ವಿಷಪೂರಿತ ಕತ್ತಾಳೆಮುಳ್ಳುಗಳು
ಅವಳನ್ನು ತಿವಿಯುವಂತಿದ್ದವು.

ಹೌದು,
ಅವಳೇ ಮುಳ್ಳುಗಳನ್ನು ತಿನ್ನುತ್ತಾ
ಬಹುದೂರದ ಕುರುಚಲು ಕಾಡಿನಲ್ಲಿ
ವಾಸಿಸುತ್ತಿದ್ದುದನ್ನು ನೋಡಿದ್ದೇನೆ.

ಎಲ್ಲೆಂದರಲ್ಲಿ ಮನಸ್ಸನ್ನು ಬಿಟ್ಟು,
ಅಲ್ಲಿ ಆ ಮುಳ್ಳುಗಳಲಿ
ಮೈ ಮಾರಿಕೊಳ್ಳಲೋಗುತ್ತಿದ್ದುದನ್ನು
ಮರಳನ್ನು ಶುದ್ಧೀಕರಿಸಿ,
ಟ್ರಕ್‌ಗಳಿಗೆ ತುಂಬುವ ಕೂಲಿಯವರು
ನೋಡಿದ್ದಾರಂತೆ.
*****

Latest posts by ಮಂಜುನಾಥ ವಿ ಎಂ (see all)