ನೂಲೊಲ್ಲ್ಯಾಕ ಚೆನ್ನೀ?

ಗಂಡ: ನೂಲಲ್ಯಾಕ ಚೆನ್ನೀ! ನೂಲಲ್ಯಾಕ ಚೆನ್ನೀ! ಹೆಂಡತಿ: ರಾಟಲಿಲ್ಲೋ ಜಾಣಾ! ರಾಟಲಿಲ್ಲೋ ಜಾಣಾ! ಕತೆಗಾರ: ಮನಿಯಾನ ಬಂಡೀ ಮುರಿಸಿ ಮನಿಯಾನ ಬಂಡೀ ಮುರಿಸಿ ರಾಟೀ ಮಾಡಿಸಿ ಕೊಟ್ಟಾ ರಾಟೀ ಮಾಡಿಸಿ ಕೊಟ್ಟಾ ಗಂಡ: ನೂಲಲ್ಯಾಕ...

ಶಾಂವಕ್ಕಿ ಕುಟ್ಟಂದ್ರ

ಶಾಂವಽಕ್ಕಿ ಕುಟ್ಟಂದ್ರ ಶರಽಗ್ಹಾಸಿ ಮಲಗ್ಯಾಳ| ಎಬಸಣ್ಣ ನಿನ್ನ ಮಡದೀನ| ಸೂವಯ್ಯಾ ||೧|| ಮಡದೀನ ಎಬಸಿದರ ಅರಸನಿದ್ದಿ ನಾದಾನ| ಎರಡೊಬ್ಬಿ ಮಾಡಿ ಥಳಸವ್ವಾ| ಸೂವಯ್ಯಾ ||೨|| ಎರಡೊಽಬ್ಬಿ ಮಾಡಿದರ ಕರಡಕ್ಕಿನಾದಾವ| ಕರಡಕ್ಕಿ ಜ್ವಾಳ ನುರಿಯಽವ| ಸೂವಯ್ಯಾ...

ಅತ್ತೆಸೊಸೆಯರ ಜಗಳ

ಅತ್ತಿ ಸಸ್ತೆರ ಜಗಳಾ ಹತ್ತು ವರುಷವು ಆಗಿ| ಬಿಚ್ಚಿ ಹೇಳ್ಯಾಳ ಮಾತ ತನ್ನ ಮಗನ ಮುಂದ| ಸೂಯಿ ||೧|| ಬಿಚ್ಚೀನೆ ಹೇಳ್ಯಾಳ ಮಗನ ಮುಂದ ಈವ ಮಾತಾ| ಬಿಟ್ಟಬಿಡೊ ಮಗನೆ ನಿನ್ನ ಮಡಽದೀನ| ಸೂಯಿ...

ತೊಟ್ಟಿಲಲ್ಲಿ ಹಾಕುವ ಹಾಡು

ಶಿಂದೀಗಿ ತಳದಳದಲ್ಲಿ ಸಂಗಮ್ಮನಽ ತಳ| ಶಂಭೋ ಮಠದೇವ ಇಂದುದಯನಾಗೊ| ಜೋ ಜೋ|| ಭಂಗಾರ ತೊಟ್ಟೀಲ ಧೊರಿತಾಯಿ! ಕುಂದಲ| ಸಿಂಗರದಾನ ಶ್ರೀಕೃಷ್ಣಗ ಛಂದಾಗಿ ತೂಗಾರಿ| ಜೋ...|| ಕರೆದು ಬಂದೆವು ಓಣಿ ನೆರೆದು ಬಂದಿತು ಮಂದಿ| ಬಂದು...

ಬೇನೆತಿನ್ನುವ ಹಾಡು

ಹುಟ್ಟಿದಂದೀಗಿ ಮೊದಲಽ ಹೊಟ್ಟಿಬ್ಯಾನೆಂಬೂದರಿಯ| ಹೊಟ್ಟಿ ಕುಟ್ಟಂದಾವಲ್ಲಽಽ ಎದ್ದಾಽಽವೇಳವ್ವಾ ಬ್ಯಾನಿ ತಾಳಲಾರೇನ ಬ್ಯಾನಿ ||೧|| ನಡ ಟೊಂಕ ಕೊಡಲೀಲಿ ಕಡದಂತ ತಡಬ್ಯಾನಿ| ಬದಿಲಿ ಕುಂತವ್ವಗಳಿರ್‍ಯಾ ಹಡಿ ಹಽಡೀ ಅಂದಾರಲ್ಲ| ಎದ್ದಾಽಽವೇ.... ||೨|| ಹೊತ್ತ ಹೊತ್ತೀನ ಬ್ಯಾನಿ...

ಉಡಿತುಂಬುವ ಹಾಡು

ಬಾಳಿಽಯ ಬನ ಚೆಲುವಽ| ಬಾಳಿಽಯ ಗೊನೊ ಚೆಲುವಽ| ಬಾಳ್ಯಾಗ ಇರುವ ಗಿಽಣಿ ಚೆಲುವಽಽ| ಸೋಬಾನಮ|| ಬಾಳಿಯಾಗಽಽ ಇರುವ ಗಿಣಿ ಚೆಲುವ ತಮ್ಮನ ಬಾಗಲಽ ಮಾಟ ಕರಚೆಲುವ| ಸೋ... ||೧|| ನಿಂಬೀಯ ಬನ ಚೆಲುವಾಽ| ನಿಂಬೀಯ...

ಬಯಕೆಯ ಹಾಡು

ಕಸಕಸಿ ಕೊಬ್ಬರಿ ಹಸನುಳ್ಳ ಜಿಲಿಬಿಲಿ| ಬಿಸಿಯ ಹೂರಣಗಡಬ ಬಿಳಿಯ ಬೆಲ್ಲಽಽ| ರಸಬಾಳಿ ಖಬ್ಬ ಸುಲಿದು ಮುಂದಿಟ್ಟರ| ಇಸಮಾಡಿ ಒಂದ ತುತ್ತ ತಿಂದೇನ ತಾಯಿ| ಬಂಕಿ ಕಾಡತಾವ ತಾಯಿ ಪರಿಪರಿಯಿಂದ ಬಂಕಿ ಕಾಡತಾವ ||೧|| ಆಕಳ...

ಕುಬಸಾ ಮಾಡೂ ಹಾಡು

ಒಂದಂಬು ತಿಂಗಳಿಗಿ ಒಂದೇನ ಬಯಸ್ಯಾಳ| ಅಂಗೈಯಲುಪ್ಪಾ ಎಳೆಹುಣಸಿ ||೧|| ಎರಡಂಬು ತಿಂಗಳಿಗಿ ಎರಡೇನ ಬಯಸ್ಯಾಳ| ಎರಡೆಲಿಗೊಂಡ ಎಳಿಮಾವ ||೨|| ಮೂರಂಬು ತಿಂಗಳಿಗಿ ಮೂರೇನ ಬಯಸ್ಯಾಳ| ಮೂಡಽಲ ದಿಕ್ಕಿಽನ ಮಗಿಮಾವ ||೩|| ನಾಕಂಬು ತಿಂಗಳಿಗಿ ನಾಕೇನ...

ಹಸುಮಗಳಽ ನೀಲಮ್ಮ

ಹಸುಮಗಳ ನೀಲಮ್ಮ ಬಸವಗ ಶರಣೆನ್ನ| ನಸಲಿ ಮಾರಗದ ವಡಿಯಾಗ| ಈ ಶರಣವು ಮಾಡಿ| ಹಸಿಗಿ ಬಾಗನ್ನಿ ಗರುಡಽವ ||೧|| ಹಕ್ಕಿ ಹಸಿಗೊಯ್ಯ ಕೋಗಿಲ ಪತ್ತಽಲೊಯ್ಯ| ಅಕ್ಕ ನಾಗಮ್ಮ ಕತೀ ನಡಿಸ| ಈ ಸೋಬಾನಾ| ಸಾಗನೂರವರ...

ಹಣಿಯೆಂಬೊ ಭಾಂವಕ

ಹಣಿಯೆಂಬೊ ಭಾಂವಕ ಹೆಣಿಯಂದ ದಂಡೀಯ| ಮಗ್ಗಿ ತಿರುವಂದ ಮಲಕೀಲಿ| ಸೋ ಎನ್ನೀರೆ ||೧|| ಹುಬ್ಬಂಬು ಭಾಂವಕ ತಿದ್ದೊಂದ ದಂಡೀಯ| ಗೊನಿಯ ತಿರುವಂದ ಮಲಕೀಲಿ| ಸೋ... ||೨|| ಕಡಗಽವ ಇಡಸ್ಯಾರ ಕಡಗಣ್ಣಿಲಿ ನೋಡ್ಯಾರ| ಕೊಡವೀಗಿ ತಮಗ...
cheap jordans|wholesale air max|wholesale jordans|wholesale jewelry|wholesale jerseys