ಅಂದು – ಇಂದು

ಅಂದು : ಕೆಲವರು, ಬದುಕಿನ ಹಾದಿಲಿ, ಘಮಿ ಘಮಿಸುವಾ ಹಣ್ಣು, ಹೂವು... ಹುಲ್ಲು, ದವನದಾ ಕೃಷಿಗೇ... ಶ್ರಮಿಸುತ್ತಿದ್ದರು! ಇಂದು : ಕೆಲವರು, ನಡೆವ ಹಾದಿಲಿ ಮುಳ್ಳು, ಕಲ್ಲು, ಗಾಜು, ಬಾಂಬಿಟ್ಟು, ಖುಷಿಪಟ್ಟು ವಿಶ್ರಮಿಸುತ್ತಿರುವರು!! ಒಂದೇ...

ತಮಾಷೆ ಪದ್ಯಗಳು

ಎಲ್ಲರ ಮನೆಯ ಹೆಂಚು ಕಪ್ಪು ದೋಸೆ ಕಪ್ಪೇನು?? ಕಪ್ಪನ್ನು ಕಪ್ಪೆಂದರೆ... ಮಕ ಚಿಪ್ಪೇಕೆ?? ೨ ಹೆಂಚಿಗೆ ಬರೀ ಕಾಯುವ ಕೆಲಸ! ಕಾದ ರಬಸಕ್ಕೆ ಬುರು ಬುರು... ಉಬ್ಬುವ ಕೆಲಸ, ಕಡಿಮೇನು?? ದೋಸೆ ತಿರಿವಿದಂಗೇ... ಹೆಂಚು...

ಹನಿಗಳು

ಕಾದು ಕಾದು ಕೇರಿ ದೂರ ಸರಿತು ಊರಿಂದ! * ಊರೆಂಬಾ... ಬ್ರಹ್ಮ ರಕ್ಕಸನಿಗೆ- ಕೇರೆಂಬಾ... ಬೇತಾಳ! * ಈ ಊರುಕೇರಿ ಎರಡು ಕಣ್ಣುಗಳು! ಒಂದು-ಮೆಳ್ಳಗಣ್ಣು, ಮತ್ತೊಂದು- ಕುರುಡುಗಣ್ಣು! * ಈ ಊರು ಈ ಕೇರಿ...

ಎರಡು ಹನಿಗಳು

ನೀರ ಕುಡಿದಾಗೆಲ್ಲ ನೀ ನೆಪ್ಪಾಗುತ್ತೀಯ! ‘ಅಲ್ಲ’ ಬೀಡು! ನೀ ನಜೀರಸಾಬು- ನೀ ‘ನೀರಸಾಬು!’ * ಈಗೀಗ ಎಲ್ಲರ ಕೈಲಿ ಮೊಬೈಲ್ಲು! ಹಾದಿ ಬೀದಿ ತುಂಬೆಲ್ಲ ಉಚಿತ ಬೈಗುಳು...! *****

ಚುಟುಕುಗಳು

ಹೆತ್ತಾಗ ಹೆಣ್ಣಿಗಾಗುವ ನೋವು ದಾದಿಗೆ ಗೊತ್ತು! ಬಸರಿಗೆ ಬೆವರ ಬಸಿದ ಗಂಡಿನ ನೋವು ಎಷ್ಟು ಜನರಿಗೆ ಗೊತ್ತು? * ನಮ್ಮಲ್ಲಿ: ಸಾಫ್ಟ್‌ವೇರ್‍, ಹಾರ್ಡವೇರ್‍, ಅಂಡರ್‍ ವೇರ್‍ ಇಂಜಿನಿಯರುಗಳು! * ದೇವರಿಗೆ ಭಕ್ತರಿಗೆ ಬಲು ಹತ್ತದಾನಂಟು....

ಕವಿತೆಯೆಂದರೆ…

ಕವಿತೆಯೆಂದರೆ... ಪದ, ಹದ, ಮುದ, ಮಾತು ಮಾತಿಗೂ ಮಿಗಿಲು ಮುಗಿಲು. ನಿಗೂಢ ಬಯಲು ಬಟ್ಟ ಬಯಲು ಹೊಳೆ ಹೊಳೆವ ಶಿವನ ಅಲುಗು. ಕವಿತೆಯೆಂದರೆ... ಕಂಬಳದ ಕಸರತ್ತು ಅಮ್ಮನ ಕೈ ತುತ್ತು ಮಗುವಿನ ಮುತ್ತು ಮತ್ತು,...

ಅಣ್ಣ ಬಸವಣ್ಣನಿಗೆ ಪ್ರಶ್ನೆ…

ಅಣ್ಣ ಬಸವಣ್ಣ ಇದೆಲ್ಲ ಏನಣ್ಣ? ನೀ ಬಾಯಿ ಬಿಟ್ಟರೂ ನಂಬದವರ ನೀ ಏನೆಂಬೆ? ಜಾತಿ ಹೀನನಾ ಮನೆಯ ಜ್ಯೋತಿ ನೀ... ಹೀನ ಜಾತಿಗಳ ಪೊರೆದ ದೊರೆ ನೀ...! * ಕಲ್ಯಾಣದ ಬೆಂಕಿ ನೀ ಕೆಳ...

ಅದೇ ಕವಿತೆ

ಅದೇ ಕವಿತೆ ಹರಿತ ಕತ್ತಿಯಂತೆ ಸ್ವಾತಿ ಮುತ್ತಿನಂತೆ ಚಿತ್ತಿ ಮಳೆಯಂತೆ ಕರಾವಳಿ ಲಗ್ನದಂತೆ ಬದಲಾಗದ ವ್ಯವಸ್ಥೆಯಂತೆ. * ಅದೇ ಕವಿತೆ, ಅದೇ ಕಪ್ಪಿಟ್ಟ ಮುಖ ಬಡಿದಾಡೋ ಕೈ ಕಾಲು, ಉರಿಯುತ್ತಿರುವ ಕಣ್ಣುಗಳು ಮುಳುಗಡೆಯಾಗಿರುವ ಊರು...

ಕೆಂಪು ಬಸ್ಸು ನಾ…

ನನ್ನ ಬಣ್ಣ ಕೆಂಪು; ಅದಕ್ಕೆಂದೆ ಸಂಪು? ಸರ್ವರಿಗೆಂದೆ ತಂಪು; ಒನಪು, ವೈಯಾರ, ಥಳಕು ಬಳಕು ಕೈಕುಲುಕು! ಹಳ್ಳ ದಿನ್ನಿ ಊರು ಕೇರಿ ಹಾರಿ; ಹಗಲಿರುಳೂ ಸಾಗಿ, ಚಳಿ ಮಳೆ ಗಾಳಿಗೆ ಮಾಗಿ, ನಿತ್ಯ ದುಡಿವೆ...

ಇ(ಯು)ವ ಕವಿ ಹೇಗಾದ?!

ಗರ ಬಡಿದಿದೆ ಕವಿಗೆ... ಹೇಗಿದ್ದವಾ ಹೇಗಾದನಲ್ಲ?! ಅಯ್ಯೋ ನೋಡ ಬನ್ನಿ! ಕೊರಳಿಗೆ ತಾಯಿತ ಕಟ್ಟಿ, ಹಣೆಗೆ ನಾಮವ ಇಟ್ಟು, ಕಿವಿಗಳಿಗೆ ಹೂವನಿಟ್ಟು, ಗಂಧ ತೀಡಿಕೊಂಡು, ಅಂಡೆಲೆವಾ ಪರಿಯ ಕಂಡು- ಗರ ಬಡಿದಿದೆ ಕವಿಗೆ... ಅಯ್ಯೋ...
cheap jordans|wholesale air max|wholesale jordans|wholesale jewelry|wholesale jerseys