Home / Short story

Browsing Tag: Short story

ಮನೆ ಮಗಳು “ಸೋನಿ” ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು. ದಕ್ಷಿಣ ಕನ್ನಡದವರು ‘ಬಸುರಿ ಊಟ’, ಉತ್ತರ ಕರ್ನಾಟಕದವರ ‘ಉಡಿ ತುಂಬ...

ಕಮಲಪುರದ ಬಂದರ್ ಸ್ಥಳವು ವಸಂತ ಋತುವಿನ ಸಂಧ್ಯಾತಪದಿಂದ ಸುಖ ಹೊಂದುತ್ತಲಿತ್ತು. ವೀರಪುರದಿಂದ ಬಂದು ದಂಡೆಯಲ್ಲಿ ನಿಂತಿದ್ದ. ಒಂದೆರಡು ದೋಣಿಗಳು ನೀರಿನ ಸಣ್ಣ ಅಲೆಗಳ ಮೇಲೆ ಕುಣಿಯುತ್ತಲಿದ್ದವು. ದೋಣಿಗಾರನು ಈಳಿಗೆಯನ್ನು ಕಾಲಿಂದ ಒತ್ತಿ ಹಿಡಿದು, ...

ನಾನು ಎಂ.ಎ ಪಾಸಾಗಿದ್ದೆ. ನನ್ನ ತಂದೆ ತಾಯಿಯವರು ನನಗೆ ಮದುವೆ ಮಾಡಬೇಕೆಂದು ಹೆಣ್ಣು ಹುಡುಕುತ್ತಿದ್ದರು. ಅಂತೂ ಕಡೆಗೆ ಹುಡುಗಿಯೂ ನಿಶ್ಚಯವಾದಳು. ನಮ್ಮ ಮನೆಯಿಂದ ಹನ್ನೆರಡು ಮೈಲಿ ದೂರದಲ್ಲಿದ್ದ ಒಂದು ಹಳ್ಳಿಯಲ್ಲಿ ಅವಳ ಮನೆ, ಆವಳಿಗೂ ತಂದೆತಾಯಿ ...

ವರ್ಷಕಾಲವಾಗಿತ್ತು. ಹಗಲಿರುಳು ಬಿಡದೆ ಸುರಿವ ಮಳೆಯಿಂದ ವೀರಪುರವು ಚಳಿಕಟ್ಟಿ ಹೋಗಿತ್ತು. ಜನರ ಕ್ರಿಯಾಕಲಾಪಗಳು ಉಡುಗಿ ಹೋಗಿದ್ದವು. ಗಟ್ಟದ ಸೀಮೆಯಿಂದ ಜಿನಸಿನ ಗಾಡಿಗಳು ಬರುವುದು ನಿಂತುಹೋದುದರಿಂದ, ವ್ಯಾಪಾರವೆಲ್ಲಾ ಸ್ತಬ್ಧವಾಗಿತ್ತು. ವ್ಯಾಪಾರ...

ಮನದೊಳಗಣ ಭಾವನೆಗಳನ್ನು, ಕತ್ತಲನ್ನು, ಬೆಳಕನ್ನು ಬಗೆಬಗೆದು ಮತ್ತೊಬ್ಬರ ಎದುರು ಬೆತ್ತಲಾಗುವುದು ಸಾಮಾನ್ಯವೇ? ಅಂಥ ವ್ಯಕ್ತಿ ಯೊಬ್ಬ ಸಿಕ್ಕಾಗ ಎದೆಯೊಳಗೆ ಅಡಗಿದ ಜಗತ್ತನ್ನು ಬಿಚ್ಚಿಡಬೇಕು ಎಂದೆನಿಸಿತು ಆಕೆಗೆ. ಕತ್ತಲ ಎದೆಗೆ ಒದ್ದಂತೆ ಹಗಲು ಆಗತ...

ನಿದ್ರೆಯಲ್ಲಿ ಏನೋ ಕಂಡಂತೆ ನಾಗಪ್ಪ ದಿಗ್ಗನೆ ಎದ್ದು ಕುಳಿತು ಮಂಚದ ಹಾಸಿಗೆ ಮೈಯ ಹೊದಿಕೆಯನ್ನು ಹೌವನೆ ಓಸರಿಸಿ ಕಣ್ಣುಜ್ಜಿಕೊಂಡ. ಒಂದು ಗಂಟೆ ಹಿಂದೆಯೇ ಕೈಕಾಲು-ದೇಹದ ವ್ಯಾಯಾಮ ಮಾಡಿ, ಮೈನೀರು ಇಳಿಸಿ ಮಲಗಿಕೊಂಡ ಅವನಿಗೆ ಮೈಮನಸ್ಸಿನ ಸಡಿಲತನದಿಂದ...

ನನಗಿಂತಹ ಪರಿಸ್ಥಿತಿ ಬರುತ್ತದೆಂದು ಕನಸಲ್ಲೂ ಅಂದುಕೊಂಡವನಲ್ಲ. ಎಲ್ಲರೂ ನನ್ನ ಸಾವನ್ನು ಬಯಸುತ್ತಿದ್ದಾರೆ; ನಾನೇ ಸಾವನ್ನು ಬಯಸುತ್ತಿದ್ದೇನೆಯೇ; ನನಗರ್ಥವಾಗುತ್ತಿಲ್ಲ. ಯಾರಿಗೆತಾನೆ ಸಾಯಲು ಇಷ್ಟ? ಅಷ್ಟಕ್ಕೂ ನನಗಿನ್ನೂ ಅರವತ್ತರ ಹತ್ತಿರ ಹತ್ತಿ...

ಭಾಗ – ೧ ಬಸವಣ್ಣ ಅಡಕೆ ಮರಾನ ಅಪ್ಪಿ ಹಂಡಕಂದು ಜೀಕಿ ಜೀಕಿ ಮ್ಯಾಲೆ ಹೋಗತಿರಬಕಾರೆ ಅವನ ಕೈಕಾಲಿನ ಮಾಂಸಖಂಡ ಮತ್ತು ನರಗಳು ಎಳೆದುಬಿಟ್ಟ ಹಂಗೆ ಆಗದಾ ಹೆಗಡೆ ನೋಡತಾ ನಿಂತಿದ್ದ. ಶ್ರೀಧರ ಹೆಗಡರೇ ಅಂತ ಸಣ್ಣ ಧ್ವನಿಯಾಗೆ ಕರೆದ ಸದ್ದು ಕೇಳಿದ ಹ...

ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು ತೋರಿಸಿದವು! ಸುಧಾ ಕಸಪೊರಕೆಯಿಂದ ಕಸ ಗೂಡಿಸುತ್ತಿದ್ದಳ...

ಪಡುವಣ ಕಡಲಿನ ಮೂಡಣಕ್ಕೊಂದು ಬೆಟ್ಟ. ಬೆಟ್ಟದ ಸುತ್ತಮುತ್ತಲೆಲ್ಲಾ ಹಚ್ಚ ಹಸಿರು. ಆ ಹಸಿರಿನ ಮಧ್ಯದಲ್ಲೊಂದು ಕೇರಿ. ಆ ಕೇರಿ ಹೊರಗೊಂದು ಬಯಲು. ಆ ಬಯಲಿನ ತುದಿಯಲ್ಲೊಂದು ಆಲದ ಮರ. ಆ ಮರದ ಸುತ್ತಲೂ ಒಂದು ಕಟ್ಟೆ. ಆ ಕಟ್ಟೆಯ ಮೇಲೊಂದು ದೇವರು. ಆ ದೇ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...