Home / Tirumalesh KV

Browsing Tag: Tirumalesh KV

ನಾಯಿಗಳು ಬೊಗಳುತ್ತವೆ ಸಾಕಿದವರ ಏಳಿಗೆಗೆ ಕೋಳಿಗಳು ಹೋರಾಡುತ್ತವೆ ಮನೆತನದ ಹಿರಿಮೆಗೆ ಸ್ವಂತ ಜಗಳಾಡಿ ಬೇಸತ್ತವರು ಸೈನಿಕರ ಮೂಲಕ ಜಗಳಾಡುವರು ಇತರರ ಚದುರಂಗದಾಟದಲ್ಲಿ ತಮ್ಮ ಕುದುರೆಗಳನ್ನು ನಡೆಸುವರು ರತಿಯೆ ಆಸನಗಳು ಕೂಡ ಪರಿಮಿತವಾಗಿದ್ದರಿಂದ ನಾ...

ಸುಟ್ಚೆವು ನಾವು ಪ್ರತಿವರ್ಷದಂತೆ ಈ ವರ್ಷವೂ ಕಾಮ ಕ್ರೋಧಗಳನ್ನು ಮೊನ್ನೆಯೇ ಕೂಡಿ ಹಾಕಿದ್ದ ಒಣ ಕಟ್ಟಿಗೆಯ ರಾಸಿಯಲ್ಲಿ ಕಾಮನೋ ಅದೂ ಕುಂಟೆಕೊರಡು ಕೋಲುಗಳಿಂದ ಮಾಡಿದ್ದೆ–ಹಳೆ ಅಂಗಿ ತೊಡಿಸಿ ಕಣ್ಣುಬಾಯಿಗಳನ್ನು ಬರೆದಿದ್ದೆವು ವಿದೂಷಕನ ಹಾಗೆ ...

ಹುಷಾರು! ಕಪ್ಪೆಗಳನ್ನು ತಪ್ಪಿಯೂ ಕೆಣಕದಿರಿ! ಕತ್ತಲಲ್ಲಿ ಎಡವದಿರಿ—ಎಡವಿದರೆ ಒಡನೆ ಕಾಲಿಗೆ ಬಿದ್ದು ಮಾಫಿ ಕೇಳುವುದು! ಬರಲಿದೆ ಮಂಡೂಕಗಳ ರಾಜ್ಯ! ಗುಪ್ತಪಡೆಗಳು ತಯಾರಾಗುತ್ತಿವೆ ಯಾರಿಗೂ ಗೊತ್ತಾಗದಲ್ಲಿ ಕವಾಯತು ನಡೆಸುತ್ತಿದೆ! ನಾಲ್ಕೂ ಕ...

ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ ಹೊಸೆದು ಹಾಕುವ ಹೆಂಡತಿಯಿದ್ದಳು. ಪಕ್ಕದ ಪ್ರೈಮರಿ ಸಾಲೆಗೆ ...

ಕರಿ ಬೆಕ್ಕು ಬಿಳಿ ಬೆಕ್ಕಿಗೆ- ನೀನು ಬೆಳ್ಳಗಿರೋದರಿಂದ ಎಲ್ಲರೂ ನಿನ್ನ ಮುದ್ದು ಮಾಡ್ತಾರೆ ತೊಡೆ ಮೇಲೆ ಬೆಚ್ಚನೆ ಕೂರಿಸ್ತಾರೆ ಮಿಯೋಂ ಎಂದರೆ ಸಾಕು! ಹಾಲಿನ ತಟ್ಟೆ ನಿನ್ನೆ ಮುಂದಿರ್ತದೆ! ಅದಕ್ಕೆ ಬಿಳಿ ಬೆಕ್ಕು- ನೀನು ಕರ್ರಗಿರೋದರಿಂದ ಹಗಲು ಸರಿ...

(ಬಿ. ಜಿ. ಎಲ್. ಸ್ವಾಮಿಯ ನೆನಪಿಗೆ) ಹೆಸರು ತಿಳಿಯದ ವಸ್ತುಗಳು ಕಾಣಸಿಕ್ಕಿದರೆ ಹೆಸರಿಗಾಗಿ ಹುಡುಕುತ್ತೇವೆ. ಹೆಸರಿಲ್ಲದೆ ಗುರುತಿಸುವುದು ಗುರುತಿಸದೆ ಕರೆಯುವುದು ಅಸಾಧ್ಯ. ಸಾರ್ತೃ ತನ್ನ ಆತ್ಮಕಥೆಯಲ್ಲಿ ಹೀಗನ್ನುತ್ತಾನೆ: ವಿಶ್ವದ ವಸ್ತುಗಳೆಲ್ಲ...

ಅದೃಷ್ಟದ ರೇಖೆಗಳಿವೆ ನಿನಗೆ ವಿದೇಶಕ್ಕೆ ಹೋಗುತ್ತೀ ಅಲ್ಲದೆ ಎಷ್ಟು ಮೆತ್ತಗಿದೆ ಈ ಹಸ್ತ! ಎಲ್ಲರೂ ಒಲಿಯುತ್ತಾರೆ ನಿನಗೆ ಬಲಿಯಾಗುತ್ತಾರೆ ಹೆಬ್ಬೆರಳ ಬುಡದ ಈ ಎತ್ತರ ನೋಡು ಅದರ ಕೆಳಗಿನ ವಿಸ್ತಾರ ನೋಡು ಉಪನದಿಗಳಂತಹ ಈ ಗೆರೆಗಳು ಭಾಗ್ಯದ ಸೆರೆಗಳು ...

ಕರ್ನಾಟಕದ ೫೦ನೆಯ ರಾಜ್ಯೋತ್ಸವ ಸುವರ್ಣಕರ್ನಾಟಕ ಎ೦ಬ ಹೆಸರಿನಲ್ಲಿ ನವಂಬರ್ ಒಂದರನ್ನು ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಕರ್ನಾಟಕದಿಂದ ದೂರವಿರುವ ನಾನು ಇದರ ಕೆಲವು ಕಾರ್ಯಕ್ರಮಗಳನ್ನು ದೂರದರ್ಶನದ ಮೂಲಕ ವೀಕ್ಷಿಸಿದ್ದು ಮಾತ್ರ. ಈಟೀವಿ ಪ್ರಸ್ತು...

ಹೈದರಾಬಾದಿನಲ್ಲಿ ಜೂನ್ ಎಂದೊಡನೆ ಬೇಕಾದ್ದು ತಳತಳಿಸುವ ಗ್ಲಾಸುಗಳಲ್ಲಿ ತಂಪು ಪಾನೀಯಗಳ ಸುಖ ಮಾತಾಡುವುದಕ್ಕೆ ನೋಡುವುದಕ್ಕೆ ಅವರವರು ಬಯಸುವ ಮುಖ ಅದೃಷ್ಟವಿದ್ದರೆ ಆಗಾಗ ಸುಳಿಯುವ ಗಾಳಿ ಆ ಗಾಳಿಯಲ್ಲೆಲ್ಲೋ ತೆರೆಗಳ ತೇವ ಶಾಖದೊಂದಿಗೆ ಸಮ್ಮಿಳಿಸಿದ್...

ನನ್ನ ಕಾರೀಗ ಟೀಪಾಟ್ ಆಗಿದೆ ಇಲ್ಲದಿದ್ದರೆ ನೀನದನ್ನ ಉಪಯೋಸಬಹುದಿತ್ತು -ಎಂದಳು ಏಂಬರ್ ನಾನು ಭಾರತ ಬಿಡುವ ಮೊದಲು ಹೇಗೆ? ಹೇಗೆಂದರೆ ಹೇಗೆ- ಸಾರೋಟಾಗಲಿಲ್ಲವೆ ಕುಂಬಳ ಕಾಯಿ! ಏಂಬರಿನ ಕಾರಿಗೆ ದುಂಡನೆ ಹೊಟ್ಟೆ ಕೈಬಾಯಿ ಹಿತ್ತಾಳೆಯ ಮೈ ಬರುವುದನ್ನ ...

1...4041424344...63

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....