ಮಿನುಗು ದೀಪ

ಆಸೆ

ಹುಲ್ಲುಗಾವಲಿನ ಪುಟ್ಟ ಹೂವಿಗೆ ಬೆಟ್ಟವ ಹತ್ತುವಾಸೆ ಮತ್ತೆ ಗಗನಕೇರಿ ಚುಕ್ಕೆಯಾಗಿ ಥಳಕುವಾಸೆ ಪುಟ್ಟನಿಗೆ ಬೆಟ್ಟು ಚಪ್ಪರಿಸಿ ಜಗಜಟ್ಟಿಯಾಗುವಾಸೆ!

ಮಿಲನ

ಬೆಳಗಿನ ಕಿರಣ ರಾತ್ರಿಯ ಕನಸು ನಿಂತಿವೆ ದಡದೆರಡು ಕಡೆ ಭೋರ್ಗರಿದಿದೆ ಸಾಗರ ಮಧ್ಯೆ ಕನಸು ಕೈ ಚಾಚಿದೆ ಕಿರಣ ಕೈಹಿಡಿಯಲಿಕ್ಕೆ