ಇದನ್ನೆಲ್ಲ ಕಂಡು ಸಾಯುವುದೆ ಮೇಲೆನಿಸುವುದು !
ದಟ್ಟ ದಾರಿದ್ರ್ಯದಲಿ ಪ್ರತಿಭೆ ಕಣ್ತೆರೆಯುವುದು,
ಹುಟ್ಬುಮುಟ್ಠಾಳ ಏಳಿಗೆ ಪಡೆದು ಮೆರೆಯುವುದು,
ಪರಿಶುದ್ಧ ನಿಷ್ಠೆ ವಂಚನೆಗೆ ಬಲಿಹೋಗುವುದು,
ಮಾನಕ್ಕೆ ಮರ್‍ಯಾದೆ ಕೊಡದ ನಿರ್ಲಜ್ಜನಡೆ,
ಮುಗ್ಧ ಶೀಲಕ್ಕೆ ವಸ್ತ್ರಾಪಹರಣದ ಬೆಲೆ,
ಮುಗ್ಗರಿಸುವಂತೆ ಪರಿಪೂರ್ಣತೆಗೆ ತೊಡಕು ತಡೆ,
ಸಿಂಹಸಾಹಸವ ಕುಂಟಾಗಿಸುವ ನರಿಯ ಕಲೆ,
ಕಲೆಯ ನಾಲಿಗೆಯನ್ನೆ ಕಟ್ಟಿರುವ ಅಧಿಕಾರ,
ಬುದ್ಧಿ ಕೌಶಲ್ಯಕ್ಕೆ ಪೆದ್ದರ ನಿಯಂತ್ರಣ,
ಸರಳ ಸತ್ಯಕ್ಕೆ ಸಾಮಾನ್ಯತೆಯ ಸತ್ಕಾರ,
ಶ್ರೇಷ್ಠೆತೆಗೆ ಕೀಳು ನೀಚರ ಸೇವೆ ಬಹುಮಾನ :
ಸಾಗುವುದೆ ಲೇಸೆನಿಸುವುದು ನೋಡಿ ಇದನೆಲ್ಲ
ಅದರೆನ್ನೊಲವ ಏಕಾಕಿ ಬಿಡಬೇಕಲ್ಲ !
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 66
Tired with all these, for restful death I cry