ನಾಯಿಗಳು ಬೊಗಳುತ್ತವೆ
ಸಾಕಿದವರ ಏಳಿಗೆಗೆ
ಕೋಳಿಗಳು ಹೋರಾಡುತ್ತವೆ
ಮನೆತನದ ಹಿರಿಮೆಗೆ

ಸ್ವಂತ ಜಗಳಾಡಿ ಬೇಸತ್ತವರು
ಸೈನಿಕರ ಮೂಲಕ ಜಗಳಾಡುವರು
ಇತರರ ಚದುರಂಗದಾಟದಲ್ಲಿ
ತಮ್ಮ ಕುದುರೆಗಳನ್ನು ನಡೆಸುವರು

ರತಿಯೆ ಆಸನಗಳು ಕೂಡ
ಪರಿಮಿತವಾಗಿದ್ದರಿಂದ ನಾವು
ನೆರಯವರ ವಿಷಯದಲಿ ಆಸಕ್ತರಾಗಿರುವುದು
ಸಹಜವೇ!
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)