
ತುದಿಗಾಲಿನೊಳು ನಿಂತು ನೋಡುತಿದೆ ಚೆಲುವಿಲ್ಲಿ ಹುರುಳದೇನಿಹುದೆಂದು ಬೇಲಿಯಾಚೆ ತುದಿಗಾಲಿನೊಳೆ ತಿಳಿವು ನೆಗೆದು ಕುಸಿದೇಳುತಿದೆ ಕೌತುಕವದೇನೆಂದು ತಡಿಕೆಯೀಚೆ ತನ್ನ ಜಂಘೆಯ ಬಲವನುಡುಗಿ ಕೆಡೆದಿಹುದಳಲು ಹರಕೆಯೊಳು ಬಾಗಿಲೆಡೆ ಬೆತ್ತಲೆಯೊಳು ತುಡಿತುಡ...
ನಾ ನೋಡುನೋಡುತಿಹ ನೋಟವಿದ ನಾನರಿಯೆ ಎಲ್ಲು ಕಾಣದ ಬೆರಗನಿಲ್ಲಿ ನಾ ಪಡುವೆ; ಹೊರಜಗದ ನಿಜವಲ್ಲ ಭವದ ತೋರಿಕೆಯಲ್ಲ ನಟನೆಯಲ್ಲಿದು, ನನ್ನಿ, ಎಂಥದಿದು ಎನುವೆ- ಅಲ್ಲಿ ಮೊಳೆವಾಸೆಭಯಕಲ್ಲೆ ಶಮನವ ಕಾಣೆ ಇಲ್ಲಿಗೈತಹ ಮಂದಿಯಚ್ಚರಿಯದಿರಲಿ ಅಲ್ಲಿಯದನೇನನೂ ಒ...
ಜಾರುಗೆನ್ನೆಯ ಕಡೆಗೆ ಸುಳಿವಾಸೆ ದಿಟ್ಟಿಗಳ ದಟ್ಟಿಸುತ ಓಲೆಮಣಿ ಮೊನೆವೆಳಗನೆಸೆಯೆ ಕೈಮುಗಿವ ಪ್ರಮದೆಯರ ಕಂಕಣಗಳಲುಗುತ್ತ ಕುಂಬಿಡುವ ಬಳುಕುಮೈಗೆಚ್ಚರಿಕೆಯುಲಿಯೆ, ಅಂದಿನಿಂದಿ೦ದುವರೆಗೊಂದೆ ಏರಿಳಿತದೊಳು ಶ್ರೋತ್ರಪಥಕಿಳಿದು ಬಹ ವೇದಬೃಂಹಿತಕೆ ಮನದೆಲ್...
ಸ್ಫುರ್ಜದೂರ್ಜಸ್ವಿತೆಯ ಚೈತನ್ಯದೊಂದೆಳೆಗೆ ಜನ್ಮಲಯಲಯಗತಿಯೊಳುಳಿಯೇಟ ಹೊಡೆದು ಕಾಲ ಬಲುಹಿಂದಣದ ಅದನೆ ಆ ಜೀವವನೆ ಕಂಡರಿಸಿದೀ ತನುವು ಹೊಸದು ನನ್ನದಿದು; ಬಗೆಬಗೆಯ ಪರಿಸರದ ವಾಸ್ತವವ್ಯಾಘಾತ- ದೊಳಗಿರವ ನೆಲೆಗೊಳಿಸಿ ಹದುಳದೊಳು ನಡೆಸಿ ಜ್ಞಾನಾರ್ಜನೋಪ...
ತಾಂ ತೂರಿ ಬರುತಿರುವ ಮನಮನದ ಮಾಧ್ಯಮದ ಚಿತ್ರಚಿತ್ರಾಕೃತಿಯ ತಳೆದೆಸೆವ ಬೆಳಕೋ ಅವಿಭಾಜ್ಯವಾಗಿಯೂ ನೆನೆವವರ ಹಿತವರಿತು ರೂಪಿನುಪದೆಯ ಭೂಮೆ ಪತಿಕರಿಪ ತಳಕೋ ಧ್ಯಾನಗಹ್ವರಮುಖದಿ ಕಣ್ಣು ಕಪ್ಪಲುಬೀಳೆ ಅಂಗಾಂಗದೊಳು ಚೆಲುವ ಹೊಳೆಸುತಿಹ ಕಳೆಯೋ ರೂಪಮಿದಮಾನ...
ರೂವಾರಿ ರೂವಿಟ್ಟ ಕಲ್ಲಲ್ಲ, ಮೂರ್ತಿಯಿದು, ಎಂತೆಂದರಂತಾಗಬಲ್ಲ ಬಯಲಲ್ಲ, ಮನುಜನಳಲಿಂ ಮೂಡಿದೊಲುಮೆಮಾತ್ರವಿದಲ್ಲ, ನ್ಯಾಯನಡೆಸುವ ನಿಷ್ಠುರದ ನಿಯತಿಯಲ್ಲ. ಜಡದಿಂದ ಜೀವಕ್ಕೆ ಜೀವದಿಂದಾತ್ಮಕ್ಕೆ ಆತ್ಮದಿಂ ರಸಪದಕೆ ಇರವನಿದ ಸೆಳೆವ ಚೇತನಾಯಸ್ಕಾಂತ ಜಾನ...
ತೊರೆ ಹಾಡುತಿರೆ ಚುಕ್ಕಿ ಸೂಜಿವೆಳಗಿಂ ಚುಚ್ಚಿ ಮನಕೆ ಬಗೆಬಗೆ ಭಾವಗಳ ಹಚ್ಚೆಯೊತ್ತೆ ಸೌಂದರ್ಯವಿಹ್ವಲಸ್ವಾಂತನೆನ್ನಾದರಿಸೆ ಸೆಳೆದೆಲ್ಲದೆಸೆಗಳನು ನೆಲದುಸಿರು ಮುತ್ತೆ ಅಪ್ ತೇಜಗಳು ಬೆರೆದ ತಿಳಿವೊನಲನನುಕರಿಸಿ ನನ್ನೊಳಗು ಬಾಹ್ಯಾ೦ತರ್ಯಭೇದವಳಿಯೆ ಅರ...
ಉಜ್ಜೀವಿಸಲು ಬಯಸಿ ಹಾತೊರೆದು ಹೊರನಿಂತು ಗಾನ ಆಶ್ರಯವೆರೆವ ದಿವ್ಯ ಸಂಮುದವೇ, ತನಗೆ ತಡೆಯಿಲ್ಲವೆನೆ ಕೃತಮನಶ್ಶಮಹಾರಿ ಸೂಭ್ರೂಕಟಾಕ್ಷಕ್ಕೆ ಮೊನೆಯೀವ ಬಲವೇ, ಕುಶಲ ಪರಿಕರ್ಮದಿಂ ಶೃಂಗಾರಗೊಂಡು ಕಲೆ ಬಾಡಿರುವ ಮೊಗವೆತ್ತಿ ಬೇಡುತಿಹ ವರವೇ, ಸುಹೃದನನಹಂ...
ನಲವು ಮುಟ್ಟುತ ಸುಟ್ಟ ಕುರುಹಿಂದ ಕಪ್ಪಿಡಿದ ನನ್ನ ಮನಕೆಂದು ಬಹುದಾ ಚೆಲುವು ಹೊಳವು? ವಿಷಯಂಗಳೊಲ್ಲವಿದ ಆತ್ಮವೂ ಒಲ್ಲದಿದ ರೂಪುಗೆಟ್ಟಿರುವಿದಕೆ ಆವೊಲವು ತೆರವು? ಮುಗಿದೆತ್ತುಗೈಯಿದನು ಕೊಂಡೆತ್ತಿ ಸೆಳೆವರಾರ್ ಸುಮನಸ್ಕರಾಲಯಕೆ ನಿಷ್ಕಳಮಿದಾಗೆ ಸಂದ...
ಇರವಿನತ್ಯುಚ್ಚದೊಳು ಸೆಲೆವೊಡೆವುದಾನಂದ ಶಿಶುಸಾಧುಸಂತಕವಿಯೋಗಿಮುನಿಗೆಟುಕಿ ದುಃಖತೈಷ್ಣೋಪಶಮಜನ್ಯ ಸುಖವಲ್ಲವದು ಭೋಗಕ್ಕೆ ಬಾರದದು ಶಿವಜಟೆಯ ತುಳುಕಿ ತುಡಿವ ತಾರೆಯ ಬೆಳಕಿಗೀಬೆಳಕೆ ಚರಿತಾರ್ಥ- ವೆನೆ ಜೀವಚೈತನ್ಯ ದಸಮತೇಜವದು ವಿಷಯವಿಂದ್ರಿಯದೊಡನೆ ತ...














