ಒಳ್ಳಿತೆಲ್ಲಿಹುದಿಲ್ಲ ಕೃಷಿಯಲ್ಲಿ?

ಎಲ್ಲಿ ನೋಡಿದರಲ್ಲಿ ರೈತ ಬವಣೆಗಳು ನೂರು ಬೆಳೆಯದಾವುದಾದರು ಈರುಳ್ಳಿ ಸುಲಿದ ನೀರು ಕೊಳತ ಟೊಮೇಟೋದೀಪರಿಗೆ ಬಂದೀತು ಕಾರು (ವಾಂತಿ) ಹೇಳಿ ಕೇಳಿ ಕಲ್ಪವೃಕ್ಷವೆಂದವರ ಆಸೆಗಳು ಚೂರು ಮೊಳೆತೆನ್ನಾರಂಭದಾಶಯಕೆಲ್ಲಿಹುದು ನೀರು - ವಿಜ್ಞಾನೇಶ್ವರಾ *****

ಕತ್ತೆತ್ತಿದರೆಲ್ಲವೂ ಕಷ್ಟ ಕಾಣುವುದಲ್ಲಾ?

ಬಿತ್ತನೆಯೊಳುತ್ತಮವು ಕಷ್ಟ ಸುತ್ತ ಕೊಳವೆ ಬಾವಿಯಾಳವು ಕಷ್ಟ ಎತ್ತಲಾ ನೀರನುತ್ತಮದ ವಿದ್ಯುತ್ ಕಷ್ಟ ಉತ್ತು ಬಿತ್ತುವಾಳುಗಳೊಲುಮೆ ಕಷ್ಟ ಎತ್ತ ಪೋದರು ಪೇಳ್ವರಲಾ ಕೃಷಿ ಕಷ್ಟ ಕಷ್ಟ -ವಿಜ್ಞಾನೇಶ್ವರಾ *****
ವಚನ ವಿಚಾರ – ಸಂಧಿಸುವುದು ಇಲ್ಲ

ವಚನ ವಿಚಾರ – ಸಂಧಿಸುವುದು ಇಲ್ಲ

ಗಂಧವ ವಾಯು ಕೊಂಬಾಗ ಅದ ತಂದು ಕೂಡಿದವರಾರು ನಿಂದ ಮರಕ್ಕೆ ಸುಗಂಧ ಹುಟ್ಟುವಾಗ ಅದ ಬಂಧಿಸಿ ತಂದು ಇರಿಸಿದವರಾರು ಅವು ತಮ್ಮ ಅಂಗಸ್ವಭಾವದಂತೆ ನಿಂದ ನಿಜವೆ ತಾನಾಗಿ ಅಲ್ಲಿ ಬೇರೊಂದು ಸಂದೇಹವ ಸಂಧಿಸಲಿಲ್ಲ ಎಂದನಂಬಿಗಚೌಡಯ್ಯ...

ಕಾವ ಬೆಳೆಯೆಂದಾವ ಬೆಳೆಯನಾಯ್ದುಕೊಳ್ಳಲಿ?

ಆವ ಬೆಳೆಗಾವ ದರವಪ್ಪುದೋ ಆ ಕಾಲ ಅವಕಪ್ಪ ಮೂಲ ಧನವನೆಂತು ಹೊಂದಿಸಲಿ ಸಾವಯವವೆನಲೋ ಸಾಲದಾ ಬಲವೆನಲೋ ನೋವಿಲ್ಲದೆನ್ನ ಬದುಕಿನಾಶಯಕಾವ ಕೃಷಿ ಮೇಲೋ ತವ ಕಾಯದಾನೆಂತು ದೋಸೆರೆವುದಿಲ್ಲಿ - ವಿಜ್ಞಾನೇಶ್ವರಾ *****
ವಚನ ವಿಚಾರ – ಕೊಟ್ಟ ಕುದುರೆ

ವಚನ ವಿಚಾರ – ಕೊಟ್ಟ ಕುದುರೆ

ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಅಲ್ಲಮನ ವಚನ. ಬಹುಶಃ ಮನುಷ್ಯ ಮಾತ್ರವೇ...

ಕಾನನವಿಲ್ಲದೆ ಆನೆಯೆಂತು? ಕೃಷಿಯೆಂತು?

ಆನೆ ದಂತದವೊಲಾಯ್ತಲಾ ಕೃಷಿ ಭೂಮಿ ಯನು ನಿವೇಶನಕೆಂದು ಮಾರಿದೊಡುಂಟು ಘನ ಬೆಲೆಯದನು ಉತ್ತು ಬಿತ್ತಿದೊಡೆ ಆನೆ ಸಾಕಿದಂದದಲಿ ಬರಿ ಖರ್ಚು ಮಾನಿಸೆಲೋ ಕಾನನವನತಿ ತುರ್‍ತಿನಲಿ - ವಿಜ್ಞಾನೇಶ್ವರಾ *****
ವಚನ ವಿಚಾರ – ಸಂಬಂಧ

ವಚನ ವಿಚಾರ – ಸಂಬಂಧ

ಕೈ ಕೈದ ಹಿಡಿದು ಕಾದುವಾಗ ಕೈದೊ ಕೈಯೊ ಮನವೊ ಅಂಗ ಲಿಂಗ ಸಂಬಂಧದಲ್ಲಿ ಸಂಬಂಧಿಸುವಾಗ ಅಂಗವೊ ಲಿಂಗವೊ ಆತ್ಮನೊ ಕಾಲಾಂತ ಭೀಮೇಶ್ವರಲಿಂಗವನರಿದುದು [ಕೈದ-ಆಯುಧವನ್ನು] ಡಕ್ಕೆಯ ಬೊಮ್ಮಣ್ಣನ ವಚನ. ಇದು ಕುತೂಹಲಕರವಾದ ಪ್ರಶ್ನೆಯೊಂದನ್ನು ಕೇಳುತ್ತಿದೆ. ಆಯುಧ...

ಆರೆಂದರೀ ಸಾವಯವದೊಳೆಲ್ಲ ಬರಿ ಲಾಭವೆಂದೆನುತ?

ಆರೋಗ್ಯ, ಐಶ್ವರ, ಅವಕಾಶವಿಹುದಿಲ್ಲಿ ಹಿರಿದು ಸಾವಯವವೆಂದರದು ಬರಿದು ಒರೆದು ನೋಡಿದರಿದಕೆ ಹಿರಿ ಸಾಕ್ಷಿ ಸಿಗದು ತರತಮವು ವರ ಬರವು ಜಗದ ಸೂತ್ರವಿದ ನರಿದು ಮಾಡುವ ತಪದ ಪರಿ ಸಾವಯವ - ವಿಜ್ಞಾನೇಶ್ವರಾ *****
ವಚನ ವಿಚಾರ – ಅಸಹಾಯಕ

ವಚನ ವಿಚಾರ – ಅಸಹಾಯಕ

ಕೆಸರಲ್ಲಿ ಬಿದ್ದ ಬಡಪಶುವಿನಂತೆ ಆನು ದೆಸೆದೆಸೆಗೆ ಬಾಯಿ ಬಿಡುತ್ತಿದ್ದೇನೆ ಅಯ್ಯಾ ಆರೈವವರಿಲ್ಲ ಅಕಟಕಟಾ ಪಶುವೆಂದೆನ್ನ ಕೂಡಲ ಸಂಗಮದೇವ ಕೊಂಬ ಹಿಡಿದೆತ್ತುವನ್ನಕ್ಕ [ಆನು-ನಾನು, ಆರೈವರಿಲ್ಲ-ಆರೈಕೆಮಾಡುವವರಿಲ್ಲ] ಬಸವಣ್ಣನ ಈ ವಚನ ಅಸಹಾಯಕತೆಯನ್ನು ಕುರಿತದ್ದು. ಈ ವಚನವನ್ನು ಕುರಿತು...

ಅರಿತೊಡಾ ಮರಕು ಗೊಬ್ಬರಕು ಅಂತರವದೇನು?

ಮರತಾನೊಲಿದು ಕೊಟ್ಟುದನುಂಡು ಬೆಳೆವೆಮ್ಮ ಶರೀರದೊಳು ಹಿರಿದಂಶ ಬರಿ ಗೊಬ್ಬರವಾಗುತಿರಲಿದ ನರಿದು ತ್ವರಿತದೊಳು ವಿಲೆವಾರಿ ಮಾಡಲೆಲ್ಲೆಡೆಗು ಆರೋಗ್ಯ. ಮಲ ಮರಕೊದಗಲದು ಜಗದ ಭಾಗ್ಯ ನಿರವಯವ ಗೊಬ್ಬರದುಬ್ಬರ ರೋಗದೊಳೆಲ್ಲೆಲ್ಲೂ ತ್ಯಾಜ್ಯ - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys