ಘೋರ ಸಂಸಾರವಿದು
ಮಾಯಾ ಕೂಪ
ಹೆಜ್ಜೆ ಹೆಜ್ಜೆಗೂ ಇಲ್ಲಿ
ಪಾಪ ತಾಪ
ಎಲ್ಲರೂ ಇಲ್ಲಿ ಸ್ವಾರ್ಥಕ್ಕೆ
ಕಾದಿಹರು
ನಿನ್ನನ್ನು ಬೆಂಬಿಡದೆ ನಿತ್ಯ
ಕಾಡಿಹರು
ಪ್ರತಿ ಕ್ಷಣವೂ ನೀನು ನೀನಾಗಿ
ಸುಖವು ಅರೆಸಿ
ಜೀವನವೆಲ್ಲ ಹೋರಾಟ
ದುಃಖವು ಮರೆಸಿ
ಅರ್ಥವಿಲ್ಲದ ಬಾಳಿಗೆ
ಹೊಗಳಿದರೇನು!
ಕಾಮಕ್ರೋಧ ಬಿಡದೆ
ತೆಗಳಿದರೇನು!
ನೀನು ಸಿದ್ಧನಾದರಾಯ್ತು
ಬುದ್ಧನಾಗುವೆ
ಮಾಣಿಕ್ಯ ವಿಠಲನಿಗೆ
ಬದ್ಧನಾಗುವೆ!
*****