Lakshminarayana Bhatta

ತಾಯೇ ನಿನ್ನ ಪ್ರೀತಿಯ ಬಾಗಿನ

ತಾಯೇ ನಿನ್ನ ಪ್ರೀತಿಯ ಬಾಗಿನ ಎಲ್ಲಕು ಮೀರಿದ್ದೆ, ಗಾಳಿ, ನೀರು, ಅನ್ನದ ರಕ್ಷೆ ಮಾತಿಗೆ ನಿಲುಕದ್ದೆ. ಕನ್ನಡದಂಥ ಕಂಪಾಡುವ ನುಡಿ ನಾಲಿಗೆಗೇರಿದ್ದು, ಪಂಪ ಕುವೆಂಪು ಕುಮಾರವ್ಯಾಸ ಬಂಧುಗಳಾದದ್ದು, […]

ಕರಗುವ ಇರುಳಿನ ಹಣೆಯಲ್ಲಿ

ಕರಗುವ ಇರುಳಿನ ಹಣೆಯಲ್ಲಿ ಮೂಡಲ ಗಿರಿಯ ಮಣೆಯಲ್ಲಿ ಹೂಳೆಯುವ ರತ್ನದ ಹಣತೆಯನು ಹಚ್ಚುವರಾರು ಮರೆಯಲ್ಲಿ? ಬೆಟ್ಟವು ಬಾನಿನ ಕಡೆಗೇಕೆ ತೊರೆಗಳು ತಗ್ಗಿನ ಕಡೆಗೇಕೆ? ನಭದಲಿ ತೇಲುವ ನೀಲಿ […]

ನೆತ್ತಿಯಲ್ಲಿ ಗಿರಿಛತ್ರಿಯನೆತ್ತಿದ ಶಕ್ತಿ

ನೆತ್ತಿಯಲ್ಲಿ ಗಿರಿಛತ್ರಿಯ ಎತ್ತಿದ ಶಕ್ತಿಗಿದೋ ನಮನ, ಸುತ್ತಲು ಸಾಗರವಸ್ತ್ರವ ಧರಿಸಿದ ಭರ್ತೆಗಿದೋ ನಮನ; ಕೋಟಿ ಕೋಟಿ ಕಣ್‌, ಕೋಟಿ ಕೋಟಿ ಕೈ ತಾಳಿ ನಿಂತರೂನು ಸಾಟಿಯಿಲ್ಲದಾ ಏಕರೂಪಾದ […]

ನಿನ್ನ ಗಾನದ ಸವಿಗೆ

ನಿನ್ನ ಗಾನದ ಸವಿಗೆ ನನ್ನೆದೆಯ ಬಾನಿನಲಿ ಆಡುವುವು ಮುಸ್ಸಂಜೆ ಮುಗಿಲು; ಹೊಂಬಿಸಿಲ ಕಾಂತಿಯಲಿ ಹಾಯುವುವು ಹಕ್ಕಿಗಳು ಬೆರೆಸುತ್ತ ಮುಗಿಲಲ್ಲಿ ನೆರಳು ಎದೆಯ ಗಾಯಗಳೆಲ್ಲ ಉರಿಯಾರಿ ಮಾಯುವುವು, ಹಾಯೆನಿಸಿ […]

ಮರವು ತೂಗಾಡಿದವು

ಮರವು ತೂಗಾಡಿದವು ಬಳ್ಳಿ ಓಲಾಡಿದವು ಹೂವು ನಕ್ಕವು ಕುಲುಕಿ ಮೈಯನೆಲ್ಲ, ಮಂದಮಾರುತ ಸುಳಿದು ಗಂಧವನು ಹಂಚಿದನು ನೀ ಬಂದೆ ಎನ್ನುವುದು ತಿಳಿಯಲಿಲ್ಲ ನದಿ ಹಾಡಿ ಓಡಿತು, ಬೆಳುದಿಂಗಳಾಡಿತು […]

ಹೆಮ್ಮೆ ನನಗೆ ಅಮ್ಮ

ಹೆಮ್ಮೆ ನನಗೆ ಅಮ್ಮ ನಿನ್ನ ತಾಯಿಯೆಂದು ಕರೆಯಲು ಕಂದನೆಂಬ ನಿನ್ನ ಪ್ರೀತಿ ಸವಿಯು ಜೇನಿಗಿಂತಲು ಏನು ತಾನೆ ಇದ್ದರೂ ನಿನಗೂ ಸಿರಿವಂತರು? ಬಲ್ಲೆ ನಾನೆ ಇರುವರೆಷ್ಟೋ ನಿನಗೂ […]

ಚಿಕ್ಕೆಯಾಗಿ ಒಳಗೆ ಹೊಳೆದು

ಚಿಕ್ಕೆಯಾಗಿ ಒಳಗೆ ಹೊಳೆದು ತುಟಿಗೆ ಬಾರದವನೆ, ಮಕ್ಕಳ ನಗೆಗಣ್ಣಿನಲ್ಲಿ ಬಾಗಿಲು ತೆರೆದವನೆ, ಉಕ್ಕುವ ಹೂಚೆಲುವಿನಲ್ಲಿ ಸೊಕ್ಕುವ ತೆನೆ ಪಯಿರಿನಲ್ಲಿ ಸಿಕ್ಕಿದಂತೆ ನಟಿಸಿ ಸಿಗದೆ ಎಲ್ಲೋ ಸಾಗುವವನೆ! ಆಡುವ […]