ಉದ್ದ ಕೊಕ್ಕಿನ ಬೆಳ್ಳಕ್ಕಿಗೆ ಮೀನ ಹಿಡಿಯುವುದಕ್ಕಾಗಿಯೇ
ದೇವರು ಕೊಟ್ಟಿದ್ದಾನೋ ಈ ಕೊಕ್ಕು ಅಥವಾ
ಕೊಕ್ಕು ಉದ್ದಕ್ಕಿದೆಯೆಂಬುದಕ್ಕಾಗಿ ಇವು ಮೀನು
ಹಿಡಿಯುತ್ತವೆಯೋ ಗೊತ್ತಿಲ್ಲ ಸ್ಪಷ್ಟ.
ಸೃಷ್ಟಿ ರಹಸ್ಯವನ್ನು ಅಡಗಿಸಿಕೊಂಡಿರುವ
ಈ ಪ್ರಶ್ನೆಗೆ ಇದಮಿತ್ಥಂ ಎಂದು ಉತ್ತರ ಹೇಳುವುದು ಬಲು ಕಷ್ಟ.
ಅದೇನೇ ಇರಲಿ ತನ್ನ ದೂರ್ತತನವನ್ನೆಲ್ಲಾ ಬೆಳ್ಳಿರೆಕ್ಕೆಗಳೊಳಗೆ
ಮುದುರಿ ಮುಚ್ಚಿಕೊಂಡು ಮೀನುಗಳಿಗಾಗಿ ಹೊಂಚಿ, ಕೆರೆ ಅಂಚಿನಲ್ಲಿ
ಕುಳಿತಿರುವ ಈ ಹಕ್ಕಿಯ ಮುಗ್ಧ ಭಂಗಿಯನ್ನು
ನೋಡುವುದೆಂದರೆ ನನಗೆ ತುಂಬಾ ಇಷ್ಟ.
*****