Home / ಮಲ್ಲಿಗೆದಂಡೆ

Browsing Tag: ಮಲ್ಲಿಗೆದಂಡೆ

ಸಬ್ಬಂಬು ರಾತೂರಿ ಒಬ್ಬಕ್ಕಿ ನಾ ಇದ್ದ| ನೀವೆಲ್ಲಿ ಹೋಗಿ ಬಂದ್ರಿಽ| ನೀವೆಲ್ಲಿ ಆಡಿ ಬಂದ್ರಿಽ ||೧|| ಜಾಣಿ | ಬೆಟ್ಟಂಬು ಬ್ಯಾಸಗಿ| ಕಣ್ಣೀಗಿ ನಿದ್ದಿಲ್ಲ| ತನುಗಾಳಿಗ್ಹೋಗಿದ್ದೇವ| ತನುಗಾಳಿಗ್ಹೋಗಿದ್ದೇವ ||೨|| ಎದಿಯ ಮ್ಯಾಲಿನ ಘಾಯಿ ಎಳಿಯ ಚಂದ್ರ...

ಹಣ್ಣ ಬಂದಾವ ಹೆಣ್ಣಾ ಮಗಿಯ ಮಾವಿನಽ ಹಣ್ಣ ಜಾಣಿ|| ಹಣ್ಣ ಕೊಳತೇವ ಹಣ್ಣಿನ ಬಿಲಿವಯ ಹೇಳ ಜಾಣಿ ||೧|| ಬೆಲಿಯ ಹೇಳುಽವ ಜಾಣಾ ಮಲ್ಲಾಡ ದೇಶಕ್ಹೋಗಿದನಲ್ಲೋ ಜಾಣಾ || ತಿಳಿಯಲಾರಽದ ಬೆಲಿಯ ನಾ ಏನ್ಹೇಳಾಲೊ ಜಾಣಾ ||೨|| ಕೆರಿಯ ಪಾಳ್ಯದ ಮ್ಯಾಲ ಕರಿಽ ಕಬ್...

ವಾರಿ ರುಮ್ಮಲ ಸುತ್ತಿ ಓಣ್ಯಾಗ ನಿಂತಾನ| ಹ್ವಾರ್ಯಾನಿಲ್ಲೇನೊ| ಹೊಲದಾಗ ಹೊಲದಾಗ| ಹ್ವಾರ್ಯಾನಿಲ್ಲೇನೊ || ಹ್ವಾರ್ಯಾನಿಲ್ಲಽ ಏನೊ ಹೊಲದಾಗ ಚಂದರಾಮಾ| ನಾರ್ಯಾರಿಲ್ಲೇನೊ| ಮನಿಯಾಗ ಮನಿಯಾಗ| ನಾರ್ಯಾರಿಲ್ಲೇನೊ |೧| ಮಕಮಕ ಮಲ್ಲೀಗಿ ಅದರಾಗ ಖ್ಯಾದೀಗಿ|...

ಎಡವೂರ ತಳದಲ್ಲಿ ಏನೇನ ಶಡಗರ ಎಡಕ ನಂದೀಕೋಲ ಬಲಕ ಪಲ್ಲಕಿ ಪಂಕ ಶಡಗರದ ಛತ್ತರಕಿ ಎಡಬಲ ಬತಾಗೀರಿ ಹಾರೂವ ಹೂಬಾಣ ಹೊಬತ್ತಿ ಕಂಡಿಽರಿ ಗುಗ್ಗಽಳದಾರೂತಿ ಗುಡಿಮುಂದ ಕಂಡಿಽರಿ ಶರಣಬಂದಯ್ಯಗ ಕರಣ ನೋಡಿ ಪೂಜಿಗೋಳ ಬನ್ನೆ ಜಯಮಂಗಳಽ ನಿತ್ಯ ಶಿನಮಂಗಳ ||೧|| ಹ...

ಇಟ್ಟೀಗಿ ಕಲ್ಲ ಮ್ಯಾಲ ಊರಿ ನಿಂತಾನೆರಡು ಪಾದ | ಜರದ ಮಂದೀಲ ಶಾಲ ಇಳಿಯ ಬಿಽಟ್ಟಾರ ಜೋಲ ನಾದ ಬ್ರಹ್ಮ ಮೇಘ ಶಾಮ ಸೃಷ್ಟಿ ಕರ್ತ ಸರ್ವ ಗೋಮ ಸಾದು ಸಂತಽರ ಪ್ರೇಮ ಹ್ಯಾಂಗ ನಿಂತಾರೆನಗ ಪೇಳಿರೇ | ಶ್ರೀಪಾಂಡುರಂಗ | ಹ್ಯಾಂಗ ನಿಂತಾರೆನಗ ಪೇಳಿರೇ ||೧|| ...

ಬಾಗಿಲದಾಗಿನ ಕೋಗಿಲ ಕೂಗಿ ಕೂಗಿ ಮರನೇರಿ | ನಾಗರ್‍ಹೆಡಿಯಂಗಾಡ್ಯಾವೇಳಯ್ಯಾ | ಸಿದ್ಧರಾಮಾ | ನಾಗರ್‍ಹೆಡಿಯುಗಾಡ್ಯಾವೇಳಯ್ಯಾ ||೧|| ಅತ್ತಿಽಯ ಮಽರನೇರಿ ಸತ್ತು ಸೊರಗಿ ನಾನೆ ಬಂದ | ಮುತ್ತಿನೊಸ್ತಾ, ತೋರ್‍ಯಾರೇಳಯ್ಯಾ | ಸಿದ್ಧರಾಮಾ | ಮುತ್ತಿ ನೊಸ...

ಗಂಧ ಕಸ್ತುರಿ ಪುನಗಽ | ಗೌರವ್ವನ | ಕಂದಗ ಧರಿಸಿದರಽ | ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ | ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ | ಮತಿಯ ಪಾಲಿಸೊ ಎನಗಽ | ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೧|| ರಾಜಾನ್ನ ಕೆನೆಮಸರಽ | ರುಚಿಗಾ...

1...345

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...