ತಿಂಗಳ ಬೆಳಕಾ ಅಂಗಳ ಬೆಳ್ಗತಲೆ ಕೋಲಣ್ಣಾಕೋಲ |
ತಾಟಗಿತ್ತೀ ತಳವಾರ ಹುಡಗೀ
ಪ್ಯೇಟೆ ವಳಗೇ ಲಾಟೀನ ನೆಯತೆತಿ
ತಾಟಗಿತ್ತೀ ತಳವಾರ ಹುಡಗೀ ||
ರೊಕ್ಕಾದಾಗೆ ವಕ್ಕಲಗಿತ್ತೀ
ಕತ್ತ್ಲೆ ಕೋಣ್ಯಾಗೆ ಲೆಕ್ಕಾ ಯೆಣಸ್ತಳೆ ||
ತಾಟಗಿತ್ತಿ ತಳವಾರ್ ಹುಡುಗೀ |
ವಳ್ಳೆ ರೊಕ್ಕದಾಗ ವಕ್ಕಲಗಿತ್ತಿ
ವಳ್ಳೇ ಲೇಪೆ ತಡಿ ಹಾಸಿದಾಳ
ಕತ್ಲೀಕೋಣೀಗ ಕರೆತಾಳೆ ||
ವಳ್ಳೆ ಕೋಣ್ಯಾ ಗೆ ರೊಕ್ಕಾ ಎಣಿಸ್ತಳೆ
ಲೆಕ್ಕಾಯೆಣಿಸಿ ಮಡ್ಲಾಗೆ ಹಾಕ್ತಾಳೆ
ತಾಟಗಿತ್ತಿ ತಳವಾರ ಹುಡುಗೀ |
ಜಾತಿ ವಳಗೇ ಗಾಣಿಗರ ಹುಡಗೀ
ತಾಟಗಿತ್ತಿ ತಳವಾರ ಹುಡಗೀ ||
*****
ಹೇಳಿದವರು: ಪುಟ್ಟು ಪುಟ್ಟ ಗೌಡ, ಬಂಗಣೆ ಊರು, ೨೨/೫/೭೯