ಈ ಭೂಮಿಗೆ ಚಿಗುರೊಡೆಯುವಾಸೆ
ಭೂಕಂಪ ಕೊರೆದ ಬಿರುಕುಗಳಲ್ಲಿ
ಹಸಿರರಳಿಸುವಾಸೆ
ಸುನಾಮಿ ಕೊರೆದ ತೀರಗಳಲ್ಲಿ
ಮರವಾಗುವಾಸೆ
ಮತ್ತೆ ಮತ್ತೆ ಸೆಪ್ಟೆಂಬರುಗಳು ಬಂದರೂ
ವಿಮಾನಗಳು ಢಿಕ್ಕಿ ಹೊಡೆದರೂ
ಗಗನವ ಚುಂಬಿಸುವಾಸೆ
ಮತ್ತೆ ಮತ್ತೆ ಕಟ್ಟುವಾಸೆ
ನಿಲ್ಲದ ಬೆಳವಣಿಗೆಗೆ ಎಲ್ಲಿದೆ ಎಲ್ಲೆ
ಇಲ್ಲವೆಂದವರೂ ಈ ಚಿಗುರುವ
ಹಸಿರ ನೆರಳಲ್ಲೇ ಕಾಲ ಕಳೆಯಲು
ಕೂರುತ್ತಾರಲ್ಲಾ ಅದೇ ಅಚ್ಚರಿ.
*****