ಗುಬ್ಬಚ್ಚಿ ಗೂಡು

#ಹನಿಗವನ

ಪ್ರಾಣ ತಿನ್ನುತ್ತಾನೆ

0

ರಾಕ್ಷಸಿಯಾಗಿಯಾದ್ರೂ ಹುಟ್ಟಿದ್ರೆ ಒಂದೇ ಸಾರಿಗೇ ಗುದ್ದಿ ಕೊಂದಾದರೂ ಹಾಕ್ತಿದ್ದ ಈಗ ನೋಡು ನಿಧಾನಕ್ಕೆ ಹಿಂಡಿ ಹಿಂಡಿ ಪ್ರಾಣ ತಿನ್ನುತ್ತಿದ್ದಾನೆ. *****

#ಹನಿಗವನ

ಯಾರದ್ದು ವಿಷ?

0

ಕಚ್ಚಿದ್ದು ನೀನು ಸತ್ತದ್ದು ಪೂತನಿ ವಿಷವಿದ್ದದ್ದು ಎಲ್ಲಿ? ಅವಳ ಹಾಲಲ್ಲೋ ನಿನ್ನ ಹಾಲು ಹಲ್ಲಲ್ಲೋ? *****

#ಹನಿಗವನ

ಹೇಗಮ್ಮಾ ಆಡೋದು ಹೋಲಿ

0

ಹಿಂದಿಂದ ಬಂದು ಎರಡೂಜಡೆ ಹಿಡಿದೆತ್ತಿ ಮೂಸ್ತಾನೆ ಕತ್ತು ಇದ್ದಕ್ಕಿದ್ದಂತೆ ಮುಂದಿಂದ ಬಂದು ಎಲ್ಲರೆದುರೆ ಕೊಡ್ತಾನೆ ಗಲ್ಲಕ್ಕೆ ಮುತ್ತು ಚಾವಣಿ ಮೇಲಿಂದ ಮೈಮೇಲೇ ಹಾರ್ತಾನೆ ದಾವಣಿ ಸೆರಗೆಳೀತಾನೆ ಎಲ್ಲೆಲ್ಲಾದರೂ ಕೈ ಹಾಕಿಬಿಡ್ತಾನೆ. ಥೂ; ನಿಮ್ಮ ಕೃಷ್ಣ ತುಂಬಾ ಪೋಲಿ. ಗೋಪಮ್ಮ ಅವನ ಜತೆ ಹೇಂಗಮ್ಮ ನಾನು ಆಡೋದು ಹೋಲಿ? *****

#ಹನಿಗವನ

ಏನಮ್ಮಾ ಉಂಟು

0

ಅವನ್ಹತ್ರ ಏನಮ್ಮಾ ಉಂಟು? ಅಂದರೆ ಹೇಳ್ತಾಳೆ ನನಗೂ ಅವನಿಗೂ ಜನ್ಮಾಂತರದ ನಂಟಂತೆ ನಂಟು ಅವನಿಗೆ ನೋಡಿದರೆ, ಹದಿನಾರು ಸಾವಿರದ ನೂರಾ‌ಎಂಟು. *****

#ಹನಿಗವನ

ಹೇಳಿರಲಿಲ್ಲವೇ

0

ಹಲ್ಲಿ ಲೊಚಗುಟ್ಟಿದಂತೆ ಕೇಳಿದ ಸದ್ದು ಏನೆಂದು ನನಗೆ ಗೊತ್ತಾಯಿತು. ರಾತ್ರಿ ನನ್ನವನನ್ನು ಕೇಳಿದೆ ಈ ಕೃಷ್ಣ ತುಂಬಾ ಕಳ್ಳ ಅಲ್ಲವೇ? ಅವನು ಹೇಳಿದ, ನಾನು ಮೊದಲೇ ಹೇಳಿರಲಿಲ್ಲವೇ ಮಾರನೆ ದಿನ ಅವಳನ್ನು ಕೇಳಿದೆ, ಹೇಗಿತ್ತು? ಅವಳು ಹೇಳಿದಳು, ನಿನ್ನ ಕಣ್ಣ ಮುಚ್ಚಿ ಹಿಡಿದು ನನಗೆ ಕೊಟ್ಟ ಪುಕ್ಕಲು ಮುತ್ತು ಯಾರಿಗ್ಬೇಕಿತ್ತು? ತುಂಬಾ ಸೆಪ್ಪೆಯಾಗಿತ್ತು. *****

#ಹನಿಗವನ

ಘಾಟಿ ಹೆಂಗಸು

0

ಮೆಲ್ಲ ಮೆಲ್ಲನೆ ಬಂದನೇ ಮೆಲ್ಲ ಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು ನಿಲ್ಲದೇ ಓಡಿ ಹೋದ ಕಳ್ಳಗೆ ಬುದ್ಧಿ ಹೇಳೇ ಅಂತ ಕೋಪದಲ್ಲಿ ಗೋಪಮ್ಮನ ಹತ್ರ ಹೋಗಿ ಮಾಡಿದರೆ ಡ್ಯಾನ್ಸು ನಿಮ್ಮ ಕೋಪ ಯಾತಕ್ಕೆ ಗಲ್ಲಕ್ಕೆ ಮುತ್ತು ಕೊಟ್ಟಿದ್ದಕ್ಕೋ? ಅಥವಾ ನಿಲ್ಲದೇ ಓಡಿ ಹೋದದ್ದಕ್ಕೋ? ಅಂತ ಕೇಳಿಬಿಡೋದೇ ಘಾಟಿ ಹೆಂಗಸು. *****

#ಹನಿಗವನ

ಸುದರ್ಶನ

0

ನಿನ್ನ ಕೈಯಲ್ಲಿ ಇರೋವರೆಗೆ ನೋಡುವವರಿಗೆ ಸುದರ್ಶನ ಕೈಯಿಂದ ಬೀಸಿದೆಯೆಂದರೆ ಅನಂತರ ಉಳಿಯೋದು ಒಂದೇ ಒಂದು; ಒಂದಲ್ಲ ಒಂದು ಪಾಪಿ ಪರದೇಶಿಯ ಅಂತಿಮ ದರ್ಶನ. *****

#ಹನಿಗವನ

ತರ್ಕ-ವ್ಯರ್ಥ

0

ನೀನು ನೋಡಿದರೆ ಹದಿನಾರು ಸಾವಿರದ ನೂರಾ ಎಂಟಕ್ಕೆ ಒಬ್ಬನೇ ಗಂಡ ಪಾಪ ಪಾಂಡವರು ಒಬ್ಬಳಿಗೆ ಐವರು ಗಂಡಂದಿರು ಅರ್ಥಾಥ್ ಸಂಬಂಧವೇ ಇಲ್ಲದ ತದ್ವಿರುದ್ದದ ನಿನ್ನ ಅವರ ಬಾಂಧವ್ಯಕ್ಕೇನಯ್ಯ ಅರ್ಥ ಹೋಗ್ಲಿಬಿಡು ನಿನ್ನ ಬಗ್ಗೆ ಹೀಗೆಲ್ಲಾ ತರ್ಕ ಮಾಡೋದೇ ವ್ಯರ್ಥ. *****

#ಹನಿಗವನ

ಅಯ್ಯೋ

0

ಅಯ್ಯೋ ಗಂಡ ನೋಡಿದರೆ ಕೋಲಲ್ಲಿ ಬಾರಿಸ್ತಾನೆ ಇವನು ನೋಡಿದರೆ ಕೊಳಲಲ್ಲಿ ಬಾರಿಸ್ತಾನೆ. *****

#ಹನಿಗವನ

ದೊಡ್ಡ ಗ್ವಾಲೆ

0

ಅದನ್ನೇ ಹಾಕಿಕೊಂಡು ಬಾ ಅಂತ ಗುಟ್ಟಾಗಿ ಕಿವಿಯಲ್ಲಿ ಹೇಳಿದ್ದು ನೋಡಿ ಸಂಭ್ರಮದಿಂದ ಹಾಕಿಕೊಂಡೆ, ನನ್ನ ಹೊಸ ವಜ್ರದ ಬೆಂಡೋಲೆ ಸಂಜೆ ಓಡಿ ಯಮುನಾ ತೀರಕ್ಕೆ ಹೋಗಿ ನೋಡಿದರೆ ಅಲ್ಲೊಂದು ಹೆಂಗಸರ ದೊಡ್ಡಗ್ವಾಲೆ *****