Home / ಸಣ್ಣಕತೆ

Browsing Tag: ಸಣ್ಣಕತೆ

ಮೌನ…. ಸ್ಮಶಾನ ಮೌನ….. ಮೌನದ ಭೀಕರತೆಯ ಅರಿವಾಗುವುದು ಅದರ ಹಿಂದಿನ ಭೀಕರ ಗದ್ದಲದ ಪ್ರಚಂಡತೆಯ ಪ್ರಖರತೆಯಿಂದ ಮಾತ್ರವಂತೆ. ಶಕ್ತಿ ಪ್ರವಹಿಸುವುದು ಬಂದೂಕಿನ ನಳಿಕೆಯ ಮೂಲಕವಂತೆ…. ಯಾರು ಹಾಗೆಂದವರು? ಮಾವೋನೋ ಲೆನಿನನೋ? ಕ್ಷಣ...

ಬರಗಾಲ ಬಂತೆಂದು ರೈತ ಬಳಲಿ ಬೆಂಡಾಗಿ ಸಾಯುವುದಿಲ್ಲ; ಆದರೆ ಪರಿಸ್ಥಿತಿಗಳು ಸಾಯುವಂತೆ ಮಾಡಬಹುದು ಅಥವಾ ಅಸ್ಥಿಪಂಜರದ ಮೇಲೊಂದು ರಕ್ತ ಹಿಂಡಿ ಒಣಗಿಸಿದಂತಿರುವ ಕರಿಯ ನಿರ್ಜೀವ ತೊಗಲನ್ನೊತ್ತು, ಮೈ ಸುಡುವ ಸೂರ್ಯನನ್ನು, ‘ಬಾರೋ ಅಸಮಬಲ ಪರಾಕ್...

ಶ್ರಾವಣ ಮಾಸದ ಶನಿವಾರ, ಶನೇಶ್ವರ ದೇವರ ಅರ್‍ಚಕನಾದ ನಾನು ದಿನ ಪೂಜೆಗೆ ಹೋಗುವ ಸಮಯಕ್ಕೆ ಮೊದಲು ದೇವಸ್ಥಾನಕ್ಕೆ ಹೊರಟಿದ್ದೆ. ಮಾಮೂಲಿ ಶನಿವಾರಗಳು ದೇವಸ್ಥಾನದಲ್ಲಿ ಜನರಿಂದ ಗಿಜಿಗುಡುತ್ತಾ ಇದ್ದ ದೇವಸ್ಥಾನದಲ್ಲಿ ಇನ್ನೂ ಶ್ರಾವಣ ಶನಿವಾರಗಳು ಬಂತೆ...

ಮಗಳ ತಲೆಯ ಕೂದಲನ್ನು ಇಬ್ಭಾಗ ಮಾಡುತ್ತಾ, ಹೇನು ಹುಡುಕುತ್ತಾ, ಅದು ಸಿಕ್ಕಾಗ ಎರಡು ಹೆಬ್ಬೆರಳುಗಳ ಉಗುರಿನಿಂದ ಕುಕ್ಕುತ್ತಾ, ಅದು ಚೆಟ್ ಎನ್ನುವುದು ಕೇಳಿಸದಿರಲಿ ಎಂದೂ ಅಥವಾ ಅದಕ್ಕೆ ಪೂರಕವಾದ ಪಕ್ಕವಾದ್ಯದಂತೆಯೇ ಬಾಯಲ್ಲಿ ‘ಯೂಸೂ’...

ಕರಿಯಪ್ಪಗೌಡ-ಡಾಕ್ಟರ್ ಕರಿಯಪ್ಪಗೌಡ ಬಡತನದಲ್ಲಿ ಬೆಳೆದ. ತಾಯಿ ಮುದುಕಿ, ಗಂಡನನ್ನು ಕಳೆದುಕೊಂಡ ಅನಾಥೆ, ಹೇಗೋ ಹುಡುಗ ಓದಿದ; ಡಾಕ್ಟರ್ ಆದ. ಸ್ವಂತವಾಗಿ ಗಳಿಸಿ ಶ್ರೀಮಂತನಾಗುತ್ತೇನೆ, ಎಂದು ಔಷಧ ಮತ್ತು ವೈದ್ಯಶಾಲೆಯೊಂದನ್ನು ತೆರೆದ. ಮುಖ ಮಾಟವಾಗ...

ಮಲೆನಾಡ ಹಸಿ ಹಸಿ ಭೀಕರತೆಯೂ ಮತ್ತು ಬಯಲು ಸೀಮೆಯ ಒಣ ಒಣ ಬಯಲೂ ಸಂಕೀರ್ಣಗೊಂಡು ಸೃಷ್ಟಿಯಾಗಿರುವ, ಅತ್ತ ನಗರದ ಸಂಸ್ಕೃತಿಯನ್ನೂ ಇತ್ತ ಹಳ್ಳಿಯ ನೇರ ನಿಷ್ಠುರ ಸತ್ಯಗಳನ್ನೂ ಹೊಂದಿರದ ವಿಕೃತ ಜನರಿರುವ ಈ ಮಂಡಲಿಗೆ ದೇಶಕ್ಕೆಲ್ಲಾ ಬಂದಂತೇ ಯುಗಾದಿಯು ಬ...

ನನಗೆ ಆಗ ವಯಸ್ಸು ಇಪ್ಪತ್ತೆರಡು, ಹೆಣ್ಣು ಮಕ್ಕಳ ಕಾಲೇಜದಲ್ಲಿ ಬಿ.ಎ. ಕ್ಲಾಸದಲ್ಲಿದ್ದೆ. ಕಾಲೇಜಕ್ಕೆ ಒಂದು ವಸತಿಗ್ರಹವಿತ್ತು. ಅಲ್ಲಿ ನಾನಿದ್ದೆನು. ನನ್ನ ಸ್ವಭಾವ “ವಿಲಕ್ಷಣ” ಎನ್ನುವರು. ಅದಕ್ಕಂತಲೇ ಏನೋ ವಸತಿಗ್ರಹದಲ್ಲಿದ್ದರೂ ...

ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆವರೆಗೂ ಎಡಬಿಡದೆ ಸ್ಟಾಂಡ್‌ಗೆ ಮೊಳೆಯಿಂದ ಬಂಧಿಸಲ್ಪಟ್ಟಿದ್ದ ಕ್ಯಾನ್ವಾಸಿನ ಮೇಲೆ, ಬಣ್ಣದ ಡಬ್ಬಿಯಲ್ಲಿ ಕುಂಚವನ್ನು ಅದ್ದಿ ಅದ್ದಿ ಒಂದೇ ರೀತಿಯಲ್ಲಿ ಕೈ ಹಿಡಿದಿದ್ದರಿಂದ ಯಕ್ಷಿರದಲ್ಲಿ ಹೊಡೆತ ಬಂದಿತ್ತು. ನೋಡಿ ...

“ಅಲ್ಕಾ ಮುಂಡೇ…. ಅಂಗ್ಯಾಗಿದ್ದಿದ್ ಒಂದ್ ರೂಪಾಯ್ನೇನೇ ಮಾಡ್ದೇ?” ಪ್ರತಿದಿನದ ಮಾಮೂಲಿ ಉವಾಚಗಳಲ್ಲಿ ಇದು ಕಡಿಮೆ ಶಕ್ತಿಯದು. ಇಂತಹ ಬೈಗುಳಗಳನ್ನು ಆಕೆ ಎಂದೂ ತಲೆಗೆ ಹಾಕಿಕೊಂಡವಳೇ ಅಲ್ಲ, ಮೇಲಾಗಿ ಅವು ‘ಬೈಗುಳ’ಗಳು ಎ...

ಪ್ರತಿ ದಿನವೂ ಒಬ್ಬೊಬ್ಬ ಹೊಸ ಸೂರ್ಯ ಉದಯಿಸುತ್ತಲೇ ಇರುತ್ತಾನೆ. ನಾನೂ ನಿರೀಕ್ಷಿಸುತ್ತಲೇ ಇದ್ದೇನೆ – ಯಾವನಾದರೊಬ್ಬ ಹೊಸ ಸೂರ್ಯ ನನ್ನ ಬದುಕನ್ನು ಹೊಸದಾಗಿಸಿಯಾನೆಂದು. ಇಂದೂ ಸಹ ಇನ್ನೊಬ್ಬ ಸೂರ್ಯ ಪೂರ್ವದಿಂದ ಕೆಂಬಣ್ಣದ ಪರದೆಯ ಮುಂದೆ ಪ...

12345...26

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....