Home / ಊರು ಕೇರಿಯ ಪದ್ಯಗಳು

Browsing Tag: ಊರು ಕೇರಿಯ ಪದ್ಯಗಳು

ಓದದೇ ಬರೇದೇ ಅರೆಘಳಿಗೆ, ಬದುಕಲಾರೆ ಗುರುವೆ, ಸದಾ ನಿನ್ನ ಚರಣದಾಸನು, ಅನಾವರತದಿ ಗುರುವೆ. ಕೃತಕ ನಗೆ, ಸದಾ ಹಗೆ, ನಿತ್ಯ ಸ್ಫೋಟ, ಭೀತಿ ಗುರುವೆ, ನೆಮ್ಮದಿ ಜೀವಕೆ, ಜ್ಞಾನವೊಂದೇ ತಾರಕ ಮಂತ್ರ ಗುರುವೆ. ಓದಿಲ್ಲದೇ ಕುರುಡು ನಾಯಿ ಸಂತೆಗೆ, ಬಂದಂಗೆ...

ದೀಪಾವಳಿ ದಿನ: ನನ್ನ ಮೈಮನ ಕಮ್ಮಾರನ ಕುಲುಮೇ ಚಟಪಟ ಸಿಡಿವ ಪಟಾಕಿ ಗೂಡು ಎದೆಯಲ್ಲಿ! ದಿವಾಳೆಬ್ಬಿಸಿ, ಪಾತಾಳ ಕಾಣಿಸಿದ ದಿನವ, ನಾ ಹೇಗೆ ಮರೆಲಿ?! ಆದಿಶೇಷನ ತೆರದಿ ಭುಸುಗುಟ್ಟುವೆ! ಕಣ್ಣು ಗುಡ್ಡೆ… ನಿಗಿ, ನಿಗಿ… ಉರಿವ ಕುಡಿಕೆ, ಬ...

ಕರ್‍ದಾಗೆ ವೋಗಾದೇ! ಯೇಳಿ ಕೇಳಿ ಬರ್‍ಲೇನು ಅಳಿಯ್ನೇ? ಗೆಳೆಯ್ನೇ! ಬರ್‍ದೋ ಗ್ವತ್ತಿಲ್ಲ ವೋಗ್ದೋ ಗ್ವತ್ತಿಲ್ಲ ವತ್ತು ಗ್ವತ್ತು ಯೇನಿಲ್ಲ ಗತ್ತು ಮಾತ್ರ ಬಾಳ! ಯಿದು ಮೂರ್‍ದಿನ್ದ ಸಂತಿ ಸಿಂತಿ ಬ್ಯಾಡ ಬಾಳ! ಆದ್ರೂ ಯೆಶ್ಟೊಂದು ಬಡ್ಕೊಂಡಿ?! ಯೇನೆಲ...

ಅದೇ ಯುಗಾದಿ ಹಳೇ ಯುಗಾದಿ ಹರ್ಷವಿಲ್ಲ! ವರ್ಷ ವರ್ಷದಿ ಯುಗಾದಿ! ಅದೇ ಚಿಗುರು, ಹಳೇ ಒಗರು, ಹಳತಿನಲ್ಲಿ ಹೊಸತಿದೆ ಮಾವು, ಬೇವು, ಎಲೆಯು ಉದುರಿ, ಮತ್ತೇ ಅಲ್ಲೇ ಚಿಗರಿದೆ ಇಳೆಗೆ ಕಳೆಯು, ಹೊಳೆವ ತೋರಣ ಕಣ್ಣಿಗೆ ಅದೇ ತುಂಬೆ, ಹೊಂಗೆ, ರಂಬೆ, ಕೊಂಬೆ ...

ಪೆರ್‍ಲಾಜ್ಜ… ನೆಟ್ಟ ಆಲದ ಮರದಲಿ, ಮೊಮ್ಮಕ್ಳು ಮರಕೋತಿ ಆಡಿದ್ದು ನೆನಪು. ಮರಿ ಮಗಾ ಬುಗುರಿ ಕೆತ್ತಿ, ದಾರ ಸುತ್ತಿ, ‘ಗುಯ್’…ಽಽ ಎಂದು, ಊರುಕೇರಿ ಆಲಿಸುವಂತೆ, ‘ಗುಯ್’ ಗುಟ್ಟಿಸಿದ್ದ! ಆಕ್ಷಣ: ಏನೆಲ್ಲ ಮರೆತು, ಬಾಲ್ಯಕೆ ಜಾರಿದ ಜನ...

ಈ ಮಗುವಿಗೇನು ಗೊತ್ತು? ನಗುವುದೊಂದು ಬಿಟ್ಟು! ಬಣ್ಣಬಣ್ಣದ ಫ್ರಾಕುತೊಟ್ಟು ಪಿಳಿ ಪಿಳಿ ಕಣ್ಣು ಬಿಟ್ಟು ಹಗಲಿರುಳು-ಕಲ್ಲು, ಮಣ್ಣು, ಗೊಂಬೆಯೊಂದಿಗೆ ಆಡುವುದು ಗೊತ್ತು! ರಾಮ, ರಹೀಮ, ಪಿಂಟು, ಶಾಂತಿ, ಮೇರಿ, ಬೇಗಂ… ಎಲ್ಲ ತನ್ನವರೆಂದು ಹಿಗ್...

-೧- ದೇವರಿದ್ದಾನೆ ನನ್ನೂರ ಶಿವರಾತ್ರಿಯಲಿ, ಕಳ್ಳಕಾಕರ ನಿರ್ಭಯದಲಿ, ಶವಯಾತ್ರೆಗೆ ಮೇಲುಕೀಳು, ಭೇದವಿಲ್ಲದ ಮನುಜರಲಿ ಮೇರು ನಟ, ನಟಿಯರಲಿ, ಗುರುಹಿರಿಯರ, ಆಶೀರ್ವಾದದಲಿ ಸ್ನೇಹ, ಪ್ರೀತಿ, ಕರುಣೆ, ಮಾತಿನಲಿ, ದುಕ್ಕದಲಿ, ಬಡವರಲಿ, ಮೌನದಲಿ ಸತ್ಯ, ...

ಹೆಣ್ಣು ಕಣ್ಣು ಬಿಟ್ಟು ಚೆಲುವೆಂದಳು! ಗಂಡು: ಹಪಹಪಿಸಿ… “ಅಯ್ಯೋ ದೇವರೇ!ಽ… ಹೆಣ್ಣಿಗಿಶ್ಟು ಚೆಲುವು?!” ಕೊರಗಿ… ಸೊರಗಿ… ಕಣ್ಣು ಬಿಟ್ಟೆ! ದೇವರೆಂದ: ಹೆಣ್ಣಿನಂದ: ಗಂಡಿಗೆಂದ! ದುಂಬಿಗೆಂದ, ನೀ ನಾರಿಗೆ...

ಬಳ್ಳಾರಿ ಬಿಸಿಲೆಂದರೆ… ನಿಗಿ ನಿಗಿ ಉರಿವಕೊಳ್ಳಿ ದೆವ್ವ!! ನಿತ್ಯ ಬಿಸುಲುಗುದುರೆಯೇರಿ, ಗರಿಗೆದರಿ, ಧರೆಗಿಳಿವ, ಸೂರ್‍ಯಮಂಡಲ! ಆಲೆಮನೆಯ, ಕೊಪ್ಪರಿಗೆಯೊಳಗಿನ ಬಿಸಿ ಬಿಸಿ ಕೆನೆ ಬೆಲ್ಲದ, ಕಾಕಂಬಿ ರಸದ, ಸಿಂಚನ! ಕಾದ ತಾರೆಣ್ಣೆ, ಮೈಮೇಲೆ ಸ...

ಕವಿತೆಯಂದರೇನು? ಕಣ್ಣು, ಕಿವಿ, ಮೂಗು, ಅಗಲವಾದ ಬಾಯಿ! ಮುವತ್ತೆರಡು ಹಲ್ಲು, ಬರೀ ನಾಲಗೆಯಲ್ಲ! ಸುಗಂಧ, ಪರಿಮಳ ದ್ರವ್ಯ! ಮುತ್ತು, ರತ್ನ, ವಜ್ರ, ವೈಢೂರ್‍ಯದಂತೆ! ಕಾಮನ ಬಿಲ್ಲಿನ ಸೊಬಗಿನಂತೆ! ೨ ಕವಿತೆಯೆಂದರೇನು? ಕೈ, ಕಾಲು ಸಣ್ಣ, ಹೊಟ್ಟೆ ಡುಬ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....