
ಬಾರೆಲೆ ಗಿಳಿಯೇ ಮುದ್ದಿನ ಮಣಿಯೇ ಪಚ್ಚವ ಧರಿಸಿಹ ರೇಶಿಮೆ ಮರಿಯೇ ಹವಳದ ಕೊಕ್ಕಿನ ಮುತ್ತಿನ ಕಣ್ಣಿನ ಸುಂದರ ಪುಕ್ಕಿನ ಚಂದದ ಗಿಳಿಯೇ। ಬಾ ಬಾ ಬಾ ಮಾಟದ ಪಂಜರ ಬಣ್ಣದ ಹಂದರ ಅದರಲಿ ನಿನ್ನನು ಇರಿಸುವ ಬಾ ಬಾ| ಬಾರೆಲೆ ಬಗೆ ಬಗೆ ಹಣ್ಣನು ನಾ ಕೊಡಿಸುವೆ...
ರಾಜು ಮನೆಯ ಗೋಡೆಯಲ್ಲಿ ಗುಬ್ಬಿಯ ಗೂಡು ಇರುವುದು ಹೆಣ್ಣು-ಗಂಡು ನೆಮ್ಮದಿಯಿಂದಲಿ ಬದುಕುತಿದ್ದವು ಆ ಮನೆಯಲ್ಲಿ ಅನ್ನವನ್ನು ಹುಡುಕಲು ಗುಬ್ಬಿಗಳು ಗೂಡು ತೊರೆದು ಹೋಗುವವು ಕಾಳು ಹುಳುಗಳ ಕಚ್ಚಿಕೊಳುತ ಗೂಡಿಗೆ ಮತ್ತೆ ಮರಳುವವು ದಿನಗಳು ಹೀಗೆ ಗತಿಸಿ...
ತಂದೆಗೆ ಪುಟ್ಟನು ಕೇಳಿದನು ಕಲಿಸು ತನಗೆ ಈಜೆಂದನು ಹಳ್ಳದ ದಂಡೆಯ ಬಾವಿಗೆ ಹೋದರಿಬ್ಬರು ಜೊತೆ ಜೊತೆಗೆ ತಂದೆಯು ಧುಮುಕಿ ಈಜಿದನು ಪುಟ್ಟನು ಕುಳಿತು ನೋಡಿದನು ತಂದೆಯು ಕೈಯ ಹಿಡಿದೆಳೆದು ಸೊಂಟವ ಬಳಸಿ ನಡೆಸಿದನು ಪುಟ್ಟನು ಮೊದಲು ಚೀರಿದನು ಕೈ-ಕಾಲು ...
ಪುಟ್ಟನು ಶಾಲೆಯಿಂದ ಮನೆಗೆ ಓಡಿ ಬಂದ ಪುಸ್ತಕದ ಚೀಲವನಿಟ್ಟು ಹಿಡಿದನು ಕ್ರಿಕೆಟ್ಟು ಬ್ಯಾಟು ಕಿಟ್ಟುವನ್ನು ಕೂಗಿ ಕರೆದ ಮೈದಾನದ ಕಡೆಗೆ ನಡೆದ ಮನದಣಿ ಆಟವನಾಡಿ ಮತ್ತೆ ಇಬ್ಬರು ಜೊತೆಗೂಡಿ ಬೀದಿಯಲ್ಲಿ ಬರುತಿರಲು ಹರಡಿತ್ತು ನಸುಗತ್ತಲು ಬೀದಿಯ ನಾಯಿ...
ಕಿಟ್ಟು-ಪುಟ್ಟು ಗೆಳೆಯರು ಒಂದು ಬೆಳಗು ಹೊರಟರು ಟಾಮಿ ಮೋತಿ, ಅವರನ್ನು ನಡೆದವು ಬಿಡದೆ ಬೆನ್ನನ್ನು ಇಬ್ಬರೂ ಬೆಟ್ಟವ ಏರಿದರು ಕವಳಿ ಕಾರಿಯ ನೋಡಿದರು ಹಿಂದಿನ ರಾತ್ರಿ ಮಳೆ ಬಂದಿತ್ತು ಗಿಡಗಳ ತುಂಬ ಹಣ್ಣಾಗಿತ್ತು ಗೆಳೆಯರು ಹಣ್ಣು ಬಿಡಿಸುತ್ತ ಬಾಯಿ...
ನಮ್ಮಯ ಹಳ್ಳಿ ಚಿಕ್ಕದು ದೇಶಕೆ ಅನ್ನ ಇಕ್ಕುವುದು ಊರ ಸುತ್ತ ಬೆಟ್ಟ ಹಾಕಿದಂತೆ ಅಟ್ಟ ಕಾರಿ ಟೆಂಗು ಕವಳೆ ಸೀತಾಫಲ ನೇರಳೆ ಅಗಸಿ ಊರ ಮುಂದೆ ಆಲದ ಕಟ್ಟೆ ಹಿಂದೆ ಸುಂದರ ದೇವಸ್ಥಾನ ನೋಡು ರಥದ ಚಂದಾನ ಊರ ಹೊರಗೆ ಶಾಲೆ ನಮ್ಮ ಓದು ಅಲ್ಲೆ ಬೇವಿನ ಮರಗಳೆರ...
ರಾಮು ಹಳ್ಳಿ ಬಾಲಕ ಇಟ್ಟಿಹ ರಕ್ತದ ತಿಲಕ ಅವನ ಆಶೆ ಸೈನಿಕ ಆಗೋ ಮಾತು ಕೇಳಿ ಅಪ್ಪ ಅಮ್ಮ ಓದಿಲ್ಲ ದೇಶ ಅಂದರೆ ಗೊತ್ತಿಲ್ಲ ನಾನು ಓದಲು ಕಲಿಸುವೆ ದೇಶ ಭಕ್ತಿಯ ಬೆಳೆಸುವೆ ನಿತ್ಯ ನಿಯಮಿತ ವ್ಯಾಯಾಮ ದೇಹಕೆ ಹೊಸದು ಆಯಾಮ ಎತ್ತರ ದಪ್ಪ ಬೆಳೆಯುವೆ ಸೈನ್ಯ...













