Home / Chintamani Kodlikere

Browsing Tag: Chintamani Kodlikere

ಮೊನ್ನೆ ಆದಿತ್ಯವಾರ ಕವಿತೆ ಬರೆಯುತ್ತ ಕೂತು ಬೆಳಗಿನ ಚಹಾ ತಪ್ಪಿಸಿಕೊಂಡಿದ್ದು ಇವತ್ತು ಚಹಾಕ್ಕೆ ಕಾದೇ ಕಾದು ಒಂದು ಕವಿತೆಯ ಹುಟ್ಟು ನಷ್ಟವಾಗಿದ್ದು ನಿನ್ನೆ ಸಿಟಿ ಬಸ್ಸಲ್ಲಿ ಅಷ್ಟೊಂದು ರಶ್ಶಲ್ಲೂ ನನಗೆ ಕೂರಲು ಜಾಗ ಸಿಕ್ಕಿ ಬಿಟ್ಟಿದ್ದು ಲಕ್ಷ್ಮ...

ಹಸಿ ಹಸೀ ಇಪ್ಪತ್ತರಲ್ಲಿ ಸಾವು ಬಲು ದೂರ ಬದುಕು ಹಗಲಿನ ಬೆಳಕು ಜೀವ ಜೇನಿನ ಹಾಗೆ ಹರಿದಷ್ಟೂ ಬತ್ತದ ನದಿಯ ಓಟ ಜೀವನೋಲ್ಲಾಸ ಗರಿಗಟ್ಟಿ ಕುಣಿಯುವ ಆಸೆ ಸೀಮೆ ಆಚೆ ಆಕಾಶ ನಡುನೆತ್ತಿ ಮೇಲೆ ಕೈ ಕತ್ತಿ ಝಳಪಿಸುವ ಮಧ್ಯಾಹ್ನ ಸೂರ್ಯ ಶತ್ರು ಕೋಟಿಯ ಕೋಟೆ ...

ಮರುಕಕ್ಕೆ ಪ್ರೇಮಕ್ಕೆ ಮುಚ್ಚಿದೆ ಬಾಗಿಲು ಗಾಳಿ ಆಡದ ಕೋಣೆ ಬಿಟ್ಟ ಉಸಿರೇ ಮತ್ತೆ ಒಳಹೊಕ್ಕುವ ಸರಾಗ ಸರೋಗ ವಾತಾಯನ ವ್ಯವಸ್ಥೆ ಅನುತಾಪ ಅನುಕಂಪಕ್ಕೆ ಭದ್ರ ಬಂದೋಬಸ್ತ್ ಬೀಗ ತೆರೆಯದ ಕಿಟಕಿಗಳೊಳಗೆ ಕೊಳೆಯುವ ರಾಜ ವೈಭೋಗ ಶಿಣ್ಣು, ಬೇಡು, ಗಂಟೆಗಳ ಸಜ...

ಹಗಲಿನಾಚೆಯ ಇರುಳಿನಾಚೆಯ ಪ್ರಪಂಚಕ್ಕೆ ಜೀವ ಸಾಗಿದ್ದಾಗ ರಾತ್ರಿ ಹನ್ನೆರಡಕ್ಕೆ ಗಂಟೆ ಮಿನಿಟಿನ ಮುಳ್ಳುಗಳು ಕೈಕುಲುಕಿಕೊಂಡವು ಕೈ ಗಡಿಯಾರದ ಜಾದೂಗಾರ ಎಂದೂ ಮಲಗುವುದಿಲ್ಲ ಕಾರ್ಯತತ್ತರ ರೈಲ್ವೆ ಸಾರನ್ನಿಗೆ ಮಲಗಿಕೊಂಡವರ ಚಿಂತೆಯೇ ಇಲ್ಲ ಭೂಮಿ ತನ್ನ...

ಕಣ್ಣಿಲ್ಲದಿರುವುದಕ್ಕೆ ಇದ್ದೂ ಇಲ್ಲವಾಗುವುದಕ್ಕೆ ಬಹಳ ವ್ಯತ್ಯಾಸ ಗಾಂಧಾರಿ, ಕಣ್ಣು ತೆರೆ ನೂರು ಕಣ್ಣಿನ ಕ್ಷತಿಜ- ದಾಟದೂಟಕ್ಕೆ ನೀನೂ ಬೆರೆ ಈ ಕಣ್ಣುಪಟ್ಟಿ ಕಿತ್ತೆಸೆ ಹಸ್ತಿನಾವತಿಯ ಕಲ್ಪನೆಯ ಯಕ್ಷಲೋಕ ಕಣ್ಣಾರೆ ನೋಡು ಭ್ರಮೆಯ ಭವ್ಯವನ್ನೆಲ್ಲ ದ...

ಬಂದವರೆಲ್ಲರೂ ಹೋಗಿಬಿಡುವ ಬಸ್‍ಸ್ಟಾಂಡಲ್ಲಿ ಉಪಯೋಗಿಸಿ ಎಂದು ಕೂತ ಕಸದಡಬ್ಬಿಗೆ ದಿಕ್ಕಿಲ್ಲ ; ದೆಸೆಯಿಲ್ಲ ಪೀಯೂಸಿಯ ಆ ಚಿಕ್ಕ ಹುಡುಗನಿಗೆ ಅವನ ಕಳೆದು ಹೋದ ಬಸ್‍ಪಾಸು ಸಿಕ್ಕಲಿಲ್ಲ ಸ್ಟಾಂಡಿನಾಚೆಯ ಚಪ್ಪಲಿ ಹೊಲಿಯುವ ಹುಲಸ್ಟಾರನಿಗೆ ಗಿರಾಕಿ ಇಲ್ಲ...

ಮೂರು ಗುಂಡು ಹಾಕಿ ಆ ಗಾಂಧಿಯನ್ನು ಕೊಂದರಂತೆ ನೂರು ಗುಂಡುಹಾಕಿದರೂ ನಾ ಸಾಯಲೊಲ್ಲೆ ಅಂಥಾದ್ದು ನನ್ನ ಮಹಾತ್ಮೆ ನನ್ನ ಹೃದಯಕ್ಕೆ ಗುಂಡು ತಾಗುವುದಿಲ್ಲ ಯಾಕೆಂದರೆ ನನಗೆ ಹೃದಯವೇ ಇಲ್ಲ ! ಇದ್ದರೂ ಅದು ಹೃದಯವಲ್ಲ ಹೃದಯವಾಗಿದ್ದರೂ ಅದು ಮನುಷ್ಯರದಲ್ಲ...

ಕೈ ತುಂಬ ಹಣ ಕೈ ತುಂಬ ಅವಕಾಶ ಇದ್ದಾಗ ನೆನಪಾಗಲಿಲ್ಲ ಪಾಪ ಅಸಹಾಯ – ಪುರಸೊತ್ತೂ ಇರಲಿಲ್ಲ ಎನ್ನಿ ಬಹುಜನ ಹಿತಾಯ ಬಹುಜನ ಸುಖಾಯ ಮಂತ್ರ ಪಠಿಸುವುದಕ್ಕೆ ಆದರೂ ಏನಿದೆ ಧಕ್ಕೆ ? ಸಾಯುವೆ ರಸ್ತೆಯ ಮೇಲೆ ತಾನು ಸತ್ತರೇ ಉಪಕಾರ ಇನ್ನು ರಸ್ತೆಯ ಮೇ...

ಪ್ರತಿ ಕತ್ತಲೆಗೆ ತಾನು ಮೆರೆವ-ಮೈತೆರೆವ ಬೆಳಕನ್ನು ತಿಂದ ಉತ್ಸಾಹ ಪ್ರತಿ ಬೆಳಕಿಗೂ ಅಬ್ಬ ಅಂಥ ಕತ್ತಲೆಯನ್ನೂ ಸೀಳಿ ಹೊರಜಿಗಿದ ಮುಗುಳುನಗೆ ಈ ಗಿಡದ ಹೂವೆಲ್ಲ ಬಾಡಿ ಬೀಳುತ್ತವಲ್ಲ ತನ್ನ ಉಡಿಗೇ ಎಂದು ಮಣ್ಣತಾತ್ಸಾರ ಈ ಮಣ್ಣಿನದೆ ಸಾರ ಹೀರಿ ಬೆಳೆಯು...

ದಿವಸಗಳು ಬೋರಾಗಿ ಮಾಡಲಾಗದೆ ಏನೂ ಜೀವಗಳು ನಿರ್ಜೀವ ನರಳುತ್ತವೆ ತಮ್ಮಲ್ಲಿ ಹುಟ್ಟಿದ ಬೆಂಕಿ ತಮ್ಮನ್ನೇ ಸುಡುತ್ತಿರುವಾಗ ಮಿಣುಕಿ ಹುಳುಗಳ ಹಾಗೆ ಉರುಳುತ್ತವೆ ಆಸೆಗಳು ಚೂರಾಗಿ ಹೆಣ ಬಿದ್ದ ಮಣ್ಣಲ್ಲಿ ಮುಗ್ದ ಹೂಗಳು ಮಾತ್ರ ಅರಳುತ್ತವೆ ಎಲ್ಲವೂ ಕ್ಷ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...