
ಸಂಕಟದ ಸುಳಿಗೆ ಸುಡುಗಾಡು ತೋರಿದ ನಿನ್ನ ಒಲವಿಗೆ ನಾನು ಚಿರಋಣಿ *****...
ಹಸಿವು ಸೋಲುವುದಿಲ್ಲ ರೊಟ್ಟಿ ಗೆಲ್ಲುವುದಿಲ್ಲ ಪಂದ್ಯವೆಂಬ ಭ್ರಮೆ ಹಸಿವು ರೊಟ್ಟಿಗೆ. ಆದರಿಲ್ಲಿ ಸೋಲು ಗೆಲುವುಗಳಿಲ್ಲ ದಾಖಲಾಗುವುದಿಲ್ಲ ಚಕ್ರ ತಿರುಗುತ್ತದೆ ರೊಟ್ಟಿ ಹಸಿವು ಕೈ ಹಿಡಿದು ಸುತ್ತಬೇಕಿದೆ ಜೊತೆ ಜೊತೆಗೇ. *****...
ಅವಳ ಮುನಿಸಿನೆದುರು ಜಗದ ಬಣ್ಣದ ದಿರಿಸು ಕಳಾಹೀನವಾಗಿದೆ *****...
ಬೀಗಬಾರದ ರೊಟ್ಟಿ ಬಾಗಲಾರದ ಹಸಿವು ರೊಟ್ಟಿ ಪ್ರಶ್ನಿಸುವಂತಿಲ್ಲ ಹಸಿವು ಉತ್ತರಿಸಬೇಕಿಲ್ಲ ಯಥಾಸ್ಥಿತಿಯ ಗತಿಯಲಿ ರೊಟ್ಟಿಗೆ ಮುಖವಾಡದ ಮೇಲೆ ಮುಖವಾಡ ಹಸಿವಿಗೆ ಗೆಲುವಿನ ಠೇಂಕಾರ. *****...
ಸತ್ಯದ ಹಾದಿಯಲ್ಲಿ ನಡೆದವನಿಗೆ ಸ್ಥಿರ ಸುಖ-ಸಂತೋಷ ಸುಳ್ಳಿನ ಹಾದಿಯಲ್ಲಿ ನಡೆದವಗೆ – ನಶ್ವರ *****...
ಅವಳು ಸಂಜೆಯಷ್ಟೇ ಸುಂದರ ಬೆಡಗು ಅಡಗಿದೆ ಬೆರಗು ಕರಗಿದೆ ಅಮೂರ್ತದ ಹಂದರ *****...













