ಶಾಂತ ರಸವನ್ನು ರಸವೇ ಅಲ್ಲ
ಅಂದರಂತೆ ಕೆಲ ಮೀಮಾಂಸಕರು
ರಸಗಳಲ್ಲಿ ಶಾಂತರಸವೇ ಶ್ರೇಷ್ಠ ಅಂದರು
ಅಭಿನವಗುಪ್ತ ಆನಂದ ವರ್ಧನರು
ಶಾಂತ ರಸ ಅನ್ನಿ
ಶಾಂತಿಯ ಅರಸ ಅನ್ನಿ
ಏನೆಂದರೂ ಅದೇ ಮಂದಸ್ಮಿತ
ಹಸನ್ಮುಖ ಹುಡುಕು ನೋಟ
ಚುರುಕು ನಡಿಗೆ
ಹೈದರಾಬಾದಿನ ಬಾಡಿದ ಮಾವಿನ
ಮರಕ್ಕೆ ಬೆಂಗಳೂರಿನ ಮಲ್ಲಗೆ ಬಳ್ಳಿ
ಯನ್ನು ಹದವಾಗಿ ಹಚ್ಚಿಸಿ
ಮೊಗ್ಗನ್ನು ಹೂವಾಗಿ ಅರಳಿಸಿ
ತಾವೇ ಹೂವಾಗಿ ಹೋದರು
ಘಮ ಘಮವಾಗಿ ಉಳಿದರು.
*****