ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ ಮೇಲೆತ್ತಿ ಆ ಊರಿನ ಮೇಲೆ ಕಣ್ಣಾಡಿಸಿದ, ಅವನಿಗೆ ಆಶ್ಚರ್ಯ ಕಾದಿತ್ತು. ಇದು ನನ್ನ ಹುಟ್ಟೂರೇ ಎಂಬ ಸಂಶಯ ಅವನನ್ನು ಕಾಡತೊಡಗಿತು. ಸುಮಾರು ಐವತ್ತು ವರ್ಷದ ನಂತರ ಅವನು […]
ಒಮ್ಮೊಮ್ಮೆ ಕಲ್ಪನೆಗಿಂತಲೂ ನಿಜವು ಆಶ್ಚರ್ಯಕರವಾಗಿರುತ್ತದೆ. ಕೆಲವು ವೇಳೆ ಕಟ್ಟುಕತೆಯೋ ಎನ್ನುವಷ್ಟು ಸ್ವಾಭಾವಿಕವೂ ಆಗಿರುತ್ತದೆ. ಈಗ ನಾನು ಹೇಳುವ ವಿಷಯವೂ ಆ ಜಾತಿಗೆ ಸೇರಿದ್ದು. ಕೇಳಿದವರು ಇದು ಖಂಡಿತ ನನ್ನ ಕಲ್ಪನೆಯ ಪರಿಣಾಮವೆಂದು ಹೇಳದಿರಲಾರರು. ಅದಕೋಸ್ಕರವಾಗಿಯೇ ಈ ವಿಷಯಕ್ಕೆ ಸಂಬಂಧಪಟ್ಟ ಪತ್ರಿಕೆಗಳನ್ನೆಲ್ಲ ನಾನು ಜೋಪಾನವಾಗಿಟ್ಟಿರುವುದು. ಯಾರಿಗೆ ಸಂಶಯವಿದೆಯೋ ಅವರು ಬಂದು ಇವುಗಳನ್ನು ಪರೀಕ್ಷಿಸಬಹುದು. ಆಗ ನಿಜವಾಗಿಯೂ ‘ಸತ್ಯವು […]
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ. *****
ಈಚೀಚೆಗೆ ನಮ್ಮ ಹಳ್ಳಿಗಳಲ್ಲಿ ಜೂಜು, ಕಳವು, ಕೋಳಿ ಕಾಳಗ, ಕೊಲೆ, ಸುಲಿಗೆ, ದರೋಡೆ, ಹಾದರ, ಜಗಳ ಮುಂತಾದ ಸಂಪ್ರದಾಯಗಳು ತಮ್ಮ ಕಲಾವಂತಿಕೆಯನ್ನು ಕಳೆದುಕೊಂಡು ಬರೇ ಕ್ರಿಯೆಗಳಾಗಿ ಉಳಿದುಬಿಟ್ಟಿವೆ. ಹಿಂದಿನವರು ಮನರಂಜನೆಯ ದೃಷ್ಟಿಯಿಂದ ಕೋಳಿ ಕಾಳಗ, ಬೇಟೆ ಮುಂತಾದ ವಿನೋದಗಳಲ್ಲಿ ಭಾಗವಹಿಸ್ತುತ್ತಿದ್ದರೆ ಇಂದಿನವರಿಗೆ ಮಾಂಸದಲ್ಲಷ್ಟೇ ಕಣ್ಣು – ಇದು ಅಧಃಪತನದ ಮಿತಿ. ಇಂಥ ಸಂಪ್ರದಾಯಗಳಲ್ಲೊಂದಾದ ಫೈಟಿಂಗನ್ನು ಊರ್ಜಿತಗೊಳಿಸಿ, […]
ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ ಕಾರ್ಯಕ್ರಮಗಳಲ್ಲ ಚೆನ್ನಾಗಿ ನೆರವೇರಬೇಕೆಂದು ಮಾಧ್ಯಮಿಕ ಪಾಠಶಾಲೆಯ ಮುಖ್ಯೋಪಾಧ್ಯಾಯರ ಮತ್ತು ಸಹಾಯೋಪಾಧ್ಯಾಯರ ನೆರವನ್ನು ಪಡೆದುಕೊಂಡಿದ್ದನು. ಜೊತೆಗೆ ಕೆಲವು ದೊಡ್ಡ ಪ್ರಾಥಮಿಕ ಪಾಠಶಾಲೆಗಳ ಅನುಭವಿಗಳೂ ದಕ್ಷರೂ ಆದ ಮುಖ್ಯೋಪಾಧ್ಯಾಯರನ್ನೂ ಸಹಾಯೋಪಾಧ್ಯಾಯರನ್ನೂ […]
ಕಂಪ್ಯೂಟರು ಮೂಲಕ ನಿಮ್ಮ ಧಾರ್ಮಿಕ ಸಮಸ್ಯೆಗಳಿಗೆ ಅಷ್ಟಮಂಗಲ ಪ್ರಶ್ನೆ ಹಾಕಿ ನಾವು ಪರಿಹಾರ ಸೂಚಿಸುತ್ತೇವೆ. ನಮ್ಮ ವೆಬ್ಸೈಟ್: www cnnglobal computerasthamangala dot comಎಂಬ ಜಾಹೀರಾತೊಂದು ವೃತ್ತ ಪತ್ರಿಕೆಗಳಲ್ಲಿ ಕಾಣಿಸಿಕೊಂಡದ್ದೇ ಕಪಿಲಳ್ಳಿಗೆ ಕಪಿಲಳ್ಳಿಯೇ ಎದ್ದು ಕೂತು ಅನಾದಿ ಅನಂತ ಚರ್ಚೆಯಲ್ಲಿ ತನ್ನನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡು ಬಿಟ್ಟಿತು. ಕಪಿಲಳ್ಳಿಯ ಏಕಮಾತ್ರ ಸಂರಕ್ಷಕ ಕಪಿಲೇಶ್ವರನ ಸುತ್ತು ಗೋಪುರ […]
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ ಕೆಳಗೆ ಗೃಹಪ್ರವೇಶ ಮಾಡಿ ಗೌರಮ್ಮ ಶಿವಪ್ಪನವರು ತಮ್ಮ ಭಾವಮೈದುನ ಬಾಲು ಜೊತ ಆ ಮನೆಯಲ್ಲಿ ವಾಸಿಸುತ್ತಿದ್ದರು. ಕಳ್ಳ ಕಾಕರ ಭಯವಿದ್ದರೂ ಬಾಳು ಇಷ್ಟರವರೆಗೆ ನಿರಾತಂಕವಾಗಿಯೇ ಸಾಗಿತ್ತು. ಇಂದು […]
ಮನುಷ್ಯನ ಪಾದ ಮರಳಲ್ಲಿ ಹುದುಗುತ್ತ ಯಾವುದೋ ಪ್ರಾಣಿಯ ಗೊರಸೋ ಅನ್ನುವ ಹಾಗೆ ಆಕಾರವಿರದ ಗುರುತನ್ನು ಉಳಿಸುತಿತ್ತು. ಕಲ್ಲು ಬಂಡೆಗಳನ್ನು ಏರುತಿತ್ತು, ಕಡಿದಾದ ಏರು ಸಿಕ್ಕಾಗ ಒಂದಿಷ್ಟು ಜಾಗದಲ್ಲಿ ಬಲವಾಗಿ ಊರಿ, ಮೇಲೆ ಹತ್ತಿ, ದಿಗಂತದಲ್ಲಿ ದೃಷ್ಟಿ ನೆಟ್ಟು ಸಾಗುತಿತ್ತು. ಅವನನ್ನು ಹಿಂಬಾಲಿಸುತಿದ್ದವನು ಅಂದ- ‘ಚಪ್ಪಟೆ ಪಾದ. ಒಂದು ಬೆರಳಿಲ್ಲ. ಎಡಗಾಲಿನ ಹೆಬ್ಬೆರಳು ಇಲ್ಲ. ಅಂಥಾವರು ಬಹಳ […]
-೧- ಅಣ್ಣ, ನಾನು ಬರೆದ ಹಿಂದಿನ ಕಾಗದವು ನಿನಗೆ ತಲಪಿರಬಹುದು, ಅದಕ್ಕೆ ನೀನು ಪ್ರತ್ಯುತ್ತರವನ್ನು ಬರೆಯುವ ಮೊದಲೇ ಈ ಕಾಗದವನ್ನು ನೋಡಿ ನಿನಗೆ ಆಶ್ಚರ್ಯವಾಗಲೂ ಬಹುದು. ಆಶ್ಚರ್ಯದ ವಿಷಯವೇ ಇರುವುದರಿಂದ ನಿನಗಿದನ್ನು ಬರೆಯುತ್ತಿರುವೆನು. ನಮ್ಮ ಮನೆಗೆ ಪಕ್ಕದ ಮನೆಯಲ್ಲಿದ್ದ ನಾಗೇಶರಾಯರದು ನಿನಗೆ ಗೊತ್ತಿದೆ. ಗೊತ್ತಿದೆ ಎಂದರೆ ನಿನಗವರ ಗುಣಗಳೆಲ್ಲಾ ಗೊತ್ತಿರಲಾರದು, ಈ ಮನಗೆ ನಾವು ಮೊದಲು […]
ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು. ಹತ್ತಿ ಬಿಡಿಸಿ ಮನೆಯಕೋಣೆ ತುಂಬಿದೆ. ಇನ್ನೊಂದು ವಾರದಲ್ಲಿ ಬಟಾರಗಳಲ್ಲಿ ತುಳಿದು, ಚಕ್ಕುಗಳನ್ನು ಗಂಜಿಗೆ ಸಾಗಿಸಬೇಕು. ಹೊಲದಲ್ಲಿ ಜೋಳದ ರಾಶಿ, ಅಳೆಯಲು ಸಿದ್ಧವಾಗಿದೆ. ಮೇಟಿ ಮುಳುಗಿ ಹೋಗುವಂತಹ ದೊಡ್ಡ […]
ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬೀಳುವುದು ಕಷ್ಟ ಎನ್ನುವಷ್ಟು ಮಳೆ. ನೆಲ ಮುಗಿಲುಗಳ ಸಲ್ಲಾಪ ನಿರಂತರ. ಭೂಮಿತಾಯಿ ಹಸಿರು ಸೆರಗು ಹೊದ್ದು ನಗುತ್ತಿರುವಾಗಲೇ ನೆನಪುಗಳು ಸುಗ್ಗಿ. ಮಳೆ ನೀರಿಗೆ ಸಮುದ್ರ ಸೇರುವ ಆತುರ. ಸುರಿವ ಮಳೆಯಲ್ಲೂ ರೇನ್ ಕೋಟ್ ತೊಟ್ಟು ಸಮುದ್ರದ ಆರ್ಭಟ ನೋಡಲು ಕಡಲದಂಡೆಗೆ ಬಂದಾಗಿತ್ತು. ಭೂಭಾಗವನ್ನು ಕ್ಶಣರ್ಧದಲ್ಲಿ ನುಂಗಿ ಹಾಕುವಂತೆ ಬೋರ್ಗರೆವ ಕಡಲ ಅಲೆ. […]