ಬರೆದವರು: Thomas Hardy / Tess of the d’Urbervilles
ರಾಣಿಗೆ ಮಲ್ಲಿಯನ್ನು ಕಂಡು ಪರಮಾನಂದ. ಅವಳಿಗೆ ಪ್ರಸ್ತ ವಾಗಿ ಹತ್ತು ವರುಷವಾಗಿದೆ. ಈಗ ದೇವರು ಕಣ್ಣು ಬಿಟ್ಟು ನೋಡಿ ದ್ದಾನೆ. ಮಲ್ಲಿಗೆ ತಾಯಿಯಾಗುವ ಯೋಗ ಬಂದಿದೆ.
ಈ ಸುದೀರ್ಘ ಕಾಲವಾದಮೇಲೆ ಗರ್ಭ ನಿಂತಿದೆ. ದೇವರೇ ಸುಖವಾಗಿ ಮೈ ಬಿಟ್ಟು ಕಳೆಯಲಿ. ಅಗಳೂ ಗಂಜಿ ಎರಡೂ ಉಳಿದು ಬೇರೆ ಬೇರೆಯಾಗಿ ಶುಭವಾಗಲಿ” ಎಂದು ದಿನ ದಿನವೂ ಹರಕೆ ಹೊರುವಳು ಆ ಪುಣ್ಯಾತ್ಮಗಿತ್ತಿ.
ಈಗ ಮೂವರೂ ಮೈಸೂರಿನಲ್ಲಿಯೇ ಇದ್ದಾರೆ. ನಾಯಕನು ವಾರಕ್ಕೆ ಎರಡುದಿವಸ ಕಾರಿನಲ್ಲಿ ಮುಜ್ಜಿಗೆಹಳ್ಳಿಗೆ ಹೋಗುತ್ತಾನೆ. ಹೋದರೂ ಬೆಳಿಗ್ಗೆ ಹೋಗುವುದು : ಸಂಜೆಯವರೆಗೂ ಇದ್ದು ಬಂದು ಬಿಡವುದು. ಲೇಡಿಡಾಕ್ಟರ್ ವಾರಕ್ಕೆ ಒಂದು ಸಲ ಬಂದು ಮಲ್ಲಿ ಯನ್ನು ನೋಡಿಕೊಂಡು ಹೋಗುತ್ತಾಳೆ. ಪ್ರತಿ ಶುಕ್ರವಾರ ಮಂಗಳ ವಾರ ನಾಯಕನ ಮನೆಯಲ್ಲಿ ರಾಣಿಯು ತಾನೇ ನಿಂತು ಸುವಾಸಿನಿ ಪೂಜೆ ಮಾಡಿಸುತ್ತಾಳೆ. ಮಂಗಳವಾರ ಇಬ್ಬರು, ಶುಕ್ರವಾರ ಐನರು ಸುವಾಸಿನಿಯರು ಮುಲ್ಲಿಯಿಂದ ಪೂಜೆಯನ್ನು ಪಡೆದು ಆಶೀರ್ವಾದ ಮಾಡಿ ಹೋಗುತ್ತಾರೆ. ಸುವಾಸಿನಿ ಪೂಜೆಯು ನಡೆದ ದಿನ ಮನೆಯಲ್ಲಿ ಪಾಯಸದ ಊಟ.
ಮೂರನೆಯ ತಿಂಗಳಲ್ಲಿ ಮೊದಲನೆಯ ಬಯಕೆ ಊಟ ನಡೆ ಯಿತು. ಆನಂದನ್ನು ಮಾತೃಸ್ಥಾನದಲ್ಲಿದ್ದು ಎಲ್ಲವನ್ನೂ ನಡೆಯಿ ಸಿದಳು. ಅಂದಿನರಾತ್ರಿ ಒಂದು ಆರತಕ್ಷತೆ,
ಆ ರಾತ್ರಿ ಮಲಗುವ ಮನೆಯಲ್ಲಿ ರಾಣಿಯು ನಾಯಕನ ಎದುರಿ ನಲ್ಲಿ ಮಲ್ಲಿಯನ್ನು “ಏನಮ್ಮ ನಿನ್ನ ಬಯಕೆ ? ” ಎಂದು ಕೇಳಿದಳು.
ಮಲ್ಲಿಯು “ನನಗೆ ಇರುವ ಆಸೆ ದೊಡ್ಡದೂ ಅಲ್ಲ ಚಿಕ್ಕದಂತೂ ಅಲ್ಲವೇ ಅಲ್ಲ” ಎಂದಳು.
” ಹಂಗಂದರೇನೇ ?”
“ಹೌದು ಬುದ್ದಿ. ದೇವರು ಮನಸ್ಸು ಮಾಡಿ ತಮಗೊಂದು ಗಂಡು ಆಗಬೇಕು.”
“ನನಗೆ? ಈಗ?”
” ಯಾಕೋ ಯಾಕಾಗಬಾರದು ? ಏನು ನಿಮಗೆ ಖುಷಿ ಪಂಚಮಿ ಆಗದೆಯಾ? ದೇವರ ಮನಸ್ಸಿಗೆ ಬಂದರೆ ಅದೇನೂ ದೊಡ್ಡ ದಲ್ಲ. ನಾನು ಇವೊತ್ತು ಹರಸಿಕೊಂಡಿದ್ದೀನಿ. ‘ನಮ್ಮ ದೊಡಮ್ಮ ನೋರೂ ಹೀಗೆ ಆರ್ತಿ ಮಾಡಿಸಿಕೊಳ್ಳಲಿ, ಬಸವೇಶ್ವರ, ನಿನಗೆ ಚಿನ್ನದ ಕಲಶ ಹಾಕಿಸಿತೀನಿ ಅಂತ’ ನಮ್ಮ ಮಜ್ಜಿಗೆ ಹಳ್ಳಿ ಬಸವಣ್ಣ ಸತ್ಯ ವಂತ. ಚಿನ್ನದ ಕಲಶ ಹಾಕಿಸಿಕೊಳ್ಳುತ್ತಾನೆ”.
“ಆಯಿತು, ಆಮೇಲೆ?”
“ಒಂದು ಸಲ ಗಾಂಧಿಯವರನ್ನು ನೋಡಿ ಬರಬೇಕು.”
“ಅದೇನು ದೊಡ್ಡದಲ್ಲ: ಯಾವಾಗಲಾದರೂ ಆಗಬಹುದು.”
” ಅದಷ್ಟು ಸುಲಭಾನೇ?
“ಅದೇನು ಕಷ್ಟಾನೇ ?”
ಇದೇನು ಅಕ್ಕಯ್ಯ, ಹಿಂಗಂತೀರಿ? ಬುದ್ಧಿಯೋರು ಬರದೆ ನಾವು ಹೋಗೋ ಹಂಗಿಲ್ಲ. ಬುದ್ದಿಯೋರು ಬಂದರೆ ಅವರ ಮೇಲೆ ಬ್ರಿಟಷ್ ಸರ್ಕಾರಕ್ಕೆ ಬಂತು ಸಂಶಯ. ಅವರು ಅದೇನು ಕಿರುಕುಳ ಕೊಟ್ಟಾರೋ? ಯಾಕೆ ಮೇಷ್ಟರು ಅಂದು ನಿಮ್ಮೆದುರಿಗೇ ಹೇಳ ಲಿಲ್ಲವಾ? ನಾನು ಹೋಗಿ ಬಂದ ಕಡೇಲೆಲ್ಲಾ ಸಿ. ಐ. ಡಿ. ಗಳು. ನಾನು ಇನ್ನು ಮೇಲೆ ನಿಮ್ಮ ಮನೆಗೆ ಬರೋದಿಲ್ಲ ಅಂತ ? ಹೀಗಿರು ವಾಗ ಏನು ಹೇಳಬೇಕು ? ಜೊತೆಗೆ ಅವರನ್ನು ನೋಡಬೇಕಾದರೆ, ಚರಕಾ ಹಿಡಿದು ನೂಲಬೇಕು. ಖಾದಿ ಸೀರೆ ಉಟ್ಟುಕೋಬೇಕು. ಬುದ್ಧಿಯೋರು ಈ ಸೂಟುಗೀಟು ಎಲ್ಲಾ ಬಿಟ್ಟು ಖಾದಿ ಹಾಕಿಕೊಳ್ಳ ಬೇಕು. ಇವರು ರಾವ್‌ಬಹದ್ದೂರ್ರು. ಇವರು ಖಾದಿ ಹಾಕಿ ಕೊಂಡರೆ ನಾಳೆ ಎಲ್ಲರ ಕಣ್ಣೂ ಇವರ ಮೇಲೆ. ”
“ಏನು ಬುದ್ಧಿ, ನಮ್ಮ ಮಲ್ಲಮ್ಮನ ಬಯಕೆಗೆ ಏನು ಹೇಳು ತೀರಿ?”
“ನಿಮ್ಮ ಮಲ್ಲಮ್ಮ ಯಾವಾಗಲೂ ನಮ್ಮ ಪ್ರಾಣಕ್ಕೆ ತರುತ್ತಾಳೆ. ಅವೊತ್ತು ದಿವಾನರ ಕೈಲಿ ಜಗಳಾ ಆಡಿಸಿಬಿಟ್ಟಳು. ಇಂಡಿಯಲ್ಲಿ ಎಷ್ಟು ಜನ ಅರೆಸ್ಟ್ ಆಗೋದಿಲ್ಲ ? ಆಗಿಲ್ಲ ? ಅಂಥಾದ್ದರಲ್ಲಿ ಇವರ ಮೇಷ್ಟ್ರನ್ನ ಅರೆಸ್ಟ್ ಮಾಡುತ್ತಾರೆ ಅಂತ ಹಾರಾಡಿಬಿಟ್ಟಳು. ಶಿವನೇ! ನಮ್ಮಪ್ಪ ! ಮೂರು ದಿನ ನನ್ನ ಒದ್ದಾಟ ಆ ನಮ್ಮಪ್ಪನಿಗೇ ಪ್ರೀತಿ. ”
“ಬುದ್ಧಿ, ನಿಜ ಹೇಳಿ, ಅ ಮೂರು ದಿನವೂ ನಾನು ನಿಮ್ಮ ಸೇವೆ ಮಾಡಿದೆನೋ ಇಲ್ಲವೋ? ನೀವೇ ಮನಸ್ಸೊಪ್ಪಿ, ಕಳ್ಳ ಹೆಣ್ಣೆ ದುಡಿಸಿದರೂ ಕೈತುಂಬಾ ಫೀಸ್ ಕೊಟ್ಟೆ ಆಂತ ಅನ್ನಲಿಲ್ಲವಾ?
” ನೋಡಿದರೇನ್ರಿ: ದೊಡ್ಡಮ್ಮನೋರೆ, ಈ ಕಲಕೇತಿ ವಿದ್ಯ ನೀವೂ ಕಲಿತುಕೊಳ್ಳಿ” – ಇದಕ್ಕಿನ್ನೂ ಪೈಲೇ ಪಂಚಮಿಸೆ, ಆಗಲೆ ಹತ್ತಿದರೊಂದು ; ಇಳಿದರೊಂದು. ನಮ್ಮ ದೊಡ್ಡಮ್ಮಣ್ಣಿ ಈಗ ಚಿನ್ನ ಕಣಪ್ಪ ; ಯಾವಾಗಲೂ ರಾಜಧಾನಿ. ಎಷ್ಟಾಗಲೀ ತುಂಬಿದ ಕೊಳ. ”
” ಬುದ್ಧಿ, ಬುದ್ದಿ, ಹುಷಾರಾಗಿರಿ. ಈ ಕಳ್ಳ ಬುದ್ಧಿ ಏನೋ ಪಂದೆ ಮಾಡವರೆ, ನಿಮ್ಮನ್ನ ತೂಕ ಏರಿಸ್ತವರೇ, ಏನೋ ಅದೆ. ನಾವು ಕಲಿತಿರೋ ಬುದ್ದಿಯಲ್ಲ ಇವರೇ ಕಲಿಸಿ ಕೊಟ್ಟಿದ್ದು. ಇವರ ಮುಂದೆ ಕೂತುಕೊಳ್ಳುವಾಗ ಸಟೀಕೆ ಓರೆಯಾಗಿ ಕುಂತುಕೊಂಡರೆ ಅದಕೇನಾದರೂ ಅಂತಾರೆ. ನಾವು, ಪಾಪ, ನಮ್ಮ ಬುದ್ದಿಯೋರು ಆಯಾಸ ಪಟ್ಟರಲ್ಲ ಅಂತ ಕೊಂಚ ಒದ್ದಾಡಿಕೊಂಡರೆ, ಆಗಲೇ ಬಂತು ನಮಗೆ, ಕಲಕೇತಿ, ಕಳ್ಳ ಹೆಣ್ಣು, ಮಾವಿನ ಹೆಣ್ಣು, ಸೀಬೇ ಹೆಣ್ಣು; ಇನ್ನೂ ಏನೇನೋ? ಶಿವನೆ! ಏನು ಹೇಳಲಿ?”
ರಾಣಿಯು ಕಿಲಕಿಲನೆ ನಕ್ಕಳು.
ಮಲ್ಲಿಯು ಕೇಳಿದಳು : “ಏನು ಬುದ್ಧಿ ? ”
“ಇಲ್ಲಿ ನೋಡವ್ವಾ, ಮೊಣಕೈಲಿ ತಿವೀತಿರೋದಾ ! ”
“ನಾನು ಇತ್ತಕಡೆ ತಿರುಗಿಕೊಂಡು ಮಲಕ್ಕೋತೀನಿ ಬಿಡಿ.”
” ಅದೇನು ? ”
“ನೋಡಿ ಮತ್ತೆ ; ನೀವು ಕೇಳಿದರಿ ನಿಂಗೇನಾಸೆ ಅಂತ. ನಾನು ಹೇಳಿದೆ. ಬುದ್ದಿಯೋರು ಆಯಿತದೆ ಇಲ್ಲ ಅಂತ ಹೇಳದೆ, ನಿಮ್ಮ ಕಡೆ ತಿರಿಕ್ಕೊಂಡ ಮೇಲೆ ನಮ್ಮದೇನು ಉಳೀತು”
“ಇಲ್ಲಿ ನೋಡು ಪಾಪ, ಬುದ್ದಿಯೋರಿಗೆ ಆಯಾಸವಾಗದೆ ನಿದ್ದೆ ಬಂದಿದೆ. ಗೊರಕೆ ಹೊಡೀತಿದ್ದಾರೆ.”
“ಈ ಕಳ್ಳ ನಿದ್ದೆ ನಾನು ಕಾಣದ್ದಾ. ಮೇಲೆ ಬಿದ್ದು ಎಬ್ಬಿಸಲಿ ಅಂತ. ನಾನು ನನ್ನ ಮಾತಿಗೆ ಉತ್ತರ ಬರೋತಂಕಾ ನಾನು ಇತ್ತಲಾ ಕಡೆ ಮಲಗಿಕೊಂಡು ನಾನೂ ಗೊರಕೆ ಹೊಡೀತೀನಿ ”
“ನಿಮ್ಮಿಬ್ಬರ ಜಗಳದಲ್ಲಿ ನಾನೇನು ಮಾಡಲಿ? ?
“ನಮ್ಮಿಬ್ಬರ ಹೊದಿಕೇನೋ ಕಿತ್ತುಕೊಂಡು ಬಿಡಿ.”
“ಲೇ. ನಾನು ಸುಮ್ಮನಿರೋಕಿಲ್ಲ. ನಾ ಚಳಿ ತಡೀಲಾರಿ.”
“ನೋಡಿದಿರಾ ನಿಮ್ಮ ಬುದ್ಧಿ ಯೋರ ನಿದ್ದೆ, ?
” ನಮ್ಮ ಬುದ್ಧಿಯೋರು ನಿಮ್ಮ ಬುದ್ಧಿಯೋರಲ್ವಾ ?”
“ಇವೊತ್ತು ನಿಮ್ಮ ಬುದ್ಧಿಯೋರು. ನಮ್ಮೋರಾಗಿದ್ದರೆ ನಮ್ಮ ಮಾತಿಗೆ ಉತ್ತರ ಬರುತ್ತಿತ್ತು ?”
ನ್ಯಾಯ, ಬುದ್ಧಿ, ಮಲ್ಲಮ್ಮನ ಮಾತಿಗೆ ಉತ್ತರ ಹೇಳಿದಿರಾ?”
ನಾಯಕನು “ನನಗೆ ನಿದ್ದೆ ಕಣಪ್ಪಾ ! ಯಾವ ಮಾತೂ ಕಿವೀಗೆ ಬೀಳಲ್ಲೊ !” ಎಂದು ಗೊರಕೆ ಹೊಡೆದನು.
“ಮಲ್ಲವ್ವಾ, ನಿನ್ನ ಮಾತು ಅವರ ಕಿವೀಗೇ ಬೀಳೋಕಿಲ್ಲವಂತೆ, ಕಿವೀಲೇ ಹೇಳಬಾರದಾ ! ?
“ಅವರೇ ಹೇಳು ಅನ್ನಲಿ.”
“ಹೋಗಲಿ. ನಾವೇ ಸೋಲೋವ. ನೀನೇ ಹೇಳು.”
“ಆಗಲಿ. ನೀವು ದೊಡ್ಡೋರು. ನಿಮ್ಮ ಮಾತೂ ಕೇಳೋವ.?
ಮಲ್ಲಿಯು ಹಾಗೆಯೇ ಪಕ್ಕವಾಗಿ ಗಂಡನ ಭುಜ ಹಿಡಿದು ಎದ್ದು ಕಿವಿಯ ಹತ್ತಿರ ಬಾಯಿಟ್ಟು ಕೆನ್ನೆಗೆ ಕೆನ್ನೆ ತಗಲುತ್ತಿರಲು, ಮೀಸೆ ಕೆನ್ನೆಯ ಮೇಲೆ ಉಜ್ಜಿ ಮುಲುಮುಲು ಎನ್ನುತ್ತಿರಲು, ಹೇಳಿದಳು : ಬುದ್ಧಿ, ನನಗೆ ಗಾಂಧಿಯವರನ್ನು ನೋಡಬೇಕು ಅಂತ ಆಸೆ. ಯಾವಾಗ ಕರೆದುಕೊಂಡು ಹೋಗ್ತೀರಿ ?”
ನಿದ್ದೆ ಬಂದಿದ್ದ ನಾಯಕನು ಅವಳನ್ನು ಹಾಗೆಯೇ ಎತ್ತಿ ತನಗೂ ರಾಣಿಗೂ ನಡುವೆ ಇಟ್ಟುಕೊಂಡು ಅವಳ ಮಾತನ್ನೇ ಗಮನಿಸದಿದ್ದವನಂತೆ, ರಾಣಿಯನ್ನು ಕೈಯ್ಯಿಂದ ಅಲ್ಲಾಡಿಸಿ, “ನೋಡಿದರೇನ್ರಿ, ನಿಮ್ಮವಳು ಮಾಡಿದ ಪಿತೂರಿ? ಅವಳು ನಮ್ಮ ಬಿರುದಿಗೆ ಸಂಚಕಾರ ತರೋಕೆ ಹಾದಿಹಾಕಿರೋದು ? ಈಗ ನಾನ್ ಕೋ ಆಪರೇಷನ್ ಕಾಲ. ರಾವ್ ಬಹದ್ದೂರ್ ನಾಯಕ ಗಾಂಧಿ ಯವರನ್ನು ನೋಡೋಕೆ ಹೋಗಿದ್ದ ಅಂದರೆ, ಬಂತು ಪ್ರಾಣಸಂಕಟ, ಒಂದು ಸಲ ನನ್ನ ಕೈಲಿ ಖಾದಿ ಹಾಕಿಸಿಬುಟ್ಟರೆ, ಅಮೇಲೆ ಬೊಡ್ಡೀ ಮಗ ಆ ಹಡಿಭಾರದ ಬಟ್ಟೆ ಹಾಕ್ಕೊಂಡು ತಿರುಗಲಿ ಅಂತ.”
“ಪಾಪ, ಈಗ ಬುದ್ದಿಯೋರು ಹಾಕ್ಕೊಳ್ಳೋ ಬಟ್ಟೆ ಏನಾದರೂ ತೂಕವಾ ? ಚಳಿ ಬಂದೋರ ಮೈಮೇಲೆ ಇವರದೊಂದು ಸೂಟ್ ಹಾಕಿಬಿಟ್ಟಕೆ ಚಳಿಯೇ ಬುಟ್ಟುಹೋಗ್ತದೆ !”
“ನಾನು ಮಾತಿಗೆ ಮಾತು ಜೋಡಿಸಿದರೆ, ಬಯ್ತೀರಿ. ಇದೆ ಸುಮ್ಮಕಿದ್ದರೆ, ಅದಕೂ ಬಯ್ತೀರಿ. ಏನು ಮಾಡಬೇಕು ನಿಮ್ನ ?”
“ಮಾತಿಗೆ ಮಾತು ಜೋಡಿಸಲೂ ಬೇಕು: ಬಯ್ಯಿಸಿಕೊಳ್ಳಲೂ ಬೇಕು.”
“ಇದೀಗ ಇಲ್ಲದ್ದು ಕೊಬ್ಬು ”
“ಅದಿರಲಿ, ಏನು ಹೇಳ್ತೀರೋ ಹೇಳಿ. ನಾನು ಜಡ್ಡಿ, ಕೇಳಿ ಜಡ್ಜ್‌ಮೆಂಟ್ ಹೇಳ್ತೀನಿ.”
” ಮೊದಲನೇದು ಮೈತುಂಬಾ ಬಟ್ಟೇದು. ನಿಜ. ನಮ್ಮ ಬಟ್ಟೆ ಬಹಳ ಭಾರ….”
“ಬರಿಯ ಭಾರ ಅಲ್ಲ. ಕುದುರೆ ಕೂಡ ಜಗ್ಗೋಷ್ಟು ಭಾರ.”
“ಅದಕ್ಕೆ ನಮ್ಮ ಉತ್ತರ ಬೇಕೋ ?”
” ಬ್ಯಾಡಿ. ಇನ್ನು ಗೂಳಿ, ಹಸ, ಅಂತ ಏನೇನೋ ಹೇಳಿ ನಮ್ಮ ನಾಚಿಸಬ್ಯಾಡಿ.”
“ಇಲ್ಲಿ ಇರೋರು ನಾವು ನಾವು ತಾನೆ ? ಇನ್ಯಾರೂ ಇಲ್ಲವಲ್ಲ.”
“ಅವಳ ಮಾತಿರಲಿ ಬುಡಿ ಬುದ್ಧಿ. ನೀವು ನನಗೆ ಹೇಳಿ. ಅವಳು ಕೇಳೋದೇ ಬ್ಯಾಡ ನೀ. ಕಿವಿಮುಚ್ಚಿಕೊಳ್ಳಮ್ಮಿ.”
“ನೋಡಿ, ರಾಣಿಯನರೇ ” ನಾಯಕನು ಪರುಠವಣೆಯಾಗಿ ಹೇಳಲಾರಂಭಿಸಿದನು.
“ಹೇಳಿ, ಬುದ್ದಿಯವರೆ!” ಎಂದು ರಾಣಿಯು ಉತ್ತರ ಕೊಟ್ಟಳು.
“ಯಾಕೋ ಶಕುನ ಸರಿಹೋಗಲಿಲ್ಲ-ನಾ ಹೇಳೊಲ್ಲ.”
“ಕೇಸು ನಿಮ್ಮ ಕಡೆ ಆಗೋಕಿಲ್ಲ.”
“ಹಂಗಾದಕೆ ಈ ತುಂಟಮಲ್ಲಿ ಹೇಳಿದಂಗೆ ರಾವ್ ಬಹದ್ದೂರ್ ರಾಜಸೇವಾಪರಾಯಣ ಪುಟ್ಟ ಸಿದ್ದಪ್ಪನಾಯಕ ಕೇಳಬೇಕೋ ??
” ಹೌದು. ಅದೇ ಈ ಕೋರ್ಟಿನ ಆರ್ಡರ್.”
“ಚೆನ್ನಾಯ್ತಪ್ಪ. ದಂಡಿಗೆ ಹೆದರಲಿಲ್ಲ; ದಾಳಿಗೆ ಹೆದರಲಿಲ್ಲ. ಈ ಬಾರುದ್ದ ಮಂಡೆಗೆ ಹೆದರಬೇಕು.?
“ಎಚ್ಚರಿಕೆ. ಕೋರ್ಟಿಗೆ ಅವಮಾನ ಮಾಡಕೂಡದು. ನಾವು ಹದಿನಾರು ಮೊಳ : ನೀವು ಎಂಟು ಮೊಳ. ಇನ್ನೂ ಹೆಚ್ಚು ಮಾತಾ ಡಿದರೆ ನಾವು ಮುವ್ವತ್ತೆರಡು ಮೊಳ : ನೀವು ಎಂಟು ಮೊಳ.”
“ಗಾಂಧಿಯವರು ಬಂದಮೇಲೆ ನಮಗೆ ಮೊಳ ಕಮ್ಮಿಯಾ ಯಿತು.?
ಮಲ್ಲಿಯು “ಹಾಲ್ಟ್ ” ಎಂದಳು.
” ಏನೇ ಅದು ?”
“ನಮ್ಮ ಮಾತಿಗೆ ಉತ್ತರ ಕೊಟ್ಟು ಮುಂದಲ ಮಾತು.”
” ದೊಡ್ಡಮ್ಮನೋರ ಕೋರ್ಟಿನಲ್ಲಿ ಆರ್ಡರ್ ಆಗಿಹೋಗದೆ. ನಾವು ಒಪ್ಪಲೇಬೇಕು, ಅದರೆ ಈಗ ನೋಡು. ಅವರ ಮನಸ್ಸು ನೊಂದಿದೆ. ಈ ಹಿಂದೂ ಮುಸಲ್ಮಾನ್ ಜಗಳಗಳು ಈ ಸ್ವರಾಜ್ಯ ಪಾರ್ಟಿ, ಇವೆಲ್ಲ ಅವರ ಮನಸ್ಸು ಕಲಕಿವೆ. ಈಗ ಹೋಗೋದಾ ?”
“ಅವೆಲ್ಲ ಇರಲಿ. ನಿಮ್ಮ ಗತಿ ಹೇಳಿ. ನಿಮ್ಮ ಮನಸ್ಸು ಹೆಂಗೆ ಹೇಳಿ.?
“ನಾನೂ ಅದೇ ಯೋಚನೆ ಮಾಡುತಿದ್ದೆ. ನರಸಿಂಹಯ್ಯನ್ನೂ ಆನಂದಮ್ಮ ಶಂಭುರಾಮಯ್ಯನ್ನೂ ಕರಕೊಂಡು ಕಾಶೀಗೆ ಹೊರಡು ತೀವಿ ಅಂತ ಹೇಳಿ ಹೊರಟುಬುಡೋದು. ದಾರೀಲಿ ಅವರನ್ನು ನೋಡಿಕೊಂಡು ಬಂದುಬುಡೋಡು. ಸರಕಾರ ಕೇಳಿದರೆ, ನನ್ನ ಹೆಂಡತಿ ಬಯಕೆ ಅನ್ನೋದು.”
“ನೋಡಿ ಅಕ್ಕಯ್ಯ. ಹುಲಿ ಹೊಡೆಯೋ ಗಂಡಿಗೂ ಸರಕಾರ ಅಂದರೆ ಹೆದರಿಕೆ. ಯಾಕೆ ನೇರವಾಗಿ ಹೋಗಬಾರದು ?”
“ಇನ್ನೇನು ಜಿನ್ನಾ ಸಾಹೇಬರು ಕೇಳಿದ್ದಾರೆ: ನಿಮ್ಮ ರಾಜ್ಯ ಆಳೋಕಾಗದೇಡೋದರೆ ನಮ್ಮ ಕೈಗೆ ಕೊಡಿ, ನಿಮಗಿಂತ ಚೆನ್ನಾಗಿ ಆಳ್ತೀವಿ ಅಂತ. ಕೊಂಚ ದಿನ ತಡಕೊಳ್ಳಿ. ಆಗ ನಾನೇ ನಿಂತು ‘ಸಾಕು ನಿಮ್ಮ ರಾಜ್ಯ ಹೊರಡಿ’ ಅಂತೀನೋ ಏನೋ?”
“ನೀವು ಹೊರಡೋದಾದರೆ ನಾನು ಚರಕಾ ಕಲಿತುಕೊಳ್ಳ ಬೇಕು?
“ನೀವು ಕಲಿತುಕೊಳ್ಳಿ : ಸರವಾಯಿಲ್ಲ. ಗಾಂಧಿಯವರು, “ನಾಯಕ ನಿನಗೇನು ಮಹಾ ಕೆಲಸ, ಕೊಳ್ಳೆ ಹೋಗೋದು ? ನೀನೂ ಚರಕಾ ತಕೋ’ ಅಂದ್ರೆ ?”
“ಆಗ ಹೇಳೋದು, “ಮಹಾಸ್ವಾಮಿ, ತಮಗೆ ಇರೋ ಒಬ್ಬ ಹೆಂಡಿತಿಯೊ ಭಾರವಾಗವ್ಳೆ. ನನಗೂ ಖಾಯಂ ಆಗಿ ಇಬ್ಬರು ಹೆಂಡಿತೀರು ಇದ್ದಾರೆ. ಖರ್ಚಿಗಳೆಷ್ಟೊ ಲೆಕ್ಕವಿಲ್ಲ’ ಅನ್ನೋದು?
“ಥೂ ತುಂಟಬಡ್ಡಿ . ಯಮನ ಹತ್ರಾದರೂ ಆ ಮಾತು ಅಂದೇನು ? ಆ ಮಹಾತ್ಮನ ಹತ್ರಾ ಈ ಮಾತು ಎತ್ತೋದಾ ? ಅವರ ಹತ್ರಾ ಹೋದಾಗ, ದೇವರ ಹತ್ರ ಹೋದಹಾಗೆ ಹಣ್ಣು ಕಾಯಿ ತಕೊಂಡು ಹೋಗಿ ಆರತಿ ಮಾಡಿಕೊಂಡು ಬರಬೇಡವಾ ? ಶಿವಶಿವಾ! ಅಂಥಾ ಪುಣ್ಯ್ಯತ್ಮನ ಹತ್ರ ಮಂಚದ ಮಾತೂ ಎತ್ತಬೋದಾ !”
“ಇನ್ನು ಹದಿನೈದು ದಿನ ಟೈಂ ಕೊಡಿ ಖಾವಂದ್ ! ನಾವು ಮಹಾರಾಜರ ಹತ್ತರ ಹೋಗಿ ಅಪ್ಪಣೇ ಕೇಳಿ ಬರ್ತೇವೆ, ಅವರು ಆಗಬೋದು ಅಂದ್ರೆ ನಮ್ಮದೇನು ಅಡ್ಡಿ ಇಲ್ಲ.”
“ಮಹಾರಾಜರು ‘ಅಲ್ಲಿಗೇಕೆ ಹೋಗೋದು : ಇಲ್ಲೇ ನಮ್ಮ ರಾಜ್ಯಕ್ಕೆ ಬನ್ನಿ’ ಅಂದ್ರೆ ?”
“ಅದೂ ನಿಜ ಕಣ್ರಿ. ಮಹಾಪಾದದಲ್ಲಿ ಹೇಳಿ. ಬುದ್ಧಿ, ಅವರಿಗೆ ಈ ಎಲೆಕ್ಷನ್ ಆದಮೇಲೆ ಏನೋ ಮೈ ಸರಿಯಾಗಿಲ್ಲವಂತೆ. ಅವರು ಯಾಕೆ ಬಂದು ನಂದೀಲಿ ಇರಬಾರದು ?”
“ಸರಿ. ಸಾರ್. ನಾಳೆಯೇ ತಲಸಿಸುತೀವಿ ಈ ಸುದ್ದೀನ ಮಹಾರಾಜಾ ಸಾಹೇಬರಿಗೆ. ಅಲ್ಲಿ ಅಪ್ಪಣೆ ಆದುದನ್ನು ರಾಣೀ ಸಾಹೇಬರ ಕೋರ್ಟಗೆ ತಿಳಿಸತೀವಿ. ಅದುವರೆಗೂ ನಾವು ಸುಮ್ಮ ನಿರಬೇಕಾ ?”
“ಏನಿಲ್ಲ. ಪಾರ್ಟಿಗಳ ಸಮ್ಮತಿಯಿಂದ ಏನುಬೇಕಾದರೂ ಮಾಡಿಕೊಳಬಹುದು.”
“ಥ್ಯಾಂಕ್ ಯು. ಯುವರ್ ಆನರ್”
*****
ಮುಂದುವರೆಯುವುದು