
ಸ್ವಪ್ನರಾಜ್ಯದ ಭಾವದೋಜೆಯ ನಡುವೆ ನಡೆದೆನು ತೆಪ್ಪಗೆ, ಮನೋಭೂಮಿಯನುತ್ತು ಅಗಿಯಿತು ತೇಜಪೂರಿತ ಘಟನೆಯು! ಮೆತ್ತಗಾಸಿದ ತಲ್ಪತಳವೇ ನನ್ನ ಯಾತ್ರೆಯ ಭೂಮಿಯು!! ಮೇಲೆ ಭಾನುವು ಬಿಳಿಯ ಮುಗಿಲು ಕೆಳಗೆ ಕೊರಕಲು ದಾರಿಯು; ಹಾದು ನಡೆದೆನು ಏಳುಬೀಳುತ ಏರಿದೆ...
ಯಾರ ಕಂಡು ಹೆದರಿ ಓಡುವೆ? ಯಾರ ಹಿಡಿಯಲು ಸರ್‍ರ ಸಾಗುವೆ? ಒಂದೆ ದಾರಿಯೊಳೆಂದು ನಡೆಯುವೆ- ಎಲ್ಲಿ ನಿಲ್ಲುವಿ ಹೇಳೆಲೊ? ಬೆಟ್ಟು ಅಗಲದ ದಾರಿ ಮಧ್ಯದಿ ಕಡಿದ ಬಯಲಿನ ಹೊಂಡ ನಡುವಲಿ ಕಂಡ ಕಂಡ ತಗ್ಗು ತಳದಲಿ- ಎಲ್ಲಿ ಮುಂದಕೆ ಹರಿಯುವೇ? ಹನಿಯ ಜಿನುಗಿಸಿ...
ಕನ್ನಡದ ತಿಳಿನೀರ ನಾನೊಂದು ಬೊಗಸೆಯಲಿ ಕುಡಿದು ನೋಡಿದೆನದರ ಸವಿಯನ್ನು ನಾನೊ; ಕುಡಿಕುಡಿದು ಮುದವಾಂತು ನಲ್ಗಬ್ಬ ಸಾರವನು ಬಾಯ್ದುದಿಯೊಳನವರತ ಇರಿಸಲೆಳಸಿದೆನೊ! ಎಷ್ಟು ತತ್ವದ ಗೀತ? ಎಷ್ಟು ಮೋಹದ ಮಾತು? ವಚನರಾಶಿಯ ಸಾರ, ಪುರಾಣಗಳ ಮೇಳ! ಗದ್ಯ ಪದ್...
ಕಂಡೆನೊ ನಾ! ಬೇವಿನ ಜೀವದ ಈ-ಬಾ-ಳು!! ಈ ಲೋಕ ಈ ರಾಜ್ಯ ಈ ಊರು ಈ ಮನೆ ಕಾಲಾನುಕ್ರಮದಲ್ಲಿ ಜನರಾಶಿ ಒಂದಾಗಿ, ಬಲ್ಲಿದ ಬಡವನ ಶತಕೋಟಿ ಸಂಸಾರ- ||ಕಂ|| ಸಾಗರ-ಭೂಮಿಯ ನಡೆ ಕಂಡು ಮೊರೆವುದೊ, ಯೋಗ ತಾರಕೆಗಳು ಮಿಣುಮಿಣುಕಿ ನಗುವುದೊ; ಆಗದೀ ಜನಭಾರ ಕಲ್...
ನರ್ತಕಿ ಬಂದಳು ಛಲ್‌ಝಲ್ ನಾದದಿ ಠಮ ಢಮ ತಾಳಕೆ ಕುಣಿಯುತ್ತ ಪಾತರಗಿತ್ತಿಯ ಆ ಕುಣಿತ. ಪಾರ್ಥ ಸುಭದ್ರೆಯ ರಾಧಾಕೃಷ್ಣರ- ನೊಬ್ಬಳೆ ತಾನೆಂದೆಣಿಸುತ್ತ ರಂಗಸ್ಥಳದಲಿ ತಿರುಗುತ್ತ. ತುಟಿಯಿಂದುರುಳುವ ಹಾಡಿನ ತನಿರಸ ಮೌಕ್ತಿಕ ಮಣಿಯಂತುರುಳುವುದು; ತಾಳದ ಓ...













