Home / Kannada

Browsing Tag: Kannada

ಪ್ರತಿ ಹೂವೂ ಸಾರುತ್ತಿದೆ ಭಗವಂತನ ಚೆಲುವ ಪ್ರತಿ ಬೆಳಗೂ ಹಾಡುತ್ತಿದೆ ಭಗವಂತನ ಒಲವ ಹರಿವ ನೀರು, ಸುಳಿವ ಗಾಳಿ ತಿರುಗುವ ಋತು ಚಕ್ರ ಮಾತಿಲ್ಲದೆ ಸೂಚಿಸುತಿವೆ ಭಗವಂತನ ನಿಲುವ. ಕೋಟಿ ತಾರೆ ಬಾನಿನಲ್ಲಿ, ಭೂಮಿಯೊಂದು ಚಿಕ್ಕಿ ನೀಲಿಬಾನಿನಲ್ಲಿ ಸುಳಿದ...

ದುಷ್ಟರನು ಬಹುದೂರವಿರಿಸಯ್ಯ ಹರಿಯೆ ಇಷ್ಟಾರ್ಥಗಳನೆನಗೆ ಕೊಡದಿರಲು ಸರಿಯೆ ಎನ್ನ ಒಳಗಡಗಿರುವ ಕಳ್ಳರಿಗೆ ಸೋತಿಹೆನು ನಿನ್ನ ಧ್ಯಾನವನೆನಗೆ ದಕ್ಕಗೊಡರಿವರು ಕಣ್ಣು ಬಡಿಯುವ ಕ್ಷಣಕೆ ನಿನ್ನ ಮರೆಸುತಲಿಹರು ಇನ್ನಾವ ಬಗೆಯೊಳಗೆ ಧನ್ಯಳಾಗುವೆನೊ ವಿಷಮಯದ ಮ...

ದಾರಿ ಎಂದರೆ ಎಲ್ಲರ ಪಾದದ ಗುರುತುಗಳು ಹೊತ್ತ ಭಾರದ ಹೃದಯದ ಮನ ಕಾಣಿಸುವ ಚಲನೆ, ಫಳಫಳಿಸಿದ ಬೆವರು ಹನಿಗಳು. ದಾರಿಗುಂಟ ಸಾಗಿದ ಕಣ್ಣೋಟಗಳು, ಅಂತರಂಗ ಕಲುಕಿ ಬೀಸುವ ಗಾಳಿ, ಪೂರ್ವವಲ್ಲದ ನಡುವೆ, ಒಮ್ಮೊಮ್ಮೆ ಸೂಸುವ ತಂಗಾಳಿ. ವರ್ಷಗಳು ಋತುಗಳು ಮೈಲ...

ಹೆಂಡದಂಗಡಿಯಂತೆ ಕತ್ತಲು ಕೋಣೆ ನಮ್ಮ ಮನೆ ದೇವರ ಕೋಣೆ ದಿನಕೆರಡು ಬಾರಿ ಅವನ ಸ್ನಾನ ಊಟ ಉಪಚಾರ ಧೂಮಪಾನ ಈಸಾಯಿ ಧಪನದಂತೆ ಧೂಪಾನದ ಹೊಗೆ ಹಿತ್ತಾಳೆ ತಟ್ಟೆಯಲಿ ಕೆಂಪು ದಾಸವಾಳದ ಹೂವು ಆಗತಾನೇ ಕೊರೆದಿಟ್ಟ ಮಾಂಸದ ಹಾಗೆ! ಮೌನ! ತಲೆ ಕೆಳಗೆ ಕಾಲು ಮೇಲ...

ಅದೇಕೆ ಶರಧಿ ನೀ ಹೀಗೆ ಉಕ್ಕಿ ಆರ್ಭಟಿಸುವೆ ಎದೆಯಾಳದ ಭಾವಗಳ ಹರಿಬಿಡುವೆಯಾ ಹೀಗೆ ನೀ ಎಷ್ಟೆ ಉಕ್ಕಿದರೂ ವೇಗೋತ್ಕರ್ಷದಿ ಬೋರ್ಗರೆದರೂ ನಿಲ್ಲಲಾರೆ ನೀ ಕೊನೆಗೂ ದಡದಿ ಉಕ್ಕಿದಷ್ಟೆ ವೇಗದಿ ಹಿಂದಕ್ಕೋಡುವೆ ಪುಟಿದೆದ್ದ ಚಂಡಿನಂತೆ ಗುರುತ್ವಾಕರ್ಷಣೆಯ ಮ...

ಇಲ್ಲ ಅಕ್ಕಪಕ್ಕದ ಪರಿವೆ ಬೇಕಿಲ್ಲ ಕಣ್ಕಾಪಿನಾಚೆಯ ಗೊಡವೆ ಉದ್ದಾನು ಉದ್ದ ಕಣ್ಣು ಹಾಯ್ದಷ್ಟು ದೂರ ದಾರಿ ಮಲಗಿದೆ ಹೀಗೇ… ನೇರ ಏರುಪೇರಿಲ್ಲ. ಅಡೆತಡೆಗಳೂ ಇಲ್ಲ ಚೌಕಟ್ಟು ಮೀರಿ ನೋಡುವಂತಿಲ್ಲ ತನ್ನ ಪರಿಧಿಯೊಳಗೆ ಕಂಡದ್ದೇ ಸತ್ಯ ಮಿಕ್ಕಿದ್ದೆ...

ತಮ್ಮೂರಿಗೆ ಎಲೆಕ್ಟ್ರಿಕ್ ಲೈಟ್ಸ್ ಬರುವಂತೆ ಮಾಡಬೇಕೆಂದು ಆಗುಂಬೆ ಸಮೀಪದೊಂಟಿ ಮನೆಯ ಜಮೀನ್ದಾರರು ಒತ್ತಾಯಪಡಿಸುತ್ತಲೆ ಇದ್ದರು ಲೈಟ್ ಲೈಟ್ ಅಂದಾಗಲೆಲ್ಲಾ ಎಂ.ಎಲ್.ಎ ವೆಯಿಟ್, ವೆಯಿಟ್ ಎನ್ನುತ್ತಲೇ ಇದ್ದರು. ಅಂತೂ ಕೊನೆಗೊಂದು ದಿನ ಕ್ವೈಟಾಗಿ ಬಂ...

ರೊಕ್ಕದ ರೇಸು ಹೊಂಟೈತೆ ತಗೊ ಸಿಕ್ಕಿದ ದಾರಿಯೆ ಹಿಡಿದೈತೆ ನನಗೇ ತನಗೇ ಎನ್ನುತ ನುಗ್ಗಿದೆ ಬಾಚುತ ದೋಚುತ ಗಳಿಸುತ ಬಲಿಯುತ ಓಡಲಾಗದೇ ಕಂಗೆಟ್ಟವರನು ತೊತ್ತಳ ತುಳಿಯುತ ಸಾಗೈತೆ ಹೊಟ್ಟೆಗಿಲ್ಲದೇ ಬಟ್ಟೆಗಿಲ್ಲದೇ ಗೂಡು ಇಲ್ಲದೆ ಪಾಡು ಇಲ್ಲದೆ ನರಳುವ ಮ...

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...