ನಮ್ಮ ಶಾಲೆ ಪಕ್ಕ
ರಸ್ತೆ ಇರುವುದು ಅಕ್ಕ
ಆ ರಸ್ತೆಗೆಲ್ಲ ಹೊಂದಿ
ಬಸ್‌ಸ್ಟ್ಯಾಂಡ್ ಭಾಳ ಮಂದಿ

ಬಸ್ಸಿಗಾಗಿ ಅಲ್ಲಿ
ಸುಡುವಾ ಬಿಸಿಲಲ್ಲಿ
ಮಳೆಯ ಕಾಲದಲ್ಲಿ
ಬೇಡ ಫಜೀತಿ ಇಲ್ಲಿ

ಮೇಷ್ಟ್ರು ಒಂದು ದಿನ
ಕೊಟ್ಟರು ನೆಡಲು ಸಸಿಯನ್ನ
ರಂಗ ರಾಮು ನೆಟ್ಟರು
ದಿನವೂ ನೀರು ಬಿಟ್ಟರು

ಸಸಿಯು ವೇಗದಿ ಬೆಳೆದಿತ್ತು
ಹೆಮ್ಮರವಾಗಿ ನಿಂತಿತ್ತು
ರೆಂಬೆಯ ಹೊರಗೆ ಚಾಚಿತ್ತು
ಜನರಿಗೆ ನೆರಳ ನೀಡಿತ್ತು.

ಮಕ್ಕಳ ಕೆಲಸ ಹೊಗಳಿದರು
ಗುರುಗಳು ಪುಲಕಿತರಾದರು
ಸ್ವಾತಂತ್ರ್ಯ ದಿನಾಚರಣೆಯ ದಿನ
ಈ ಮಕ್ಕಳಿಗಾಯ್ತು ಸನ್ಮಾನ

ದೊಡ್ಡವರಾದ ಮೇಲಿವರು
ಶಾಲಾ ಮಾಸ್ತರರಾದರು
ಕೆಲಸ ಮಾಡಿದ ಕಡೆಗೆಲ್ಲ
ಅರಳಿತು ಹಸಿರು ಬನವೆಲ್ಲ

ಮೆಚ್ಚಿದ ಅವರ ಕೆಲಸವನು
ಸರ್ಕಾರ ಇತ್ತಿತು ಬಹುಮಾನ
ಮಕ್ಕಳಗವರೀ ಬೋಧನೆ
ಇದೂ ದೇಶ ಸೇವೇನೇ

ಬಯಲು ಸ್ಥಳದಲಿ ಕಾಡು
ಬೆಳಸಿದರೆಷ್ಟು ನೋಡು
ವಾಯು ಮಾಲಿನ್ಯ ಇಲ್ಲ
ಸಮೃದ್ಧಿ ಮಳೆ ಬೆಳೆಯೆಲ್ಲ.
*****