Home / Poem

Browsing Tag: Poem

ಬೆಂಕಿಯುದರ ಹಡೆದ ತಂಪು ತೇಜ ಇವಳು ಯಾರ ತಪೋಮಣಿಯೋ! ಯಾವ ಆಟದ ಚೆಂಡೋ! ಗೋಲಿ ಗುಂಡೋ! ಬೈಗು ಬೆಳಗುಗಳಲ್ಲಿ ಲಜ್ಜೆಯೇರಿ ಹಗಲೆಲ್ಲ ಕಾವೇರಿ ಇರುಳೆಲ್ಲ ಇನಿಯನ ಸೆಜ್ಜೆಯೇರಿ ಪ್ರದಕ್ಷಿಣೆಯ ನೇಮವ ಚಾಚೂ ತಪ್ಪದೆ ಪಾಲಿಸಿ ಪ್ರಿಯನನೋಲೈಸಿ ಪ್ರಣಯಕೇಳಿಯಲನವ...

ಏನು ಹೇಳಲಿ ಅರ್ಭಾಟ ಅನುರಾಧಾ ಮಳೆಯು ತಾಳಲಾರದೆ ಇಳೆಯು                 ||ಪ|| ಕಟ್ಟಿದ ಕಿಲ್ಲೆ ಕೋಲಾಹಲ ಕಟ್ಟಿದ ಕಿಲ್ಲೆ ಸಡಲಿ ಅನುರಾಧ ಮಳೆಯು ತಾಳಲಾರದೆ ಇಳೆಯು                 ||೧|| ಗಾಳಿ ದೂಳಿ ಜೋಳದ ರಾಶಿ ಜೋಳದ ರಾಶಿ ತೇಲ್ಹೋಗಿ ತೆನ...

ಬಂದೇ ಬರತಾವ ಕಾಲ ಮಂದಾರ ಕನಸನು ಕಂಡಂಥ ಮನಸನು ಒಂದು ಮಾಡುವ ಸ್ನೇಹಜಾಲ – ಬಂದೇ ಬರತಾವ ಕಾಲ ಮಾಗಿಯ ಎದೆ ತೂರಿ ಕೂಗಿತೊ ಕೋಗಿಲ, ರಾಗದ ಚಂದಕೆ ಬಾಗಿತೊ ಬನವೆಲ್ಲ, ತೂಗುತ ಬಳ್ಳಿ ಮೈಯನ್ನ ಸಾಗದು ಬಾಳು ಏಕಾಕಿ ಎನುತಾವ – ಬಂದೇ ಬರತಾವ ...

ಅವಳು ಕಣ್ಣ ತೆರೆದಳು ಮೆಲ್ಲಗೆ ಮೂಲೆ ಮೂಲೆ ಮೈಮುರಿದೆದ್ದಳು ಹೊಂಗದಿರ ಪೊರಕೆಯಿಂದ ಸಂದು ಗೊಂದುಗಳ ಝಾಡಿಸಿ ಕತ್ತಲು ಕಸ ಗುಡಿಸಿದಳು ಮೂಡಲ ಬಾಗಿಲ ತೆರೆದು ಇರುಳ ಹೊದಿಕೆಯನೋಸರಿಸಿ ತನ್ನಿನಿಯನ ಮೈತಟ್ಟಿ ಎಬ್ಬಿಸಿದಳು ಕಣ್ಣ ತೆರೆಸಿದಳು ಗಾಳಿಯೂದಿನಕ...

ಅಲಿ ಸೂತ್ತರದಾಟಾ ಐಸುದದಿ ಅಲಾವಿ ಬಲುದಾಟಾ                         ||ಪ|| ಕಲಿಯೊಳಗ ಹೆಚ್ಚಾದಿತು ಕರ್ಮವು ಕೊಲಿಯುಕ್ಕಿ ಬರಬರಿತು ಭೂಮಿಗೆ ದುಷ್ಕಾಳದ ಮಾಟ ಐಸುರದಿ ಅಲಾವಿ ಬಲುದಾಟಾ                       ||ಅ.ಪ.|| ನೊಂದಿತು ಬಹುಮಂದಿ ಗ...

ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬ ಪ್ರೀತಿ! ಈಗ ಯಾಕೆ ಜ್ವಲಿಸುತ್ತಿದೆ ಏನೋ ಶಂಕೆ ಭೀತಿ! ಜೇನು ಸುರಿಯುತಿತ್ತು ನಿನ್ನ ದನಿಯ ಧಾರೆಯಲ್ಲಿ, ಕುದಿಯುತಿದೆ ಈಗ ವಿಷ ಮಾತು ಮಾತಿನಲ್ಲಿ. ಒಂದು ಸಣ್ಣ ಮಾತಿನಿರಿತ ತಾಳದಾಯ್ತೆ ಪ್ರೇಮ? ಜೀವವೆರಡು...

ಹುಟ್ಟಿನಿಂದ ಆ ಚಟ್ಟ ಮಟ್ಟ ಈ ಬಟ್ಟ ಬಯಲಿನಾಟ ಜಗದ ಸೊಗದ ಬೇರಾದ ಬಂಧವಿದು ಸೃಷ್ಟಿಕರ್ತನಾಟ ಹೆಣ್ಣು: ಕಾಯಿ ಬೆಳೆದು ದೊರೆಗಾಯಿಯಾಗುತಿರುವಾಗ ಬೇರೆ ಬಣ್ಣ ಯಾರ ಕಣ್ಣು ತಾಕೀತು ಎಂದು ಅಡಗುವಾ ನಡುವು ಸಣ್ಣ ಅಂಗ ಅಂಗದಲಿ ಆ ಅನಂಗನಾಡುವನು ಮಂಗನಾಟ ಉಬ್...

ಕರ್ಣಬಂದು ಕರ್ಬಲದಲಿ ಪಾರ್ಥಾ ವರ್ನಕಂಡು ಕದನಕ ನಿಂತ ಸು-       ||ಪ|| ವರ್ಣಪೀಠ ಮದೀನ ಶಾರದಿ ಪರ್ವ ಅಶ್ವನೇರಿದನೆಂತು             ||ಅ.ಪ.|| ಭಾಪುರೆ ಅರ್ಜುನ ತಪ್ಪಿಸಿ ಹರಿತ ವರ್ನ ಕೋಪ ತಿಳಿ ಕುರುಕ್ಷೇತ್ರದಲಿ ಭಾಪುರೆ ನಿನ್ನನು ಹುಡಕುತ ಬಂ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...