Vachana

ಕಾಯುತಲೆಮ್ಮ ಬಂಧಿಸುವ ಸೂತ್ರವದಾವುದು ?

ಕೃಷಿಗೊಂದು ಕಟ್ಟಡಕೊಂದು ಕಾರ್‍ಖಾನೆಗೊಂದು, ಕಾಲಸೂಚಿಗೊಂದು ಕಾಣೀ ಜಗದೊಳೊಂದೊಂದಕೊಂದೊಂದು ಕೃತಿ ಸೂತ್ರವಾದೊಡಂ ಒಂದ ಕೊಂದಿನ್ನೊಂದು ಬದು ಕುವುದೇ ಕಾಲಸೂತ್ರವಿದರೊಳೆಲ್ಲವೂ ಬಂಧಿ – ವಿಜ್ಞಾನೇಶ್ವರಾ *****

ಬಲು ತಪದೊಳಾವ ತಪ ಶ್ರೇಷ್ಠ ?

ಕೆಲಸವಾವುದಾರದನು ಮನಕೊಟ್ಟು ಮಾ ಡಲದುವೆ ತಪವೆಂಬುದು ದಿಟವಾದೊಡಂ ಬಲು ತಪದೊಳುತ್ಕೃಷ್ಟ ಮರದಡಿಯ ತಪವು ಒಲವಿನೊಳೆಲ್ಲ ಮರವು ತಾನಿರ್‍ಪಲ್ಲೆ ತಪದೊಳಿ ರಲದನು ಗಣಿಸುವೆಲ್ಲ ಕರ್‍ಮವು ಯೋಗ್ಯ ತಪವೆನಲು – […]

ಭಾರಿ ಮರ ತರಿದರದು ಅನುಭಾವವೇ ?

ಬೀಳುತಿವೆಯನುಭವದ ಮರಗಳೊಂದೊಂದೆ ಬೆತ್ತಲೆಯ ಪೇಟೆ ಸಾಕಲಿಕೆಂದು ಬರಿದು ಓದಿನ ಕಾಗದವಿರಲಲ್ಲಿ ಮುಂದು ಬರಡು ಮರಗಳದೇಕೆಂದು ಕೇಳುವುದೆ ಭವದೊಳನುಭಾವವೆನಿಸಿಹುದು – ವಿಜ್ಞಾನೇಶ್ವರಾ *****

ಇಳೆಯ ಕಳೆ ಕಳೆದೇನು ಬೆಳೆವುದು ಹಣವ ?

ಕಳೆಯೆಂದೊಡದು ಇಳೆಯ ಜೀವಕಳೆಯಾದೊಡಂ ಮಳೆ ನೀರನದುವೆ ಇಂಗಿಸಲೆಮ್ಮ ಬಾವಿ ತುಂಬಿದೊಡಂ ಕಳೆ ತಾ ಬೆಳೆಯಲಾಗದೆಮ್ಮ ಬೆಳೆಗಿಂತ ಮೇಲೆ ಬೆಳೆದುದಾದೊಡೆಮ್ಮ ಬದುಕು ಹೆಮ್ಮರಂಗಳ ಮೇಲೆ ಬೆಳೆಯಲಾರದಾ ಹಣವು ಬದುಕಿಂದ […]

ಅದೇನು ಜಾನಪದದಧ್ಯಯನವೋ ಮೆಟ್ಟುಕಾಲಿನ ಪೇಟೆಯೊಳು ?

ಮೆದು ದೇಹ, ಮಧುಮೇಹದೊಳೊರಲಿದ ಜೀವ ಪಾದರಕ್ಷೆಯಿಲ್ಲದೊಂದು ಹೆಜ್ಜೆಯನಿಡಲಾಗದಾ ಓದಿಹರೊಮ್ಮೊಮ್ಮೆ ಜಾನಪದವನುದ್ಧರಿಪ ಮೊದ್ದು ಮಾತನಾಡಿದೊಡೇನುಪಯೋಗ ? ಪಾದದಚ್ಚುಳಿವಾರ್‍ದ್ರತೆಯಳಿಸಿ ಚಪ್ಪಲಡಿಯಿಟ್ಟಿರಲು – ವಿಜ್ಞಾನೇಶ್ವರಾ *****

ಜಾನಪದವಿದು ಜ್ಞಾನಪದವಿದನುಳಿಸುವುದೆಂತು ?

ಅನರಣ್ಯ ಪರಿಣಾಮದೊಳಿಂದು ಬೀಳ್ವಾ ಮಳೆಗೆಲ್ಲ ಮಣ್ ಕೊಚ್ಚಿ ಹರಿವಂತೆ ನಗರದೋದಿನ ಭರಕೆಲ್ಲ ಜಾನಪದ ಕರಗಿ ಕೆಂಪೇರುತಿರೆ ಬರಿಗಾಲ ನಡಿಗೆ ಯನುಭಾವವನೆಂತುಳಿಸುವರೋ ಬೂಟಿನುದ್ಯೋಗಿಗಳು ? ಜಾನಿಸುವೊಡಾ ಬೂಟೆ ಪದ […]

ತಂತ್ರಜ್ಞಾನದೊಳೇರಿಸಿದ ಕಲಾಭಿರುಚಿ ಆರೋಗ್ಯಕರವೇ?

ಸಂಗೀತ ಸಾಹಿತ್ಯ ನೃತ್ಯ ಚಿತ್ರ ಚಲಚಿತ್ರ ವಿಂತೆಲ್ಲ ಕಲಾ ತರಂಗಗಳು ಪ್ರಕೃತಿಯಂತ ರಂಗದೊಳಗಿಂದ ಅನುರಣಿಸಿದೊಡದನು ಸುಂದರ ವೆಂದೆನಬೇಕಲ್ಲದಿದೇನನುಗಾಲ ಪೇಟೆಯೊಳು ಕರಿದೆಣ್ಣೆ ಬೋಂಡ ತಿನುತಿರಲು ಸಿಡಿದೆಣ್ಣೆ ಕಲೆಯನೈಸಿರಿ ಎನ್ನುವುದೋ? […]

ಏನೊಂದುಂ ಕೃಷಿ ಸಾಹಿತ್ಯವಂದಿರಲಿಲ್ಲವದ್ಯಾಕೆ ಗೊತ್ತಾ ?

ಏನಿದೆಷ್ಟೊಂದು ಸಾಹಿತ್ಯ, ಕೃಷಿ ತಂತ್ರ ಪೇಳಲಿಕೆ ಇನ್ನೊಂದಷ್ಟು ಇಳುವರಿಯನೇರಿಸುತ ಉಬ್ಬಲಿಕೆ ಧ್ಯಾನಿಸುವೊಡೊಂದಷ್ಟು ಸಾಹಿತ್ಯ ಸಾಕೆಮಾತ್ಮನಡೆ ತಿದ್ದಲಿಕೆ ಹೀನವದೆಲ್ಲ ಯತುನವು ಬಾಹ್ಯ ಪ್ರಕೃತಿಯನೆಮ್ಮಂತೆ ಮಾಡಲಿಕೆ ಊನವಲಾ ಮದ್ದಿನೊಳಾರೋಗ್ಯ ಓದಿನೊಳಾಹಾರದ […]

ನೆಲಜಲವನರಿಯದೆ ಕೃಷಿಯೇನು? ಸಾಹಿತ್ಯವೇನು ?

ಅಲ್ಲೊಂದು ಇಲ್ಲೊಂದು ಸಿಕ್ಕಿದೊಂದೊಂದು ಮೌಲ್ಯದ ಬೀಜವನಿಟ್ಟು ಬೆವರನು ಕೊಟ್ಟು ನೆಲ ಜಲ ಬಲವನೇರಿಸಿಡೊಡದನು ಕೃಷಿಯೆನಲಕ್ಕು ಬಲ್ಲೊಡೆಲ್ಲ ಕೃಷಿ ನಿಯಮಗಳೆ, ಸಾಹಿತ್ಯಕ್ಕು ಒಲುಮೆ ಬರಿ ರೊಕ್ಕದೊಳಿರಲು ಕೊಳೆರೋಗವೆಲ್ಲದಕು – […]