Home / ಅವಧ

Browsing Tag: ಅವಧ

೧ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದರೆ-ಗೆಳತಿ ರೊಟ್ಟಿಯ ತಪ್ಪೇನೆ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದರೆ-ಗೆಳತಿ ತುಪ್ಪದ ತಪ್ಪೇನೆ ರೊಟ್ಟಿಯದು ತಪ್ಪಿಲ್ಲ ತುಪ್ಪದ ತಪ್ಪಿಲ್ಲ ಯಾರದು ತಪ್ಪಿಲ್ಲ-ಗೆಳೆಯ ಯಾರದು ತಪ್ಪಿಲ್ಲ ೨ ರೊಟ್ಟಿ ಜಾರಿ ತುಪ್ಪದಲ್...

ರುಕ್ಸಾನಾ ರುಕ್ಸಾನಾ ನನ್ನಂತರಂಗದ ಸುಲ್ತಾನಾ ಬಾಗಿಲಿಗೆ ಬಾರೆ ರುಕ್ಸಾನಾ ಮೆರವಣಿಗೆ ಹೊರಟಿದೆ ರುಕ್ಸಾನಾ ಮೆರವಣಿಗೆ ಹೊರಟಿದೆ ಬೀದಿಗೆ ಬಂದಿದೆ ಬೆಳ್ಳಿಯ ತೇರಿದೆ ಅಂಗಳದ ತುಂಬ ರುಕ್ಸಾನಾ ಆಲಿಕಲ್ಲುಗಳುಂಟು ರುಕ್ಸಾನಾ ಆಲಿ ಕಲ್ಲುಗಳುಂಟು ಆಲದ ನೆರ...

ನಿನ್ನ ಚುಂಬನದಲ್ಲಿ ಕಣ್ಣೀರ ಹನಿ ಬೆರೆತು ನನ್ನ ತುಟಿಗಳ ಮೇಲೆ ಮಾತು ಮರೆತು ಮುಗಿಯಿತಂದಿನ ಸಂಜೆ ಕತ್ತಲೆಯ ಹೊದ್ದು ಯುಗ ಯುಗದ ಗಾಢ ಮೌನದಲಿ ಬಿದ್ದು ಮತ್ತೆ ಬೆಳಕೊಡೆದು ಹುಡುಕಿದೆನು ಕಾಣಿಸದೆ ನಿನ್ನುಸಿರ ಪರಿಮಳವ ನೀನಳಿಸಿ ಹೋದೆ ಅಳಿಸುವೆನು ನಾನ...

ಯಾವುದಿಲ್ಲ ಯಾವುದುಂಟು ಎಲ್ಲ ನಂಟೂ ನನ್ನೊಳುಂಟು ಇಂಗ್ಲೇಂಡಿನ ಹಳಿಯಲ್ಲಿ ನಾ ಬಯಸುವ ಹೆಂಡವುಂಟು ಸ್ಪೇನ್ ದೇಶದ ಪೇಟೆಯಲ್ಲಿ ನಾ ಮೆಚ್ಚುವ ಹುಡುಗಿಯುಂಟು ಯಾರದೋ ಚೆಂದುಟಿಗಳಲ್ಲಿ ನಾ ಹಾಡುವ ಪದ್ಯವುಂಟು ಅರಬೀ ಸಮುದ್ರದಲ್ಲಿ ನಾನೇರುವ ನೌಕೆಯುಂಟು ವ...

ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ದಾರಿಯಲಿ ಕಾಲುಗಳು ಸೊಲದಂತೆ ಕಲ್ಲು ಮುಳ್ಳುಗಳು ತಾಗದಂತೆ ನನಗೆ ನನ್ನ ಬೊಬ್ಬರ್ಯ ಬೇಕು ಕೆಂಪು ಮಣ್ಣಿನ ಹಾದಿ ಬೇಕು ಬಾಯಾರಿ ದಣಿದು ಬೆಂಡಾಗದಂತೆ ನಡುದಾರಿಯಲಿ ಕುಸಿದು ಬೀಳದಂತೆ ನನಗೆ ನನ್...

ಮಸಾಲೆ ಕಡಲೆ ಜಗಿಯುತ್ತ ಸೌತೆ ಚೂರು ಮೆಲ್ಲುತ್ತ ಕಾಲೆಳೆಯುತ್ತ ಉಸುಕಿನಲ್ಲಿ ಮೂರು ಸಂಜೆಯ ಬೆಳಕಿನಲ್ಲಿ ಕವಿಯಿದ್ದಾನೆ ಎಲ್ಲರ ಹಾಗೆ ಕವಿಗಳಿರೋದೇ ಹಾಗೆ ಉಪ್ಪಿನ ಹವೆಗೆ ಒಪ್ಪಿಸಿಕೊಂಡು ಭಿಕ್ಷುಕರಿಂದ ತಪ್ಪಿಸಿಕೊಂಡು ಕಡಲಿನ ರಾಗವ ಹಿಡಿಯುತ್ತ ಬಡವರ...

ಸರಕಾರ ಬಯಸುತ್ತದೆ ಭಾವೈಕ್ಯ ಹಾಗೂ ರಾಷ್ಟ್ರಭಕ್ತಿ ಆಸ್ತಿಕ ಮಹಾಶಯರು ಬಯಸುತ್ತಾರೆ ಭವಬಂಧದಿಂದ ಮುಕ್ತಿ ಅಮೇರಿಕ ಮತ್ತು ರಷ್ಯ ಪರಸ್ಪರ ಧ್ವಂಸಗೊಳಿಸುವ ಅಸ್ತ್ರ ಬಡ ದೇಶಗಳು ಬಯಸುತ್ತವೆ ಅನ್ನ ಮತ್ತು ವಸ್ತ್ರ ವಿಮರ್ಶಕರು ಬಯಸುತ್ತಾರೆ ಸಾಮಾಜಿಕ ಹೊಣ...

ವಿವಸ್ತ್ರೆ ವಿವಿಯನ್ ಬಾತ್‌ಟಬ್ಬಿನ ಬೆಚ್ಚನೆ ನೀರಿನ ಖುಷಿಗೆ ಅರ್ಧ ನಿಮೀಲಿತ ನೇತ್ರೆ, ನಿಶ್ಚಲೆ; ಚೂಪಿಟ್ಟ ಕಠಿಣ ಮೊಲೆ ತೊಡೆ ಸಂದಿಯ ಕೂದಲ ಸುರುಳಿಗಳು ಬಿಟ್ಟು ಕೊಟ್ಟಿದೆ ತಮ್ಮನ್ನು ತಾವೆ ನೀರಿಗೆ ತೆರೆದೂ ತೆರೆಯದ ಯೋನಿ ಮುಚ್ಚಲಾರದೆ ಬಿಚ್ಚಿದಂ...

ಕೆಲಸವಿದ್ದವರು ಮಾತಾಡುತ್ತಾರೆ. ದಿನವೂ ಅನೇಕ ಕಾಗದ ಪತ್ರಗಳಿಗೆ ಸಹಿ ಹಾಕುವುದರಿಂದ ಬಹಳ ಬೇಗನೆ ಸುಸ್ತಾಗುತ್ತಾರೆ. ಪ್ರತಿ ಮುಂಜಾನೆ ನುಣುಪಾಗಿ ಗಡ್ಡ ಹರೆಯುವ ಇವರ ಮುಂದಿನ ಜೇಬಿನಲ್ಲಿ ಸೀಸನ್ ಟಿಕೇಟು ಹಿಂದಿನದರಲ್ಲಿ ಬಾಚಣಿಗೆ ಇಲ್ಲದವರು ಮೌನವಾಗ...

ತಿಂಗಳಿತ್ತಲ್ಲ ಒಂದು ಕ್ಷಣ ಹಿಂದೆ ಆಕಾಶದ ಅಂಗಳ ತುಂಬ ಕಣ್ಣ ಮಿಣುಕಿಸುವ ನಗುವ ನಕ್ಷತ್ರಗಳೂ ಇದ್ದುವು ಎಣಿಕೆಗೆ ಸಿಗದ ಅಕ್ಷಯ ರೂಪಿಗಳು. ನೋಡ ನೋಡುತ್ತ ಕರಿಯ ಮೊಡಗಳೆದ್ದು ಹರಿಹಾಯ್ದು ಸರಿ ರಾತ್ರಿಯಲಿ ಮಳೆ ಬಂತೇ ಬಂತು ತಣ್ಣನೆ ಗಾಳಿ ಹಿತವಾದ ಸೀರ...

1...34567...17

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....