Home / Anandakanda

Browsing Tag: Anandakanda

೧ ಮನವು ನಿನಗಾಗಿಯೇ ಮೊರೆಯುತಿದೆಯೇ-ಚಿನ್ನ ನೆನಹು ನಿಡುಸುಯಿಲುಗಳ ಕರೆಯುತಿದೆಯೆ? ಕನಸು ನಿನ್ನದೆ ಚಿತ್ರ ಬರೆಯುತಿದೆಯೇ-ನಿನ್ನ ಇನಿದುದನಿ ಕಿವಿಗಳನ್ನು ಕೊರೆಯುತ್ತಿದೆಯೆ! ೨ ತೆಳುದುಟಿಯ ತಿಳಿಜೊಲ್ಲು, ಬಿಳಿಯ ಮೊಳೆವಲ್ಲು – ಆ ಎಳಗಲ್ಲಗಳ ...

ಹಾಳು ಪಟ್ಟಣದ ಬಂಡೆಯ ಬಳಗದ ಕೊರಗಿನ ಮೌನದ ಕೂಗನು ಕೇಳಿ! ೧ “ಹೇಳಲಿಕಾಗದ ಕಾಲದಿಂದಲೂ ತಾಳಿ ಗಾಳಿ-ಮಳೆ ಚಳಿ-ಬಿರುಬಿಸಿಲು ಸೊಗಸೇನನೊ ಬದುಕಿಗೆ ಬಯಸಿದೆವು, ಹಗಲಿರುಳೂ ತಪದೊಳು ಬಳಲಿದೆವು…. ಆದರು ನಮಗಿಹ ಹೆಸರೇನು ? ಬಂಡೆಯೆ ಅಲ್ಲವೆ ...

ಬೆಳಕನೆರಚು, ಚಳಕನೆರಳು, ಯುಗ-ಯುಗಾಂತ ತೊಳಗಲಿ! ಇಳೆಯ ಕವಿದ ಕಳ್ತಲೆಯನು ಕಳೆದೊಗೆ ದೀಪಾವಳಿ! ೧ ಬರಿಯ ಒಂದೆ ಇರುಳು ಬಂದೆ ಮುಗಿಯಿತೇನು ಕಾರ್‍ಯ? ವರುಷದಿ ನೂರಾರು ತಮಸಿ- ನಿರುಳಿವೆ ಅನಿವಾರ್ಯ! ಅಂದಂದಿನ ಕತ್ತಲಿಂದೆ ಮಂದಿಯ ಮನವಿಡಿದು ಮುಂದೆ ಕರೆ...

೧ ಕೂಗುತಲಿದೆ ಕಹಳೆಯು- ನವಯುಗ ವೈತಾಳಿಯು! ‘ಬಾಳಿದು ಕಾಳೆಗದ ಕಣ!’ ಹೇಳುತಿರುವುದಿಂತಾ ಸ್ವನ ! ಕೂಗುತಲಿದೆ ಕಹಳೆಯು…. ನಮಯುಗವೈತಾಳಿಯು! ೨ ‘ಬೇಡ ಕದನ’ ಎಂದೊರೆವಾ ಕೇಡುಗಾರನೆಲ್ಲಿರುವ….? ಹೇಡಿ ಏನ ಬಲ್ಲನವ? ನಾಡಿಗೆ ಕಾಳೆಗವೆ ಜೀವ...

(ಒಂದು ರೂಪಕ ಕಥನ) ತಿರುಗುತ ತಿರುಗುತ ಹೊರಟೆನು ಕುಮರಿಯ ಹೊಲದ ಕಡೆಗೆ ನಾನು, ಇಳಿನೇಸರ ವೇಳೆಯಲಿ ನೋಡಲಿಕೆ ಸೃಷ್ಟಿಯ ಶೋಭೆಯನು. ಶರತ್ಕಾಲದಾ ಭೂರಮಣಿಯ ಮೆಯ್‌ಸಿರಿಯನು ನೋಡುತಲಿ ಹರುಷವು ಹೆಚ್ಚುತ ಹೃದಯದಿ ಹಿಡಿಸದೆ ಹೊಮ್ಮಿತಾಕ್ಷಣದಲಿ! ಹುರುಳಿ ಹೆ...

ಕೌರವರ ಮಂತಣಗಾರನಾದ ಶಕುನಿ ಮಾಡಿದ ಕಾರ್ಯ ಅಕಾರ್ಯವೆಂದ ನಿಂದಿಸುವುದು, ಅಜ್ಞಾನದ ಪರಿಣಾಮವೆಂದು ಭಾವಿಸಬಹುದಲ್ಲವೆ? ೧ ಧೀರುರೇ, ಭಲಭಲರೆ! ಶಕುನಿಯೇ ನಾ ನಿನಗೆ ತಲೆವಾಗಿ ವಂದಿಸುವೆನೈ! ಭಾರತೀಯರ ಮೇಲೆ ನೀ ಮಾಡಿದುಪಕಾರ ಭಾರವಾಗಿಹುದು ಕಾಣೈ! ೨ ನಿನ...

೧ ಹಗಲು ಮುಗಿವ ಸಮಯ ; ದಿನಪ ಜಿಗಿಯಲಿದ್ದ ಬಾನಿನಿಂದೆ. ಒಗೆದು ಸಂಜೆಗೆಂಪ ತುಂಡುಮುಗಿಲುಗಳಿಗೆ ಬಣ್ಣ ಬರೆದು, ಪಸಲೆನೆಲಕೆ ಸೊಬಗ ಸಲಿಸಿ, ಹಸಿರಿನೆಲೆಯ ಕಳೆಯ ಬೆಳಸಿ, ಮಿಸುನಿವಿಸಿಲ ಪಸರಿಸುತಲಿ ರಸೆಯನಾತ ರಂಜಿಸಿದ್ದ. ಕಾಲವೇನೊ ಬಾಳ ಸೊಗಸು ಎಲ್ಲ ಕ...

(ಒಂದು ಕತೆ) ಚೆಲುವು ಹಿರಿಯದೊ-ಹೃದಯ- ದೊಲವು ಹಿರಿಯದೊ? ಚೆಲುವಿನಲಿಯೆ ಒಲವು ಇಹುದೊ? ಒಲವಿನಲಿಯೆ ಚೆಲುವು ಇಹುದೊ? ಎಳೆಯ ಚೆನ್ನನೊಬ್ಬನಿಂದು ಕೆಲೆದು ಕುಣಿದು ಆಡಿ .ಹಾಡಿ, ಕುಳಿತ ಜನರ ಕಣ್‌-ಮನಗಳ ಸೆಳೆದುಕೊಂಡ ಸೊಬಗನೂಡಿ. ನೆರೆದ ಮಂದಿಯಲ್ಲಿ ಒಂ...

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.) ೧ ‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ, ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ, ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು, ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು, ಅಳತೆಯಿಲ್ಲದ ಪಳು...

ಭಾರತಕ್ಕೆ ಬಂದಿತಂತೆ ಸ್ವಾತಂತ್ರದ ಹುಣ್ಣಿವೆ, ಕನ್ನಡಿಗರಿಗೇನಿದೆ, ಬರಿ ಕಂಬನಿಗಳ ಕಣ್ಣೆವೆ! ೧ ಈ ಹಬ್ಬದ ಬಯಕೆಯಿಂದ ನಾವು ದುಡಿದುದೆಷ್ಟು! ‘ಹಬ್ಬ ಬಹುದು, ಬಹುದು!’ ಎಂದು ಹಿಗ್ಗಿ ಮಿಡಿದುದೆಷ್ಟು! ಆದರೇನು? ಇಲ್ಲ ನಮಗೆ ಸುಖವು ಎಳ್ಳಿನಷ್ಟು- ಭಾ...

123456...8

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...