ಮೆದು ದೇಹ, ಮಧುಮೇಹದೊಳೊರಲಿದ ಜೀವ
ಪಾದರಕ್ಷೆಯಿಲ್ಲದೊಂದು ಹೆಜ್ಜೆಯನಿಡಲಾಗದಾ
ಓದಿಹರೊಮ್ಮೊಮ್ಮೆ ಜಾನಪದವನುದ್ಧರಿಪ
ಮೊದ್ದು ಮಾತನಾಡಿದೊಡೇನುಪಯೋಗ ?
ಪಾದದಚ್ಚುಳಿವಾರ್‍ದ್ರತೆಯಳಿಸಿ ಚಪ್ಪಲಡಿಯಿಟ್ಟಿರಲು – ವಿಜ್ಞಾನೇಶ್ವರಾ
*****