್ತು ನಾನು ...

ಯಶೋಧೆ ಕಂದ ಕೃಷ್ಣನಿಗೆ ಹೇಳುತ್ತಿದ್ದಳು ಪುಟ್ಟ ಹತ್ತ ಬೇಡ ಯದುಗಿರಿಯ ಬೆಟ್ಟ ಅದರ ಮೇಲೆ ಕೂಡಲಿ ಹಾಯಾಗಿ ಬಣ್ಣ ಬಣ್ಣದ ಹಕ್ಕಿಗಳು ಹಾಡಲಿ ಜೀವ ರಾಗಗಳ. ಕಂದ ನೀನು ಅಲ್ಲಿ ಸುಳಿದಾಡಬೇಡ ತೇಲಲಿ ಮೋಡಗಳು ಸುರಿಯಲಿ ತಂಪು ನಿಶ್ಯಬ್ದಗಳ ಗುಂಗು ಹಿಡಿದು ಹ...

ಹರಿದ ಸಂಜೆಯ ಗುಂಗು ಪರಿಮಳಕ್ಕೆ ಅರಳಿದ ಹೂ ಸುಳಿಸುಳಿದ ಬಯಲ ಬೆಟ್ಟಗಾಳಿ ನಾನಿನ್ನ ನೋಟದೊಳಗೆ ಇಳಿದು ನೀಲ ಬಾನಲಿ ಕಾಮನಬಿಲ್ಲು. ಅತ್ತ ಕಂದನ ಮೃದು ಕೆನ್ನೆಯಲಿ ಇಳಿದ ಹನಿಬಿಂದು ಎದೆಯ ಹಾಲು ನಿನ್ನುಸಿರು ತಾಗಿದ ನವಜೀವ ನಗುತ ಪ್ರೇಮದೌತಣ ಉಂಡು ಘನವ...

ಪ್ರತಿ ಕ್ಷಣದಲ್ಲಿ ಪ್ರೀತಿ ಅಲೆ ಅಲೆಗಳಲಿ ನಿರಾಳ ಪ್ರೇಮ ಹುಟ್ಟಿದ ತಂಪು ತೂಗಿ ತೂಗಿ ತಿಳಿಗಾಳಿ ಗದ್ದೆ ಬಯಲು ಎದೆ ತುಂಬಿ ಹಾಡಿದ ಸುಗ್ಗೀ ಪದ ಜೀವನ ಜನಪದ ಕಣ್ಣುಗಳರಳಿಂದ ಕಾಂತಿ ಹರಿಸಿದ ನೇತ್ರಾವತಿ. ಹರಿಯುವ ಹರಿಗೋಲು ಹಾಯ್ದು ಧಾರಿಣಿ ಮದು ಸೂಸಿ...

ನೇತ್ರಾವತಿ ಮೈ ತುಂಬಿಕೊಂಡ ಕರಿಚಂದ್ರ ಕಾಳ ಸೀರೆ ಎಲ್ಲೆಲ್ಲೂ ನಾನೀ ನೂಲಿನೆಳೆಯ ಕಸೂತಿ ಅದು ಕರುಳ ಬಳ್ಳಿ ಹಬ್ಬಹರಡಿ ಮುರಗಿ ಹೆಣಿಕೆಯ ವಂಕಿ ಚಿತ್ತಾರ ನಡೆಯ ನಾಜೂಕು ಹರವು ಖುಷಿ ಪ್ರೀತಿಯ ಕುಸುರಿ ಕಣ್ಣರಳಿ ಮದುವೆ ಮನೆ ಕೋಮಲ ಎಳೆಹಾಸು ಮೃದು ಮನದ ...

ಸದಾ ತನ್ನ ಆಕಾರ ಬದಲಿಸುತ್ತಾ ನೋಟಕ್ಕೆ ದಕ್ಕಿ ಕೈಗೆ ನಿಲುಕದ ಫಳ ಫಳ ಹರಿಯುವ ಹಾಸುಬೀಸು ತೆಂಗು ಸಾಲುಸಾಲು ಹಕ್ಕಿ ರೆಕ್ಕೆ ಬಿಚ್ಚಿ ತೇಲಿ ಬಂದು ಮೋಡವಿರದ ಶುಭ್ರನೀಲಿ ನೆಲಮುಟ್ಟದೇ ಅಲೆಯುತ್ತಿದ್ದಾಳೆ ನೇತ್ರಾವತಿ. ಗಾಳಿ ತೀಡಿ ಅಂತರಾಳದಿಂದ ನೆಲದಾ...

ನಿನ್ನ ನೆನಪಿನ ಬತ್ತಿ ಹೊಸೆದು ಹೊಸೆದು ಎದೆಯ ಹಾಲೆರೆದು ಪಣತಿಯ ಹಚ್ಚಿಟ್ಟೆ ಕಾರ್ತೀಕದ ಇರುಳ ಸಂಜೆಯ ಮರುಳಭಾವಕೆ. ಬಾ ನೀನು ಬೆಳಕಿನ ಗೆರೆಗುಂಟ ಮಾಡಿನ ಕದವ ತೆರೆದು ತೇಜ ತುಂಬಿದ ಹಾಸುಬೀಸು ಜೀವ ಜೀವದ ಬೆಸುಗೆ ಪ್ರೇಮ ರಾಗಕೆ. ಮಣ್ಣ ಕಡೆದ ಸಣ್ಣ ಮ...

ದೀಪವಾರಿಸಿದ ಕತ್ತಲೆ ಕೋಣೆಯಲಿ ಕಣ್ಣಿಗೆ ಏನೂ ಕಾಣಿಸುವುದಿಲ್ಲ ಬರೀ ನಿಟ್ಟುಸಿರು ಕೇಳುತ್ತದೆ. ಮಲಿನಗೊಂಡ ರಾತ್ರಿ ಕಪ್ಪಿನಲಿ ಹೂಗಳು ಅದ್ದಿ ಒದ್ದೆಯಾಗಿವೆ ಕಣ್ಣೀರಿನಲಿ ಇಬ್ಬನಿ ಹನಿಗಳು ಮಾಯವಾಗಿವೆ. ಕಣ್ಣಿನ ಕಾಡಿಗೆ ಕರಗಿ ಹೋಗಿಕೆನ್ನೆ ತುಂಬ ವಿ...

ಎಲೆ ಹಸಿರು ಹೂವು ಮುಡಿದು ಆಳ ನಿರಾಳಕ್ಕಿಳಿದ ಬೇರುಗಳ ಹರವಿ ಹರಡಿ ಹಾಸಿ ಬೀಸಿದ ತಂಗಾಳಿ ಬಯಲ ಬಾನ ತುಂಬ ತೇಲಿ ತೇಲಿಸಿದೆ ಹಾಸು ನಿಂತಮರ. ಹನಿಸುತ್ತದೆ ವರ್ಷವೈಭವದ ಸೊಗಸು ನಲಿದು ಒಲಿದು ಬಂದ ದುಂಬಿ ಝೇಂಕಾರ ಗಂಧ ಸುಗಂಧ ಮೀರಿ ಮಂದಸ್ಮಿತ ಬೀರಿಗಿಳ...

1...34567...9

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...