ನಿವೃತ್ತಿ ಜೀವನ

ನಾನೀಗ ನಿವೃತ್ತ, ಈಗ ಇಷ್ಟೇ ಕೆಲಸ ಯಾವಾಗ ನೋಡು ಈಗಂದುಕೊಂಡದ್ದನ್ನು ಇನ್ನೊಂದು ಕ್ಷಣಕ್ಕೆ ಮರೆಯುವುದು, ಮರೆತಿದ್ದು ಏನೆಂದು ತಲೆ ಕೆರೆಯುವುದು ಹಗಲಿಡೀ ಕಂಡಕಂಡವರಿಗೆ ಕೊರೆಯುವುದು ರಾತ್ರಿಯೆಲ್ಲಾ ಗೊರೆಯುವುದು ಆಗಾಗ ಏನಾದರೂ ಒಂದಿಷ್ಟು ಬರೆಯುವುದು. *****

ನೆನಪು ಮತ್ತು ಮರೆವು

ನೆನಪು ಮರೆವು ಎರಡೂ ದೇವರು ಕೊಟ್ಟ ವರದಾನ ಯಾವುದನ್ನು ನೆನಪಿಡಬೇಕು ಯಾವುದನ್ನು ಮರೆಯಬೇಕು ಎಂಬ ವಿವೇಕವನ್ನು ಜಾರಿಯಲಿಟ್ಟರೆ, ಆದರೆರಡೂ ಶಾಪವಾಗಿ ಬಿಡಬಹುದು. ದಾರಿ ತಪ್ಪಿ ಮರೆಯಬೇಕಾದ್ದನ್ನು ನೆನಪಿಟ್ಟು ನೆನಪಿಡಬೇಕಾದ್ದನ್ನು ಮರೆತುಬಿಡುವ ಅವಿವೇಕಕ್ಕೆ ಅಪ್ಪಣೆ ಕೊಟ್ಟು...

ವೃದ್ದಾಪ್ಯ

ಮನೆ ತುಂಬ ಹಳೆ ಹಳೇ ಮುರುಕಲು ಸಾಮಾನುಗಳು ಜಿರಲೆ ತಿನ್ನುತ್ತಿರುವ ಆಲ್ಬಮ್ಮುಗಳು ಮೆದುಗೊಂಡ ಹಮ್ಮುಬಿಮ್ಮುಗಳು ಒಂದೊಂದು ಉಸಿರಿಗೂ ಒಂದಿಷ್ಟು ದಮ್ಮು ಕೆಮ್ಮುಗಳು ಏನು ಮಾಡಿದರೂ ಉತ್ತರವೇ ಸಿಗದ ಸಮ್ಮುಗಳು. *****

ಸಾವಸುದ್ದಿ

ಇಂದು ಒಂದು ಕರಿಕಾಗೆ ಕೆರೆ ಅಂಚಿನ ನೀರಲ್ಲಿ ಕತ್ತುವರೆಗೆ ಮುಳುಗುವುದು, ಮೇಲೆದ್ದು ರೆಕ್ಕೆ ಬಡಿಯುವುದು, ಮತ್ತೆ ಮುಳುಗುವುದು, ಎದ್ದೆದ್ದು ರೆಕ್ಕೆ ಬಡಿಯುವುದು ಮಾಡುತ್ತಲೇ ಇತ್ತು. ಪ್ರಾಯಶಃ ಚೆನ್ನಾಗಿ ಸ್ನಾನ ಮಾಡಿ ಬಿಳೀ ಬೆಳ್ಳಕ್ಕಿಯಂತಾಗಿ ಬಿಡಬೇಕೆಂಬ...

ಯಾವ ಹುತ್ತದಲ್ಲಿ ಯಾವ ಹಾವು

ಜೀವನದಲ್ಲಿ ಇದ್ದಿದ್ದೇ ನಲಿವೂ ನೋವೂ ಆದರೆ ಯಾವ ಹುತ್ತದಲ್ಲಿ ಯಾವ ಹಾವು ಸುಳಿಸುತ್ತಿ ಕುಳಿತಿದೆಯೆಂದು ತಿಳಿಯುವಷ್ಟರಲ್ಲಿ ಮೆತ್ತಗೆ ಹತ್ತಿರ ಬಂದು ಬೆನ್ನಹತ್ತಿ ಬಿಟ್ಟಿರುತ್ತದೆ ಸಾವು. *****

ದೂರ ಹತ್ತಿರ

ದೂರದಲ್ಲೆಲ್ಲೋ ಇದ್ದದ್ದು ಹತ್ತಿರಕ್ಕೆ ಹತ್ತಿರದಲ್ಲಿದೆಯೆಂದುಕೊಂಡದ್ದು ದೂರಕ್ಕೆ ಈ ದೂರ ಹತ್ತಿರ, ಅಮಾವಸ್ಯೆ ಹುಣ್ಣಿಮೆ ಇದ್ಯಾವುದೂ ನಿಜವಲ್ಲ; ಎಲ್ಲ ಮನಸೊಳಗೆ ಕನಸುಗಳ ತನ್ನಷ್ಟಕ್ಕೆ ಹೆಣೆವ, ಕ್ಯಾಮರಾದ ಝೂಮ್ ಲೆನ್ಸ್ಗಳ ಮಹಿಮೆ. *****

ಬದುಕು

ಬದುಕೆಂಬುದೊಂದು ತೆರೆದ ವಿಶ್ವವಿದ್ಯಾಲಯ ದೇವರೇ ಕುಲಾಧಿಪತಿ ಬೇಕಿದ್ದನ್ನು ಆರಿಸಿಕೊಂಡು ನೀನೇ ಓದಿಕೊಳ್ಳಬೇಕು ಸಾವಕಾಶ: ಪಾಸಾಗಬೇಕೆಂದು ಅವಸರಿಸಬೇಡ ಹುಷಾರು ಇಲ್ಲಿ ಪಾಸಾದವರಿಗವಲ್ಲ; ಫೇಲಾದವರಿಗೆ ಮಾತ್ರ ಪ್ರವೇಶಾವಕಾಶ *****

ಮನಸ್ಸು

ಕೆಲವರದ್ದು: ಹೊಚ್ಚ ಹೊಸ ಹಸಿರುಟ್ಟ ಮೈತುಂಬ ಬೆಳ್ಳಿ ಮಲ್ಲಿಗೆಯ ಮುಡಿದ ನವಿರುಬಳ್ಳಿ ಹಲವರದ್ದು: ಮೈತುಂಬ ಮುಳ್ಳು ನಿಮಿರಿಸಿ ನಿಂತ ಮೈಲಿ ಮುಖದ ಪಾಪಸು ಕಳ್ಳಿ ಸುತ್ತ ಮುತ್ತಲೂ ಬಿಸಿ ತಾಗಿಸುವ ಬೆಂಕಿಕೊಳ್ಳಿ. *****

ನೈತಿಕತೆ

ನನ್ನೊಳಗಿನ ನೈತಿಕತೆ ಪ್ರತಿ ಮಳೆಗಾಲದಲ್ಲೂ ಸೋರುತ್ತದೆ ಚಳಿಗಾಲದಲ್ಲಿ ನಡುಗುತ್ತದೆ ಬೇಸಿಗೆಯಲ್ಲಿ ಬೇಯುತ್ತದೆ ಅನುದಿನವೂ ನನ್ನನ್ನು ನಿಧಾನವಾಗಿ ಕೊಲ್ಲುತ್ತದೆ. *****
cheap jordans|wholesale air max|wholesale jordans|wholesale jewelry|wholesale jerseys