Home / Kannada Poems

Browsing Tag: Kannada Poems

ಹೃದಯ ತುಂಬಿ ಬರೆದೆ ನಾನು ಹೊಸದು ಹೊಸದು ಕವಿತೆಯ ನವರಾಗದಿ ನುಡಿಸು ನೀನು ಬಾಳ ಭಾವ ಗೀತೆಯ. ಕಣ್ಣಿನಲ್ಲಿ ಕನಸು ತುಂಬಿ ಕಾವ್ಯ ಧಾರೆಯಾಗಲಿ ಮಾತಿನಲ್ಲಿ ಮಧುವು ತುಂಬಿ ಸರಸ ಸೂರೆಯಾಗಲಿ ಮನಸ್ಸು ಮನಸ್ಸು ಸೇರಿ ಬೆರೆತು ಮಧುರ ಗಾನವಾಗಲಿ ನಿನ್ನೆ ನಾಳ...

ಯಾಕಮ್ಮ ಈ ಕೋಪ, ಈ ರೋಷ, ಇಷ್ಟೊಂದು ಆವೇಶ ಅವರ ಮೇಲೆ? ಬೆಳೆಯ ಗೊಡಲಿಲ್ಲವೇ ಅವರು ನಮ್ಮ- ನಾವಿಂದು ಇರುವ ಹಾಗೆ? ಇರಲಿಲ್ಲವೇ ಲಕ್ಷ್ಮೀಬಾಯಿ ನಮ್ಮ ನಿಮ್ಮ ಹಾಗೆ ಬೆಳೆಯಲಿಲ್ಲವೇ ಅವಳು ದೇಶಕ್ಕಾಗಿ ಜೀವತೆತ್ತು ಝಾನ್ಸಿರಾಣಿ ಲಕ್ಷ್ಮೀಬಾಯಿಯಾಗಿ ನಮಗಿಂ...

ಯಾವುದೇ ಪಯಣ ಗೊತ್ತಿಲ್ಲ ಗುರಿಯಿಲ್ಲ ಆದಿಯೆಲ್ಲಿ? ಅಂತ್ಯವೆಲ್ಲಿ? ಸಾಗಿದೆ ತಿಳಿಯಲಾಗದ ಲೋಕಕೆ, ಮಾಯಾಲೋಕಕೆ ಬದುಕಿದು ಬರೀ ಬೆರಗು ಕಣ್ಣು ಕಟ್ಟು ಆಟದ ಮೆರಗು ಅರಿತವರಿಲ್ಲ ಸೃಷ್ಟಿಯ ಮೂಲ ನದೀ ಮೂಲ ಋಷಿ ಮೂಲ ಹಾಗೆಯೇ ದೇವ ಮೂಲ. ಹತ್ತುವರು ಇಳಿಯುವರ...

ಬರುತ್ತಿದ್ದಾರೆ ಜಾಗ್ರತೆ ಹಗಲು ದರೋಡೆಕೋರರು ಜನ ಸಾಮಾನ್ಯರ ಸುಲಿಗೆ ಮಾಡೋ ಕಲಿಯುಗದ ಬಕಾಸುರರು. ಮನೆಕಟ್ಟುವಾಗ ಬರುತ್ತಾರೆ ಕಾರ್ಪೊರೇಶನ್‌ನ ಸುಲಿಗೆದಾರರು, ಕಟ್ಟಿದ ಮೇಲೆ ಬರುತ್ತಾರೆ ತೆರಿಗೆ ಹೇರುವ ಲಂಚಾವತಾರಿಗಳು. ರಸ್ತೆಗಿಳಿದರೆ ಬರುತ್ತಾರೆ...

“ಸಾವು” ಪದವೇ ಭಯಂಕರ ಭೀಕರ ಎದೆ ನಡುಗಿಸುವ ಎರಡಕ್ಷರ ಹುಡುಕಿದರೂ ಸಿಕ್ಕದು ನೀನಿಲ್ಲದ ಜಾಗ ನಿನ್ನ ನಿರ್ನಾಮಕ್ಕೆ ಮಾಡುತಿಹರು ಮಹಾಯಾಗ ಸಾವಿಲ್ಲದ ಮನೆಯ ಸಾಸಿವೆ ತರಲು ಹೇಳಿದ ಬುದ್ಧ ಸಂಸಾರವೇ ತೊರೆದು ಎದ್ದ ಬಯಸುವವರಾರು ನಿನಗೆ ಸ್ವ...

ನನ್ನ ಮನಸ್ಸೊಂದು ಬಿಳಿಯ ಹಾಳೆ ಅದರಲಿ ನೀವು ಬರೆದಂತೆ ಇರುವುದು ನನ್ನ ನಾಳೆ! ನನಗಿಲ್ಲ ನನ್ನತನ ಹುಟ್ಟುತ್ತಾ ಬರೆದರು ನನ್ನ ಭವಿಷ್ಯ ನನ್ನ ಹೆತ್ತ ತಂದೆ. ಬೆಳೆದಂತೆ ಅಂದರು ನಿನ್ನ ಜೀವನದ ನಾಳಿನ ಲಿಪಿಕಾರ ನಿನ್ನ ಕೈಹಿಡಿದ ಗಂಡ. ನನಗಿಲ್ಲ ನನ್ನತನ...

ಮಾನವನ ಮೂರನೇ ಹಂತವೇ ಮುಪ್ಪು ಮುಪ್ಪು ಬಂದಾಗ ಬೆಪ್ಪು ಎನ್ನುವವರೇ ಹೆಚ್ಚು ಬಾಲ್ಯ ಕಳೆದು ಯೌವ್ವನ ಮಾಗಿದಂತೆ ಮುಪ್ಪು ಮೆಲ್ಲಗೆ ಅಡಿಯಿಡುವುದಂತೆ ಮುಪ್ಪಿನ ಕಲ್ಪನೆಯೇ ಭೀಕರ ಊರಿಗೆ ದೂರ ಸಾವಿಗೆ ಹತ್ತಿರ ರಾಜ ಮಹಾರಾಜ ಜಗದೇಕಸುಂದರಿ ಪಕ್ಷಪಾತವಿಲ್ಲ...

ಧರ್ಮರಾಯ, ನೀನು ನಡೆದದ್ದು ಧರ್ಮದ ಹಾದಿಯಲ್ಲಿ ಎಲ್ಲ ಹೊಗಳುತ್ತಾರೆ ನಿನ್ನನ್ನು. ಆದರೆ ದ್ರೌಪದಿಗೆ ನೀನು ಮಾಡಿದ್ದು ಮೋಸ? ಅರ್ಜುನ ಜಯಸಿ ತಂದವಳ ಅವನಿಗೇ ಬಿಡದೆ ತಾಯಿ ಅರಿವಿಲ್ಲದೇ ಆಡಿದ ಮಾತಿನ ನೆವದಿಂದ ಐವರ ಪತ್ನಿಯಾಗಿಸಿದೆ- ಅವಳ ಕನಸುಗಳ ಒಡೆ...

ಬಂದಾಗ ಯೌವ್ವನದ ಮತ್ತು ಮುಗ್ಧತೆ ಸ್ವಾತಂತ್ರ್ಯಕ್ಕೆ ಕಲ್ಲು ಬಿತ್ತು ನೋಡುವ ನೋಟಕೆ ಆಡುವ ಮಾತಿಗೆ ಅಂಕೆ ಹೊಸ್ತಿಲು ದಾಟದಂತೆ ಸೀಮಾರೇಖೆ ಹುಡುಗಾಟಕೆ ಹೊರನೋಟಕೆ ಹಾಕಿದರು ದೊಡ್ಡ ಪರದೆ ಪ್ರಾರಂಭ ತಪ್ಪು ಒಪ್ಪುಗಳ ತಗಾದೆ ಅತ್ತ ಹೋಗದಿರು ಇತ್ತ ನಿಲ್...

ಜಗದ ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಇಲ್ಲಿಗೆ ಯಾರೂ ಬರಬಹುದು ಇಲ್ಲಿಂದ ಯಾರೂ ಹೋಗಬಹುದು ಇಲ್ಲಿ ಏನೂ ನಡೆಯಬಹುದು ಕಾವಲುಗಾರ ನಿದ್ರಿಸಿದ್ದಾನೆ- ಕುಂಭಕರ್ಣನಂತೆ! ಕನ್ನ ಹಾಕಬಹುದು, ಎಲ್ಲ ದೋಚಬಹುದು ಕೊಚ್ಚಿ ಹಾಕಬಹುದು ದಂಗೆ ಎಬ್ಬಿ...

12345...14

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...