Home / Lata Gutti

Browsing Tag: Lata Gutti

ನಿನ್ನ ಮಾತುಗಳೆಲ್ಲ ಈಗ ನನ್ನವು ಬಾ ನನ್ನ ಕೊಡೆಯೊಳಗೆ, ಮಾತನಾಡಿಸುವೆ ಅಲ್ಲಿಯೇ ನಿಂತರೆ ಹೇಗೆ? ಬಾ ಹತ್ತಿರ ಇನ್ನೂ ಹತ್ತಿರ ನಿನ್ನ ಪ್ರಿಯಬಣ್ಣ ನನ್ನ ಕಿಮೊನೋದಲ್ಲಿ ಹರಡಿದೆ ನೋಡಿಲ್ಲಿ ಕೆಂಪು ಹಸಿರು ನೀಲಿ ಹಳದಿ ಮೇಲೆ ಮೆತ್ತನೆಯ ಹೊಳಪು ನಿನ್ನ ಉ...

ಎಲ್ಲೆಲ್ಲೂ ತೈಲುಬಾವಿಗಳ ಜಿಡ್ಡು ಘಾಟಿವಾಸನೆ ಮರುಭೂಮಿಗಳಿಗದೇನೋ ಜೀವನೋತ್ಸಾಹ ಸೆಳಕು ಸೆಳಕು ಬಿಸಿಲು ಹರಿದೋಡಲು ಹೆದ್ದಾರಿಗುಂಟ ಏರ್ ಕಂಡೀಶನ್‌ಗಳ ಘಮಲು…. ಕಣ್ತಪ್ಪಿ ಎಂದೋ ಬೀಳುವ ಧಾರಾಕಾರ ಮಳೆಯ ಸಾವಿರಕಾಲೋ ನೂರು ಗಾಲಿಗಳೊ ಉರುಳುರುಳಿ ...

ಯಾಕೋ ನನ್ನ ಮನಸ್ಸು ಇತ್ತೀಚೆಗೆ ಸ್ಥಿಮಿತವಾಗಿಯೇ ಉಳಿಯುತ್ತಿಲ್ಲ.  ನನಗೆ ಯಾವ ಕೊರತೆಯೂ ಇಲ್ಲ ಹಾಗೆ ನೋಡಿದರೆ. ದೇಶ ವಿದೇಶಿಗರು ಅಂದುಕೊಳ್ಳುವ ಹಾಗೆ ಅರಬ ನಾಡಿನ ಅರಬರಾಜನ ಹಾಗೆಯೇ ಇದ್ದೇನೆ. ನೂರಾರು ಒಂಟೆಗಳ ಸರದಾರ ಎಂದುಕೊಳ್ಳಿ, ಸಾವಿರಾರು ಎಕ...

‘ಆಸೆಯೇ ದುಃಖಕ್ಕೆ ಕಾರಣ’ ತಿಳಿಸಿದ ಬುದ್ಧ ಬೋಧಿಯಾಗಿ ಆಗಾಗ ಅಲ್ಲಲ್ಲಿ ಅವರವರ ಮನಸಿನಲಿ ಚಿಗುರೊಡೆವ ಜೀವ ಕಣ್ತೆರೆಸುವ ದೇವದೂತ. ಸುಂದರ ನಗರಿ ವೈಶಾಲಿ ಸಸ್ಯ ಶ್ಯಾಮಲೆಯ ನಾಡು ಬೀಡು ಅಂಬವನದ ನಿಶ್ಶಬ್ದ ಹಗಲುರಾತ್ರಿಗೆ ಹೂ ಬಳ್ಳಿಗಳ ಪಿಸುಪಿಸು ಮಾತ...

ಈಗ- ಎಲ್ಲೆಲ್ಲೂ ದೀಪಾವಳಿ ಭೂಮಿಯ ಮೇಲೆ ಬಣ್ಣ ಬಣ್ಣದ ನಕ್ಷತ್ರಗಳ ಜಾತ್ರೆ ಹಸಿರು ಕೆಂಪು ನೀಲಿ ಹಳದಿ ಗುಲಾಬಿ ದೀಪ ದೀಪಗಳ ಸ್ಪರ್ಧೆ ದೀಪ ದೀಪಿಕೆಯರು ಕಣ್ಣು ಮುಚ್ಚಿ ತೆರೆದು ಮುಚ್ಚಿ ತೆರೆದು ಕಚಗುಳಿಯಾಟಕ್ಕೆ ಓಡಾಡುವ ಸಂಭ್ರಮ. ಹರೆಹೊತ್ತ ದೀಪ ಸಾ...

ಕ್ಷಣ ಕ್ಷಣಕೂ ಏರುಬ್ಬರವಾಗಿ ಭಗ್ನವಾಗುವ ಕನಸುಗಳ ಎಸೆಯದಿರಿ ತುಂಬು ಕತ್ತಲೆಯ ಹೆಜ್ಜೆಗಳಿಗೆ ಚುಕ್ಕೆಗಳ ಭರವಸೆಯ ಮಾತುಗಳು ಗಜಿಬಿಜಿ ಹಾದಿಯಲ್ಲೂ ಕುರುಡನಿಗೆ ಕೋಲು, ನಿರಾಳ ಉಸಿರು ಅಂತರಂಗದ ಮಾತುಗಳು ಮೂಕ ಕುರುಡು ಹೆಳವುಗಳೆಂದು ನಿರಾಶರಾದರೆ ಹೇಗೆ...

ಕಾಲನ ಕುದುರೆ ಏರಿ ಸಂಕ್ರಾಂತಿಗೆ ಬರುತಿಹ ಸೂರ್ಯ ಮಕರರಾಶಿ ಪ್ರವೇಶಿಸುವ ದಿನ ಪವಿತ್ರ ಸ್ನಾನಕೆ ಆಗಲೇ ಜನದಟ್ಟನೆ ಹೆಣ್ಣುಗಂಡು ಭೇದವಿಲ್ಲದೆ ಮುಳುಗೇಳುವ ಪ್ರಾರ್ಥಿಸುವ ಭಕ್ತಿ ಮಾರ್ಗಿಗಳ ಬೆಳಗು ಚಳಿಗೆ ಮೈಮರಗಟ್ಟುವ ಸಮಯ ನೆಲದ ಕಣ ಕಣ ಉಸುರಿನೊಳು ...

ಮರುಭೂಮಿ ಸೀಳಿಕೊಂಡೇ ನನ್ನ ಕಾರು ತಾಸಿಗೆ ೧೨೦ ಕಿ.ಮೀ. ಸ್ಪೀಡಿನಲ್ಲಿ ಓಡುತ್ತಿತ್ತು. ಬೇಗ ಮುಂದಿನ ಊರು ಸೇರಬೇಕೆನ್ನುವ ತವಕ ನನ್ನದೇನಲ್ಲ. ಈ ಹೈಟೆಕ್ ಹೈವೇ, ಕಂಪನಿಯ ಕಾರು, ಲೀಟರಿಗೆ ೫೦ ಪೈಸೆಯಂತೆ ಪೆಟ್ರೋಲ್, ನನ್ನನ್ನು ಆಗಾಗ ಈ ರೀತಿ ಹುಚ್ಚಾ...

ಈಗಷ್ಟೆ ಪತ್ರ ಬಂತು ಮಿ. ಪ್ಯಾಟ್ರಿಕ್‌ನ ಬರವಣಿಗೆ ಕತ್ತೆ ಕಾಲು ನಾಯಿಕಾಲು ಆನೆಕಾಲು ಎಲ್ಲಿಂದ ಓದುವುದು ಎಲ್ಲಿ ನಿಲ್ಲಿಸುವುದು – ಛೇ- ಅರ್ಥವಾಗುವುದೇ ಇಲ್ಲ ಬೇಗ ಅಮೆರಿಕದವ ಮಾತುಗಳು ಸ್ಪಷ್ಟ ಸಾಕಷ್ಟು ಮಾತನಾಡಬಹುದು ಜೋಕ್ಸು ಮಾತುಕತೆಗಳೇ...

ಬಾಂಬು ಭಯೋತ್ಪಾದನೆಯ ಸದ್ದುಗಳು ಇಲ್ಲಿ ಕೇಳಿಸದೇ ಕಾಣಿಸದೇ ಹೋದರೂ ಮನೆಗೆ ಬಂದು ಬೀಳುತ್ತವೆ ಪತ್ರಿಕಾ ಸುದ್ದಿಗಳು, ಟಿ.ವಿ. ಚಿತ್ರಗಳು ಮುಗಿಲುದ್ದ ಬಾಂಬುಗಳ ಹೊಗೆ ನೆಲತುಂಬ ಸಾವು ನೋವುಗಳ ಆಕ್ರಂದನ ಅಮಾಯಕರ ಗೋಳಾಟ ತುಂಡು ತುಂಡಾದವರ ನರಕಯಾತನೆ ತ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....