ಮೊನ್ನೆ ಆದಿತ್ಯವಾರ ಕವಿತೆ ಬರೆಯುತ್ತ ಕೂತು
ಬೆಳಗಿನ ಚಹಾ ತಪ್ಪಿಸಿಕೊಂಡಿದ್ದು
ಇವತ್ತು ಚಹಾಕ್ಕೆ ಕಾದೇ ಕಾದು
ಒಂದು ಕವಿತೆಯ ಹುಟ್ಟು ನಷ್ಟವಾಗಿದ್ದು
ನಿನ್ನೆ ಸಿಟಿ ಬಸ್ಸಲ್ಲಿ ಅಷ್ಟೊಂದು ರಶ್ಶಲ್ಲೂ
ನನಗೆ ಕೂರಲು ಜಾಗ ಸಿಕ್ಕಿ ಬಿಟ್ಟಿದ್ದು
ಲಕ್ಷ್ಮಕ್ಕನ ಮನೆಯ ಗಿಡ ಹೂವು ಬಿಟ್ಟಿದ್ದು
ಗೆಳಯ ಗೆಂಡೆತಿಮ್ಮನಿಗೆ ಜ್ಜರ ಬಿಟ್ಟಿದ್ದು
ಎಲ್ಲವೂ ದೇವರ ಲೀಲೆ
ಇವತ್ತು ನನಗೆ ರಜಾ ಇರುವುದು
ಅವನ ಲೀಲಾ ವಿನೋದಕ್ಕೆ ಸೇರಿದ
ಇನ್ನೊಂದು ಮಾಲೆ
ಅವನು ಭಗವಂತ
ನನ್ನ ಕೈಹಿಡಿತಕ್ಕೆ ಸಿಗಲೇಬಾರದು ಅಂತ
ಇದ್ದನೆಂದು ತೋರುತ್ತದೆ
ಇವತ್ತು ಸಿಕ್ಕೇಬಿಟ್ಟ
ಹಾಗೆಂದು ನನ್ನದೇನಿದೆ ಇದರಲ್ಲಿ ?
ಎಲ್ಲವೂ ದೇವರ ಆಟ
ನನ್ನದೇನಿದ್ದರೂ
ಒಂದು ಆಸರಿ ಹಾಗೂ
ಎರಡು ಊಟ
*****