ಕಮಲಾ ಮೇಡಂಗೆ

ಅಮ್ಮಾ ಕ್ಷಮಿಸಿ ಅಕ್ಕಾ ಕ್ಷಮಿಸಿ ದುಡುಕಿದೆವು ಸಡಗರದಿ ದುಡುಕಿದೆವು ಸಂಭ್ರಮದಿ ಎಲ್ಲರಿಗೂ ಬರೆದ ಪತ್ರದ ಓಲೆ ಸೇರಿಬಿಟ್ಟಿತು ನಿಮಗೂ ಅದರ ಒಂದೆಲೆ. ಪರಿಹಾರವ ಕಾಣಲೆಂದೇ ಬರಲಿರುವೆವು ಮನೆಗೆ ಕಾದಿದೆ ಮನಸು ಊಟದ ತಟ್ಟೆಗೆ ಜೊತೆಯಲಿ...

ಸಿಜಿಕೆ

ಕುಂಟೋಬಿಲ್ಲೆ ಆಡುತ್ತಿದ್ದಾಗ ಬಾಲ್ಯದಲ್ಲಿ ಕುಂಟುವುದೆಂ ದರೇನೆಂದೇ ತಿಳಿಯದು ಬಡಿಯಿತಂತೆ ಬಾಲ್ಯದಲ್ಲೇ ಪೋಲಿಯೋ ಬೆಳೆಯಬೇಕಿದ್ದ ಕಾಲು ಕುಂಟಿತು - ಕಲ್ಪನಾ ಶಕ್ತಿ ಗರಿಗೆದರಿತು ಬಾಗಿಲೊಂದು ಹಾಕಿಕೊಂಡಾಗ ಇನ್ನೊಂದು ತೆರೆಯಿತು. ನಮ್ಮ ಸಿಜಿಕೆ ನಮಗೆ ದಕ್ಕಿದರು. ಇದಲ್ಲವೇ...

ಇದು

ಇಂಚಿಂಚೇ ಪ್ರತ್ಯಕ್ಷವಾಗುವ ಇದು ಇನ್ನೂ ಐದು ವರ್ಷ ಅಥವಾ ಆರೋ? ಇವತ್ತೇ ಏಕೆ ವಿಕಾರ ಮುಖ ದರ್ಶನ? ಬರುವ ವರಸೆಗೋ ಆಹಾ ಜೀವ ತಲ್ಲಣ ಪಕ್ಕ ಕುಳಿತು ತಲೆಸವರಿ ಮುತ್ತಿಟ್ಟು ಮೈ ಮರೆಸಿದ ದೇಹವೇ...

ತಂಪು

ತಂಪಾದವೊ ಎಲ್ಲ ತಂಪಾದವೋ ಮುದುರಿದ್ದ ಮೈ ಮನಸು ಕೆದರಿದ್ದ ಕೆಟ್ಟ ಕನಸು ಒಂದೂನೂ ಬಿಡದಾಂಗ ತಂಪಾದವೋ ಲಂಕೇಶರನ್ನು ಅನುಕರಿಸಿದ್ದು ಸಾಕು, ಮುಂದೆ ಅರಿವಿರಲಿಲ್ಲ ಕಾವು ಇನ್ನೂ ಇದೆ ಎಂದು ಬಯಕೆ ಅರಿಯೇ ಇಲ್ಲ ಎಂದು...

ಚಿಂತೆ

ನನ್ನ ನಿದ್ದೆಗಳನ್ನು ಕದ್ದವರು ನೀವು ಸಾಲಾಗಿ ನಿಲ್ಲಿಸಿ ನಿಮ್ಮನ್ನು ಶಿಕ್ಷೆ ಕೊಡಬೇಕೆನ್ನಿಸುತ್ತಿದೆ ಆದರೆ ನೀವು ಗಾಳಿಗಳು ಬೆಂಕಿಗಳು ಭೂಮಿ ಆಕಾಶಗಳು, ನೀವು ಮೈಗಳು ಮನಸ್ಸುಗಳು ಬುದ್ಧಿ ಗಳು ಹೃದಯಗಳು ಇಂಥ ಸಂಕೀರ್ಣತೆಗೆ ಶಿಕ್ಷೆ ಹೇಗೆ...

ಹೂ

ಇದೊಂದು ಬಗೆಯ ಹೂ ಮುಟ್ಟುವಂತಿಲ್ಲ ಮೂಸುವಂತಿಲ್ಲ ನೋಡಿ ಅನಂದಿಸು ಪಕಳೆ ಎಣಿಸಬೇಡ ದಳವ ದಣಿಸಬೇಡ ದಳ ದಳವಾಗಿ ಉದುರುವ ವರೆಗೆ ಕಾದರೆ ಅಂತ ರಾಳದಲ್ಲೇನಿದೆಯೋ ನೋಡಬಹುದು, ಅಲ್ಲಿಯವರೆಗೆ ಕಾಯಬೇಕು. *****

ಮಿಗಿಲು

ಇದು ಎಲ್ಲರಿಗೂ ಸಾಧ್ಯ ವಿಲ್ಲ ಬಿಡಿ, ಹೀಗೆ ಸುಮ್ಮನೆ ನೋಡಿ ನೋಡಿ ಹೋಗುವುದು ಆದರೂ ಮೋಡಿ ಹಾಕುವುದು ಏನೂ ಸಿಗುವುದಿಲ್ಲವೆಂದು ತಿಳಿದೂ ಇಂಥವರಿಗೆ ಅಂಜಿ ಬಾಳುವು ದಿದೆಯಲ್ಲಾ ಅದರಲ್ಲೊಂಥರಾ ರೋಮಾಂಚನ, ಒಂಥರಾ ಧಿಗಿಲು ಆದರೂ...

ಇವರು

ಕೃಷ್ಣನ ಕತೆಯನ್ನು ನಂಬದೇ ಇರುವವರಿಗೂ ನಂಬುವಂತೆ ಮಾಡುವ ಕೆಲವರಿ ರುತ್ತಾರೆ, ಇವರು ಪದ್ಮ ಪತ್ರ ಮಿವಾಂಭಸ, ತಾವರೆ ಎಲೆಯ ಮೇಲಿನ ನೀರು, ಅಂಟಿಯೂ ಅಂಟ ದಿರುವ ಇವರು ಹಿಡಿಯಲೂ ಬಲ್ಲರು ಬಿಡಲೂ ಬಲ್ಲರು, ಎಲ್ಲರೂ...

ಕವಿತೆ

ಬರೆದೂ ಬರೆದೂ ಸಾಕಾಯಿ ತಪ್ಪ ಈ ಪದ್ಯ ಇವುಗಳದು ಮುಗಿಯದ ತಂಟೆ ಒಂದಷ್ಟು ಹೊತ್ತು ಒಂದೊಂದು ರೂಪು, ಇವುಗಳ ಕೈಯೋ ಕಾಲೋ ಮುಖವೋ ಯಾವುದೂ ತಿಳಿಯುವುದು ಕಷ್ಟ ಆದರೂ ಇರಲಿ ಒಂದು ಅಂಗಿ ಪಾಪ...