ರಕ್ತಗಂಪಿನ ಎಸಳುಗಳು
ಈ ಕವಿತೆಯ ಸಾಲುಗಳು
ಭೂತದ ಕೊಂಡಿ ಕಳಚದೇ
ವರ್ತಮಾನದ ಕಾವಲಿಯಲಿ
ಬೇಯಲಾರವು ಭವಿಷ್ಯ
ಕಾಣಲಾರವು
ಹೊಂಗನಸಿನ ಬಯಕೆಯೇ
ಇಲ್ಲ ಇವುಗಳಿಗೆ ಕುಳಿತಿವೆ
ಕತ್ತಲಿನೊಳಗೆ ಎಳೆದು ತರ
ಬೇಕು ಬೆಳಕಿಗೆ
ತೆರೆದುಕೊಳ್ಳಲಿರುವ ಹೊಸ
ಬದುಕಿಗೆ
*****