
ರಕ್ತಗಂಪಿನ ಎಸಳುಗಳು ಈ ಕವಿತೆಯ ಸಾಲುಗಳು ಭೂತದ ಕೊಂಡಿ ಕಳಚದೇ ವರ್ತಮಾನದ ಕಾವಲಿಯಲಿ ಬೇಯಲಾರವು ಭವಿಷ್ಯ ಕಾಣಲಾರವು ಹೊಂಗನಸಿನ ಬಯಕೆಯೇ ಇಲ್ಲ ಇವುಗಳಿಗೆ ಕುಳಿತಿವೆ ಕತ್ತಲಿನೊಳಗೆ ಎಳೆದು ತರ ಬೇಕು ಬೆಳಕಿಗೆ ತೆರೆದುಕೊಳ್ಳಲಿರುವ ಹೊಸ ಬದುಕಿಗೆ ***...
ಕವಿತೆಯೆಂದರೇ ವಿಸ್ಮಯ ಎಂದರು ಕೆಲವರು ಈ ಬದುಕು ಅದಕ್ಕಿಂತ ವಿಸ್ಮಯ ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ಒಂದು ಪದವೋ ವಾಕ್ಯವೋ ಕೈ ಹಿಡಿದರೆ ಮಾತು ಬೆಳಕಾದರೆ ಒಂದು ಕವಿತೆ ಈ ಬದುಕೋ ಕ್ಷಣ ಬಿಡದಂತೆ ಕೈ ಹಿಡಿದು ದರದರ ಎಳೆದು ಆಕಾಶಕ್ಕೋ ಪಾತಾಳಕ್ಕೋ ಎಸೆ...














