
ಹುಟ್ಟಿ ಬರಲಾರಿರಾ ಇನ್ನೊಮ್ಮೆ ಪರಿಶುದ್ಧ ನೀರು ಗಾಳಿ ಬೆಳಕಿಲ್ಲದೆ ಹಬೆಯಲಿ ಕಂಗೆಟ್ಟು ಕುಳಿತ ಜನತೆಗೆ ಹೊಸಬೆಳಕಾಗಿ ಹೊಸದಾರಿ ತೋರಲು ಹುಟ್ಟಿಬರಲಾರಿರಾ ಇನ್ನೊಮ್ಮೆ? ಭೂಮಿ ಉತ್ತು ಬೀಜ ಬಿತ್ತಿ ಬೆಳೆ ಎತ್ತುತ್ತಿದ್ದವರ ‘ಕೈಗಾರೀಕರಣ ಇಲ್ಲವ...
ಯೌವ್ವನವೇ ಮತ್ತೊಮ್ಮೆ ಹುಟ್ಟಿ ಬಾ ಚೈತನ್ಯಧಾರೆಯಾಗಿ ಮರಳಿ ಬಾ ಮುಪ್ಪಾದ ಈ ಜೀವ ಉರುಳಿ ಹೋಗುವ ಮುನ್ನ ಜೀವನದಿಯಾಗಿ ಹರಿದು ಬಾ. ಕಾಲಚಕ್ರದ ಗಾಲಿ ಹಿಂದಕ್ಕೆ ತಿರುಗಲಿ ಗತಜೀವನದ ಕಥೆಯ ಪುಟಗಳು ತೆರೆಯಲಿ ಹಿಂದೆ ಕೇಳಿದ ಹಾಡು ಮತ್ತೊಮ್ಮೆ ಧ್ವನಿಸಲಿ ...
ಮೌನವಾಗಿದೆ ಧರಿತ್ರಿ ಮೌನವಾಗಿದೆ ದಿಗಂತ ಮೌನವಾಗಿದೆ ಸಾಗರ; ಒಂದಾಗಿದೆ ಭೂಮಂಡಲವಾಗಿ. ಜತೆಯಾಗಿದೆ ಮೌನದಲಿ ಅಖಂಡವಾದ ನಂಟಿನಲಿ ನಿರಂತರತ್ವದ ಸಂಕೇತದಲಿ ಅವಿಚ್ಛಿನ್ನತೆಯ ಭಾವದಲಿ. ನೆಲವ ಬಿಟ್ಟು ಜಲವಿಲ್ಲ ಜಲವಬಿಟ್ಟು ಗಗನವಿಲ್ಲ ಒಂದಕ್ಕೊಂದು ಜತೆಯ...
ಯಾರಿಗುಂಟು ಯಾರಿಗಿಲ್ಲ ಮನದ ತುಂಬ ಬೇವು ಬೆಲ್ಲ? ಚಿತ್ತ ಶಾಂತಿ ಮನದ ಭ್ರಾಂತಿ ಕುರುಡು ಪ್ರೀತಿ ಮರೆತ ನೀತಿ. ಅಲ್ಲಿ ಇಲ್ಲಿ ಎದ್ದ ಗುಲ್ಲು ಮನಕೆ ನೋವು ತಂದ ಸೊಲ್ಲು. ಹೇಳಲಾರೆ ಬರೆಯಲಾರೆ ಮರೆಯಲಾರೆ ಹೃದಯಕ್ಕಿಟ್ಟ ಬರೆ. ಎಲ್ಲರಿಗುಂಟು ನೋವು ನಲಿವ...
ಲಕ್ಷೋಪಲಕ್ಷ ಕಣ್ಣುಗಳು ಧೀಮಂತ ಮೂರ್ತಿಯ ದರ್ಶನಕೆ ತ್ಯಾಗ ದೌನತ್ಯವ ಅರಿಯಲು ಕಾತರಿಸುತ್ತಾರೆ ಹತ್ತುತ್ತಾರೆ ಮೇಲೇರುತ್ತಾರೆ ನಿನ್ನ ಅಡಿಯವರೆಗಷ್ಟೆ. ಮತ್ತೆ ಮೇಲೇರುವ ಕೆಚ್ಚಿಲ್ಲದ ಸಾಮಾನ್ಯರು ನಿನ್ನ ಅಸಾಮಾನ್ಯತೆಗೆ ಅದ್ಭುತ ಕಲಾಕೃತಿಗೆ ಬೆರಗಾಗು...
ದ್ರೌಪದೀ, ಅಂದು ಋತುಮತಿಯಾಗಿದ್ದ ನಿನ್ನನ್ನು ದರದರ ಎಳೆದು ತಂದು ತುಂಬಿದ ಸಭೆಯಲ್ಲಿ ದುಶ್ಯಾಸನ ನಿನ್ನ ಸೆರಗಿಗೆ ಕೈ ಹಾಕಿದಾಗ, ನೀನೇಕೆ ಅವನ ದಹಿಸದೆ ನಿನ್ನ ಪಣ ಒಡ್ಡಿದವರ ಬೇಡಿದೆ? ಅವರು ಅಸಹಾಯಕರಾಗಿ ತಲೆತಗ್ಗಿಸಿ ಕುಳಿತಾಗ ನಿನ್ನ ಕೂಗಿಗೆ ಓಗೊ...













