ಬಲುನಾತಾ ಬಲುನಾತಾ

ಬಲುನಾತಾ ಬಲುನಾತಾ ಮನ
ಮಲಿನ ತೊಳಿಯದಿರೆ ಹೊಲಸಾಯ್ತವ್ವಾ ನಾತಾ ||ಪ||

ನಾಯಿ ಸತ್ತು ಕೊಳೆತರೆ ನಾತಲ್ಲಾ
ಕಾಯಿ ಕೆಟ್ಟು ಹುಳಿತರೆ ನಾತಲ್ಲಾ
ಬಾಯಿ ಕಚ್ಚಿ ಕಂಡ ಹೆಂಡ ತಿಂಬುವಾ
ಪಾಯಗಟ್ಟಿ ಮನುಜರು ನಾತಲ್ಲಾ ||೧||

ಉಂಡುಬ್ಬಳಿಸುವದು ನಾತಲ್ಲಾ
ಕುಂಡ್ಯಾಗ ಬರುವದು ಬಲು ನಾತಲ್ಲಾ
ಕಂಡ ಕಂಡ ಜನ ಕಾಲ್ಮಡಿದರೆ
ಮಂಡಲ ಮಧ್ಯದೊಳದು ನಾತಲ್ಲಾ ||೨||

ಬಂಗಿ ಸೇದಿದರೆ ಬಾಯ್ನಾತಲ್ಲಾ
ನುಂಗಿ ಕಾರಿಕೊಂಡುದು ನಾತಲ್ಲಾ
ಮಂಗಳಾತ್ಮಕ ಗುರುಗೋವಿಂದ ನ
ಸಂಗ ಮಾಡದಿರುವದು ನಾತವ್ವಾ ||೩||

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಗೆ ಡಂಗುರ – ೧೭
Next post ನಗೆ ಡಂಗುರ – ೧೮

ಸಣ್ಣ ಕತೆ

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…