ತಂಪಾದವೊ ಎಲ್ಲ ತಂಪಾದವೋ
ಮುದುರಿದ್ದ ಮೈ ಮನಸು
ಕೆದರಿದ್ದ ಕೆಟ್ಟ ಕನಸು
ಒಂದೂನೂ ಬಿಡದಾಂಗ ತಂಪಾದವೋ
ಲಂಕೇಶರನ್ನು ಅನುಕರಿಸಿದ್ದು ಸಾಕು, ಮುಂದೆ
ಅರಿವಿರಲಿಲ್ಲ ಕಾವು ಇನ್ನೂ ಇದೆ ಎಂದು
ಬಯಕೆ ಅರಿಯೇ ಇಲ್ಲ ಎಂದು
ತಿಳಿದೇ ಇರಲಿಲ್ಲ ನೀನಿಷ್ಟು ಚೆನ್ನ ಎಂದು
ಅದಮ್ಯ ಅದು ಎಂದು, ಬೇಕಾಗಿತ್ತೆಂದು.
ಎಲ್ಲ ತಿಳಿಯಿತು ಇಂದು, ಒಳಗೆ
ಬೇಯುತ್ತಿದ್ದ ಬಿಸಿಗಳು ತಂಪಾದವು
ಒಂದು ಗಳಿಗೆ ಬೆರಗಾದೆ, ಚಿಗಿದೆ,
ಸಂತಸ, ಅಂತೂ ಇರುವೆ ನೀ ನನಗೆ.
*****