
ಸೂರ್ಯ! ನಿನ್ನ ಸಾವಿರ ಕಿರಣ ಕೈಯಲ್ಲಿ ಜಗದ ಕಿಟಕಿಗಳೆಲ್ಲಾ ಕೆರೆದು ಬಿಟ್ಟೆ! *****...
ಆಗಸದ ವದನದಲಿ ಸೂರ್ಯ! ಕುಂಕುಮ ಬೊಟ್ಟು ಚಂದ್ರ! ಮೂಗುತಿ ನತ್ತು ನಕ್ಷತ್ರ! ಹೂವು ಸಾವರಿದ ಹತ್ತು ಮೋಡ ತುರುಬಿನ ಸುತ್ತು! *****...
ಕಿರಣ ಕಡಲಲ್ಲಿ ನೀನೊಂದು ಸೂರ್ಯದ್ವೀಪ ಬೆಳಗಿರುವೆ ಜಗತ್ತನ್ನು ಹಿಡದೊಂದು ದಿವ್ಯದೀಪ! *****...
ಸೂರ್ಯ! ನೀನು ಎರಡು ಅಂಕದ ನಾಟಕ ಉದಯ, ಅಸ್ತಮ ರಂಗ ಸಜ್ಜಿಕೆ ಬೆಳಕು, ಕತ್ತಲು ನಾಯಕಿ, ನಾಯಕ ಸಪ್ತಪದಿ ಜಾಮಜಾಮಕ್ಕೆ ಮತ್ತೆ ಮಂಗಳದ ಕೆಂಪು ಆರತಿ ನಾಟಕದ ಅಂತ್ಯಕ್ಕೆ! *****...
ಸೂರ್ಯ! ನಿನ್ನ ಮಹಾಪ್ರಸ್ಥಾನದ ಅಸ್ತಮಕ್ಕೆ ರಾತ್ರಿ ಕತ್ತಲಾಗಿ ಗಹನ ಗಂಭೀರವಾಯಿತು ಚಂದ್ರ ಬಲು ತಣ್ಣಗಾಯಿತು ನಕ್ಷತ್ರ ಇಡೀ ರಾತ್ರಿ ಕಣ್ಣ ಮಿಟಕಿಸಿ ಮತ್ತೆ ನಿನ್ನ ಬರುವಿಗಾಗಿಕಾಯಿತು *****...
ಚಂದ್ರದಂಡೆಯಲಿ ಬೆಳದಿಂಗಳಲಿ ಕರಗಿ ನಕ್ಷತ್ರ ಒಂದು ಸೂರ್ಯೋಪಾಸನೆಯಲಿ ಆಲಾಪಿಸುತಿತ್ತು *****...














